ದೂಮನ ಡಬ್ಬಲ್ ಥ್ರಿಲ್ !
ಜನಸಂಖ್ಯೆ
ಅಧ್ಯಾಪಕರು ಪಾಠ
ಮಾಡುತ್ತಾ `ಜಗತ್ತಿನ ಯಾವುದಾದರೂ ಒಂದು ಕಡೆ ಪ್ರತಿ ಹತ್ತು ಸೆಕೆಂಡಿಗೆ
ಒಂದರಂತೆ ಮಹಿಳೆ ಮಗುವಿಗೆ ಜನ್ಮ ನೀಡುತ್ತಳೇ ಇದ್ದಾಳೆ'
ಇದನ್ನು ಕೇಳಿದ ಮರಿ
ದೂಮ ಉದ್ಗರಿಸಿದ : "ಸಾರ್ ಅಂಥವಳು ಎಲ್ಲಿದ್ದರೂ ಹುಡುಕಿ ಅದನ್ನು
ನಿಲ್ಲಿಸಬೇಕು!".
ಡಬ್ಬಲ್ ಥ್ರಿಲ್
ದೂಮನಿಗೆ ಪತ್ತೇದಾರಿ
ಕಾದಂಬರಿಗಳ ಹುಚ್ಚು. ಆದರೆ ಅದೇಕೋ ಕಾದಂಬರಿಗಳನ್ನು ಪ್ರಾರಂಭದಿಂದ ಓದುವ ಬದಲು
ಮಧ್ಯದಿಂದಲೇ ಪ್ರಾರಂಭಿಸುವುದು ಅವನಿಗೆ ರೂಢಿಯಾಗಿತ್ತು. ಒಮ್ಮೆ ಈ ವಿಚಾರವಾಗಿ
ಕೆಂಚಿ ಅವನನ್ನು ಪ್ರಶ್ನಿಸಿಯೇ ಬಿಟ್ಟಳು `ಯಾಕಯ್ಯಾ ನೀನು ಮಧ್ಯದಿಂದ
ಓದುತ್ತಿಯಾ?'
ದೂಮ ಖುಷಿಯಿಂದ
ಹೇಳಿದ `ಅದು ಡಬ್ಬಲ್ ಖುಷಿ ಕೊಡುತ್ತದೆ' ಎಂದ.
`ಹೇಗೆ
ಅಂತಾ ಕೇಳಿದಳು ಕೆಂಚಿ
ಮಧ್ಯದಿಂದ ಓದಲು
ಪ್ರಾರಂಭಿಸಿದರೆ ಕಥೆಯ ಅಂತ್ಯದ ಜೊತೆಗೆ ಪ್ರಾರಂಭದ ಬಗ್ಗೆಯೂ ಕುತೂಹಲ ಮೂಡುತ್ತದೆ.
ಹಳೆಯ
ಜೋಕುಗಳು