Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 08 December 2006 04:21 PM

ಕ್ರಿಕೇಟ್ ಬಗೆಗಿನ ಕೆಲವು ನುಡಿಗಟ್ಟುಗಳು


ಚೆಂಡು ಎಷ್ಟು ಮೇಲೆ ಹೊಯಿತೆಂದರೆ ಗಗನ ಸಖಿಯನ್ನು ಜೊತೆಗೆ ಕರೆದೊಯ್ಯುವಂತಿತ್ತು.
ವಿಕೆಟ್‌ಗಳು ಗಾಳಿ ಇದ್ದಂತೆ ಯಾವಾಗ ಯಾವ ಕಡೆ ಬೀಸೋತ್ತೆ ಗೊತ್ತಾಗೊಲ್ಲ.
ಮೊಟ್ಟೆ ಒಡೆಯದೆ ಅಮ್ಲೆಟ್ ಮಾಡೊಕೆ ಆಗೊಲ್ಲ.
ದಾಳ ಹಾಕದೆ ಇರುವವನ ಬಳಿ, ಸಿಕ್ಸ್ ಹೊಡೆತದ ನಿರೀಕ್ಷೆ ಮಾಡೊದು ಸಾಧ್ಯ ಇಲ್ಲ.
ಸಾಗರ ಪ್ರಶಾಂತವಾಗಿದ್ದಾಗ ಯಾರೂ ಬೇಕಾದರೂ ಹಡಗನ್ನು ನಡೆಸಬಹುದು. (ಕ್ಯಾಪ್ಟಾನ್ ಆಗಬಹುದು)
ಕುಂಬ್ಳೆಯ ಈಗಿನ ಬೌಲಿಂಗ್ ದೋಸೆಯಂತೆ ಫ್ಲಾಟ್.
ಶ್ರೀಲಂಕಾದ ಸ್ಕೋರ್ ಇಂಡಿಯನ್ ಟ್ಯಾಕ್ಸಿ ಮೀಟರ್‌ನಂತೆ ಓಡುತ್ತಿದೆ.
ಅನುಭವ ಅನ್ನೋದು ನೀವು ಬೊಕ್ಕತಲೆಯವರಾದಗ ಜೀವನ ನೀಡೋ ಬಾಚಣಿಗೆ ಇದ್ದ ಹಾಗೆ.
ಅಂಕಿ ಅಂಶಗಳು ಮಿನಿಸ್ಕರ್ಟ್ ಇದ್ದಂತೆ. ಬಚ್ಚಿಟ್ಟಿದ್ದಕ್ಕಿಂತ ಹೆಚ್ಚಿನದನ್ನು ತೋರಿಸುತ್ತದೆ.
ಇವನು ಇಂಡಿಯಾದ ತ್ರಿಚಕ್ರ ವಾಹನ ಇದ್ದಂತೆ, ತುಂಬಾ ಡೀಸೆಲ್ ಕುಡಿದರೂ ಕೂಡ ೩೦ ರ ಮೇಲೆ ಹೋಗಲ್ಲ.
ಡೊಡೊ ಪಕ್ಷಿಯಂತೆ ಈ ಪಿಚ್ ಕೂಡ ಡೆಡ್ ಆಗಿದೆ.
ನಮ್ಮೂರಿನ ಟಾಕೀಸನಲ್ಲಿ ನಿಲ್ಲಿಸಿರೋ ಸೈಕಲ್‌ಗಳು ಒಂದು ಬಿದ್ದರೆ ಎಲ್ಲ ಉದುರುವ ಹಾಗೆ ನಮ್ಮ ಇಂಡಿಯಾದ ವಿಕೆಟ್‌ಗಳು ಉದುರುತ್ತಿದೆ.
ದೀಪ್ ದಾಸ್ ಗುಪ್ತ ನಿಜಕ್ಕೂ ವಿಕೆಟ್ ಕೀಪರ್ ಅಲ್ಲ. ಅವನು ಗೋಲ್ ಕೀಪರ್. ಮಾಂಚೆಸ್ಟರ್ ಯುನೆಟೆಡ್ ತಂಡಕ್ಕೆ ಆದಷ್ಟೂ ಬೇಗ ರವಾನಿಸುವುದು ಒಳಿತು.
ಟನಲ್ ಆ ಬದಿಯಲ್ಲಿ ಕಾಣಿಸುತ್ತಿರುವ ಬೆಳಕು ಕಂಡು ಇಂಡಿಯಾ ಖುಶಿಯಾಗಿದೆ. ಪಾಪ. ಅದಕ್ಕೆನು ಗೊತ್ತು ಅಲ್ಲಿ ಕಾಣೋ ಬೆಳಕು ಸೂಪರ್ ಫಾಸ್ಟ್ ಟ್ರೈನ್ ನಿಂದ ಬರುತ್ತಿದೆ ಅಂತಾ

 

ಹೀಗೊಂಚೂರು ತಮಾಷೆ ನೋಡ್ರಿ

 

``ನಾಗಪುರ ಎಲ್ಲಿದೆ ಅಂದ್ರೆ ಸಿಲೋನ್ ಮ್ಯಾಪ್‌ನಲ್ಲಿ ಹುಡುಕ್ತಾ ಇದ್ದೀಯಲ್ಲಾ?'' ಎಂದು ಮೇಡಂ ರೇಗಿದರು.
``ಕೋಲಂಬಸ್ ಇಂಡಿಯಾನ ಹುಡುಕ್ತಾ ಬಂದು ಅಮೇರಿಕೆ ಕಂಡು ಹಿಡಿದ ಅಂತ ನೀವೇ ಹೇಳಿದ್ರಿ ಮಿಸ್.''
``ಅದಕ್ಕೆ.''
``ಸಿಲೋನ್‌ನಲ್ಲೂ ಒಂದು ನಾಗಪುರ ಏಕಿರಬಾರದು?'' ಎಂದ ತರಲೆ ಶಿಷ್ಯ.
*

 

ಪ್ರಕಾಶ ಮದುವೆ ಬಗ್ಗೆ ಬಹಳ ತಲೆಕೆಡಿಸಿಕೊಂಡಿದ್ದ.
``ಸತೀಶ, ಪ್ರೇಮಿಸಿ ಮದುವೆ ಆದ್ರೆ ನಾನು ಸುಖವಾಗಿ ಇರ್‍ತೀನೋ, ಅಪ್ಪ ಅಮ್ಮ ತೋರಿಸಿದ ಕುತ್ತಿಗೆಗೆ ತಾಳಿ ಬಿಗಿದರೆ ಸುಖವಾಗಿ ಇರ್‍ತೀನೋ?''
``ಏನು ಬೇಕಾದರೂ ಮಾಡು ಮದುವೆ ಮಾತ್ರ ಮುಂದಕ್ಕೆ ಹಾಕ್ತಿರು, ಮದುವೆ ಮತ್ತು ಸುಖ ಒಟ್ಟೊಟ್ಟಿಗೆ ಇರೋಲ್ಲ'' ದುಃಖಿಸಿದ ಸತೀಶ.
*

 

``ನೀನು ಮತ್ತು ಸೋಮು ಬಂಧುಗಳಾ ವಿಶ್ವಾ?''
``ಹೌದು, ಸೋಮು ಮನೆಯಲ್ಲಿ ಇದೆಯಲ್ಲ ದೊಡ್ಡ ನಾಯಿ ಅದರ ತಮ್ಮನ್ನ ನಮ್ಮ ಮನೆ ಆಲ್ಸೇಷಿಯನ್‌ಗೆ ತಂದು ಕೊಂಡಿದ್ದೇವೆ.''
*

 

ಒಬ್ಬ ಸರ್ದಾರಜಿ ತನ್ನ ಕುಟುಂಬದ ಜೊತೆ ಪಾರ್ಟಿಗೆ ಹೋಗಿದ್ದ.
ಅಲ್ಲಿ ಸಿಕ್ಕ ಗಣ್ಯನಿಗೆ ತನ್ನ ಕುಟುಂಬವನ್ನು ಪರಿಚಸಿದ: ``ಮೈ ಸರ್ದಾರ್ ಹೂಂ, ಯೇ ಮೇರಿ ಸರ್ಧಾರ್ನಿ, ಯೇ ಮೇರಾ ಕಿಡ್ ಹೈ, ಯೇ ಮೇರಿ ಕಿಡ್ನಿ.''

*

 

ಹಳೆಯ ಛಾಪಾ ಕಾಗದ ಓದಲಾಗಲಿಲ್ಲ.
`ಸಾರ್, ನೋಡಿ ಅಕ್ಷರಗಳು ಓದೋಕೆ ಸಾಧ್ಯವಿಲ್ಲ' ಎಂದ ಗುಮಾಸ್ತ. `ನಿನ್ನ ತಲೆ ಯಾವ ಮೂರ್ಖ ಬೇಕಾದರೂ ಓದಬಲ್ಲ. ಕೊಡಿಲ್ಲಿ ಓದಿ ತೋರಿಸುತ್ತೇನೆ' ಎಂದ ಸಬ್ ರಜಿಸ್ಟಾರ್ ಸಾಹೇಬರು ಸೊಗಸಾಗಿ ಓದಿದರು.
*

 

ಎಂ.ಜಿ.ರಸ್ತೆಯಲ್ಲಿ ನಿನ್ನ ಆಫೀಸ್ ಇದೆ ಅಂದೆಯಲ್ಲ ಎಷ್ಟು ದೊಡ್ಡದಿದೆ?
ಸ್ನೇಹಿತ ಕೇಳಿದ.
`ನೀನು ಏರೋಪ್ಲೇನ್ ನೋಡಿದ್ದೀಯಲ್ಲ?'
`ಓಹೋ!' ಎಂದ ಗೆಳೆಯ.
`ಏರೋಪ್ಲೇನ್‌ನಲ್ಲಿ ನಮ್ಮ ಲಗೇಜ್ ಇಟ್ಟುಕೊಳ್ಳೋಕೆ ತಲೆ ಮೇಲೆ ಬಾಕ್ಸ್‌ಗಳು ಮಾಡಿರ್‍ತಾರಲ್ಲ ಎರಡು ಬಾಕ್ಸ್ ಸೈಜ್ ಇದೆ ನಮ್ಮ ಆಫೀಸು.'
*

 

``ಗಂಡನಿಗೆ ದೇವರಲ್ಲಿ ಭಕ್ತಿ ಬರಬೇಕಾದರೆ ನಿತ್ಯ ಉಪ್ಪಿಟ್ಟು ಮಾಡಿ ತಿನಿಸಬೇಕು ಕಣ್ರೇ'' ಕಮಲಾಕ್ಷಿ ಗೆಳತಿಗೆ ಹೇಳಿದಳು.
``ದೇವರಿಗೂ, ಉಪ್ಪಿಟ್ಟಿಗೂ ಏನು ಸಂಬಂಧ?''
``ಒಂದು ವಾರ ಉಪ್ಪಿಟ್ಟು ತಿನ್ನಿಸಿ ಅಯ್ಯೋ ದೇವರೇ ಈ ಉಪ್ಪಿಟ್ಟಿ ನಿಂದ ಪಾರು ಮಾಡಿಸಪ್ಪಾ ಅಂತ ಅವರೇ ದೇವರನ್ನು ಬೇಡಿಕೊಳ್ಳುತ್ತಾರೆ''
*

 

``ಲೇ ಗೋಪಿ, ಮತ್ತೆ ಕಡಿಮೆ ಮಾರ್ಕ್ಸು! ಇಂಥ ಪ್ರೊಗ್ರೆಸ್ ರಿಪೋರ್ಟ್ ನನಗೆ ತೋರಿಸಿದರೆ ನಂಗೆ ಮೈ ಉರಿಯುತ್ತೆ ಅಂತ ಗೊತ್ತಿಲ್ಲವಾ ನಿಂಗೆ?''
ತಂದೆ ರೇಗಾಡಿದರು.
``ನನ್ನ ಕ್ಲಾಸ್ ಟೀಚರ್‌ಗೆ ಈ ವಿಷಯ ಹೇಳಿದೆ ಅಪ್ಪಾ ಅವರಿಗೆ ತಿಳವಳಿಕೆ ಸಾಲದು. ನೀನು ಸೈನ್ ಹಾಕಿಸಿಕೊಂಡು ಬರಲೇಬೇಕು ಅಂತಾ ಒತ್ತಾಯ ಮಾಡಿದರು.''
*

 

ಸಿನಿಮಾ ನಿರ್ದೇಶಕ ಕ್ಷೌರ ಮಾಡಿಸಿಕೊಳ್ಳಲು ಸಲೂನ್‌ಗೆ ಬಂದಿದ್ದ. ಅಗತ್ಯಕ್ಕಿಂತ ಹೆಚ್ಚು ಡೀಪ್ ಆಗಿ ಕೂದಲು ಕಟ್ ಮಾಡುತ್ತಿದ್ದ ಸಲೂನಿನವ. ಅದನ್ನು ನಿಲ್ಲಿಸಲು ನಿರ್ದೇಶಕ ಕಟ್ ಕಟ್ ಎಂದು ಕೂಗಿಕೊಂಡ.
ಹತ್ತು ಸಲ `ಕಟ್' ಎಂದು ಕೂಗಾಡುವ ವೇಳೆಗೆ ಕ್ರಾಪು ಪೂರ್ತಿ ಕಟ್ಟಾಗಿ ತಲೆ ಬೋಳಾಗಿತ್ತು.
*

 

ಡಾಕ್ಟರ್, ಏಳನೇ ಬೆಡ್ ವೆಂಕಟೇಶ ಅನ್ನೋ ಪೇಷಂಟ್ ದುಡ್ಡು ಕಟ್ಟದೇ ಓಡಿ ಹೋಗಿದ್ದಾನೆ ಹೆಡ್‌ನರ್ಸ್ ಬಂದು ದೂರು ನೀಡಿದಳು.
``ಅವನ್ನ ಅಟೆಂಡ್ ಮಾಡುತ್ತಿದ್ದ ನರ್ಸ್‌ನ್ನು ಕರೀರಿ''
``ಅವಳ ಜೊತೆಗೇ ಸಾರ್ ಅವನು ಓಡಿ ಹೋಗಿರೋದು.''
 

ಹಿಂದಿ ಚಿತ್ರನಟಿಯೊಬ್ಬಳನ್ನು ಪತ್ರಕರ್ತರು ಸಂದರ್ಶಿಸಿದರು.
``ಮೇಡಂ, ನೀವು ಈ ಚಿತ್ರದಲ್ಲಿ ತುಂಡು ಅರಿವೆಯೂ ಇಲ್ಲದೇ ನಟಿಸೋವಾಗ ನಿಮಗೆ ಸಂಕೋಚವಾಗಲಿಲ್ವಾ?''
``ಹಾಗೇನಿಲ್ಲ, ಒಂದು ಸ್ಕಾರ್ಪನ್ನು ತಲೆಗೆ ಸುತ್ತಿಕೊಂಡಿದ್ದೀನಿ. ಸರಿಯಾಗಿ ಇನ್ನೊಮ್ಮೆ ಗಮನಿಸಿ'' ಎಂದು ನಟಿ ಮೋಹಕವಾಗಿ ನಕ್ಕಳು.

 

ಮಾಜಿ ರಾಜಕಾರಣಿಗೆ ಮಹಾನ್ ಸಿಟ್ಟು ಬಂದು ಪತ್ರಿಕಾ ಕಾರ್‍ಯಾಲಯಕ್ಕೆ ಫೋನ್ ಮಾಡಿದ `ನಾನು ಲಂಚಕೋರ, ಭ್ರಷ್ಟ ಅಂತಾ ನಿಮ್ಮ ಪೇಪರನಲ್ಲಿ ತಾನೇ ನಿನ್ನೆ ಪ್ರಿಂಟ್ ಆಗೀರೋದು?' `ಇಲ್ಲ ಸಾರ್ ಅದು ನಮ್ಮ ಪೇಪರ್ ಅಲ್ಲ ಬೇರೇದು ಇರಬೇಕು' `ಬದುಕಿಕೊಂಡ್ರಿ ನೀವು' `ನಾವು ಹಳೇ ಸುದ್ದಿಗಳನ್ನು ಪ್ರಕಟ ಮಾಡೋಲ್ಲ. ನಿಮ್ಮ ಬಗ್ಗೆ ಕಳೆದ ವರ್ಷಾನೇ ಈ ವಿಷಯ ಮುಗಿಸಿದ್ದೀವಿ.'
 

ಚರಿತ್ರೆಯ ಪಾಠಗಳಲ್ಲಿ ೧೦-೧೨ ವರ್ಷಗಳ ಹುಡುಗರನ್ನೂ ಸಹ ಸಿಂಹಾಸನವನ್ನೇರಿಸಿ ರಾಜರನ್ನಾಗಿ ಮಾಡಿದ ಉದಾಹರಣೆಗಳಿದ್ದವು. ಪುಟ್ಟ ತನ್ನ ಮಾಸ್ತರನ್ನು ಕೇಳಿದ:
``ಅಲ್ಲ ಸಾರ್, ೧೨ ವರ್ಷದವರಿಗೆ ರಾಜ್ಯವನ್ನೇ ವಹಿಸಿಕೊಡುವದಾದರೆ, ಮದುವೆ ಆಗೋಕೆ ೨೧ ವರ್ಷ ಯಾಕೆ ಕಾಯಬೇಕು?''
``ದೇಶ ನಿಭಾಯಿಸೋದು ಸುಲಭ ಕಣಪ್ಪ ಆದರೆ ಹೆಂಡ್ತೀನ ನಿಭಾಯಿಸೋದು ಕಷ್ಟ'' ಎಂದ ಮಾಸ್ತರರು ನಿಟ್ಟುಸಿರುಟ್ಟು, ಕನ್ನಡಕ ಒರೆಸಿಕೊಂಡರು.
 

``ಮೆಘಾ ಎಕ್ಸಚೇಂಜ್ ಆಫರ್! ಹಳೆಯದನ್ನು ಕೊಟ್ಟು ಹೊಸದನ್ನು ಕೊಳ್ಳಿರಿ. ಭಾರೀ ರಿಯಾಯಿತಿ!'' ಎಂದು ಮನೆಯ ಮುಂದೆ ಮೈಕ್‌ನಲ್ಲಿ ಒಬ್ಬ ಕೂಗುತ್ತಿದ್ದ.
``ಏನಪ್ಪಾ ಸಂಜೆ ಬರ್‍ತೀಯಾ? ನಮ್ಮ ಯಜಮಾನರು ಈಗ ಮನೆಯಲ್ಲಿಲ್ಲಾ'' ಎಂದಳು ವನಜಾಕ್ಷಿ.

 

ಹಳೆಯ ಜೋಕುಗಳು

ದೂಮ ಕಂಡು ಹಿಡಿದ ಹೈಟೆಕ್ ವಿಷಯಗಳು

ದೂಮನ ಡಬ್ಬಲ್ ಥ್ರಿಲ್ !

ಮೆಂಟಲ್ ಆಸ್ಪತ್ರೆಯಲ್ಲಿ ಧೂಮ

ಪ್ರೊ. ಧೂಮನ ಸಂಶೋಧನೆ

ಸೆರೆಮನೆ-ಕಚೇರಿ ಬಗ್ಗೆ ಒಂದು ಲೈಟ್‌ರೀಡಿಂಗ್

ಮರೆವು ಮತ್ತು ಪರೀಕ್ಷೆಗಳ ನಡುವೆ

ಸರ್ದಾರ್‌ಜಿ ಮತ್ತು ಕಲರ್ ಟೀವಿ ತಮಾಷೆ

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com