|
ಪ್ರೊ.
ಧೂಮನ ಸಂಶೋಧನೆ
ಒಮ್ಮೆ ಧೂಮ ಪಿಹೆಚ್‌ಡಿ ಮಾಡಬಯಸಿದ. ಇದುವರೆಗೂ ಯಾರೂ ಮಾಡದಂತಹ
ವಿಷಯದಲ್ಲಿ ಪಿಹೆಚ್‌ಡಿ ಮಾಡಬೇಕೆಂದುಕೊಂಡು ಯೋಚಿಸುತ್ತಾ
ಕುಳಿತ್ತಿದ್ದ.
ಟೇಬಲ್ ಮೇಲೆ ಒಂದು ಜಿರಲೆ ಬಂತು. ತಕ್ಷಣ ಜಿರಲೆ ಮೇಲೆ ಒಂದು ಸಂಶೋಧನೆ
ಮಾಡಬೇಕೆಂದು ಫ್ಲ್ಯಾಶ್ ಆಯ್ತು.
ಜಿರಲೆಯನ್ನು ಹಿಡಿದು ಟೇಬಲ್‌ನ ಮಧ್ಯದಲ್ಲಿ ಬಿಟ್ಟು ಹೇಳಿದ:
ಓಡು
ಅಂದ.
ಜಿರಲೆ ಓಡಲು ಶುರು ಮಾಡಿತು.
. . . ಹೀಗೆ ಜಿರಲೆಯ ಒಂದೊಂದೇ ಕಾಲುಗಳನ್ನು ಮುರಿದು ಓಡು
ಎಂದು ಹಲವು ಬಾರಿ ಹೇಳಿದ.
ಜಿರಲೆ ಓಡುತ್ತಿತ್ತು.
ಜಿರಲೆಯ ಕೊನೆಯ ಕಾಲನ್ನು ಮುರಿದು
`ಓಡು
ಎಂದ.ಜಿರಲೆ ಕದಲಲಿಲ್ಲ. ಪುನ: ಹೇಳಿದ `ಓಡು
ಜಿರಲೆ ನಿಂತಲ್ಲೆ ಇದ್ದದ್ದು ನೋಡಿ. ಧೂಮನಿಗೆ ಖುಷಿಯೋ ಖುಷಿ.
ತನ್ನ ಅಧ್ಯಯನ ವರದಿಯಲ್ಲಿ ಧೂಮ ಹೀಗೆ ಬರೆದ:
`ಜಿರಲೆಯ ಎಲ್ಲಾ ಕಾಲನ್ನು ಮುರಿದಾಗ, ಅದಕ್ಕೆ ಕಿವಿ ಕೇಳಿಸುವುದಿಲ್ಲ |