Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 01 September 2006 03:31 PM

ಅಸಹಾಯಕತೆ..

  • ವಿ.ಜಿ.ದೊಡ್ಡಿಕುಮಾರ್

ಏನೂ ಅರಿಯದ ಎರಡು ಮುಗ್ಧ ಜೀವಿಗಳು. ಅವರುಗಳು ತಮ್ಮ ಜೀವನಕ್ಕೆ ಯಾವುದೋ ಒಂದು ಕೆಲಸವನ್ನು ಮಾಡಿ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದರು. ಇವರ ದಡ್ಡತನವನ್ನು ಅರಿತ ಒಬ್ಬ ವ್ಯಕ್ತಿ `ನಿಮಗೆ ಒಳ್ಳೆಯ ಕೆಲಸ ಕೊಡಿಸುತ್ತೇನೆಂದು ಹೇಳಿದನು. ನಿಮ್ಮ ದೊಡ್ಡಪ್ಪನ ಹಾಗೆ ನೀವೂ ಶ್ರೀಮಂತರಾಗಬಹುದು ಎಂದು ಆಸೆಯನ್ನು ಹುಟ್ಟಿಸಿ ಅವರನ್ನು ಬೆಂಗಳೂರಿಗೆ ಕರೆತಂದ. ಒಂದು ಮನೆಯಲ್ಲಿ ಮನೆ ಕೆಲಸ ಮಾಡಲು ಸೇರಿಸಿದ ಸುಮಾರು ಹತ್ತು ದಿನಗಳ ಕಾಲ ಕೆಲಸ ಮಾಡಿದರು. ನಂತರ ಅವನು ಇಲ್ಲಿ ಕಡಿಮೆ ಸಂಬಳ ಕೊಡುತ್ತಾರೆ. ಬೇರೆ ಸ್ಥಳದಲ್ಲಿ ಇದಕ್ಕಿಂತ ಹೆಚ್ಚು ಹಣ ಕೊಡುತ್ತಾರೆ ಎಂದು ಹೇಳಿ ಕರೆದುಕೊಂಡು ಹೋದ. ಅಲ್ಲಿ ಹೊರದೇಶದ ವ್ಯಕ್ತಿಯೊಬ್ಬನ ಜೊತೆ ಕಳುಹಿಸಿ ಕೊಟ್ಟ. ಎರಡು ಹೆಣ್ಣು ಮಕ್ಕಳು ಕೆಲಸಕ್ಕಿರಬಹುದೆಂದು ತಿಳಿದುಕೊಂಡು ಅವನ ಜೊತೆ ಹೋದವು. ಅಲ್ಲಿ ಅವನು ಕೆಟ್ಟ ರೀತಿಯಲ್ಲಿ ವರ್ತಿಸಿದನು. ಅದನ್ನು ಕಂಡು ಇವರು ಅವನಿಗೆ ಛೀಮಾರಿ ಮಾಡಿದರು. ಆಗ ಅವನು ನಿಮಗೆ ಹಣವನ್ನು ಕೊಟ್ಟು ತೆಗೆದುಕೊಂಡಿದ್ದೇನೆ ಎಂದನು. ಇದನ್ನು ಕೇಳಿ ಅವರಿಬ್ಬರೂ ದುಃಖಿತರಾದರು. ಅವರನ್ನು ಎಲ್ಲಿಗೂ ಹೋಗದ ಹಾಗೆ ಬಂಧಿಸಿದನು. ಇದರಿಂದ ಅವರುಗಳು ತಮ್ಮ ಜೀವನವನ್ನು ನಾಲ್ಕು ಗೋಡೆಯ ಮಧ್ಯೆ ಕಳೆಯಬೇಕಾಯಿತು.

ಅವನ ದಿನನಿತ್ಯ ಬಂದು ಅವರನ್ನು ಹಿಂಸಿಸುತ್ತಿದ್ದ ಆದರೂ ಕೂಡ ಅವನ ಜೊತೆ ಸಹಕರಿಸುತ್ತಿರಲಿಲ್ಲ. ಒಂದು ದಿನ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಒಬ್ಬಳನ್ನು ಕೊಂದು ಹಾಕಿದ. ಇನ್ನೊಬ್ಬಳಿಗೆ ನೀನೇನಾದರೂ ನನ್ನ ಜೊತೆ ಹೊಂದಿಸಿಕೊಳ್ಳದಿದ್ದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಹೆದರಿಸಿದ. ಅಕ್ಕನನ್ನು ಕಳೆದುಕೊಂಡ ತಂಗಿ ಏನೂ ಮಾಡಲಾರದೆ ನಿಸ್ಸಾಯಕತೆಯಿಂದ ಅವನು ಹೇಳಿದ ಹಾಗೆ ನಡೆದುಕೊಳ್ಳುತ್ತಾಳೆ. ಇದು ಮುಗ್ಧ ಜೀವಗಳ ಕಣ್ಣೀರಿನ ಒಂದು ವ್ಯಥೆ.

 

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com