ಜರ್ಮನಿ ಪಾಲಿಗೆ ವಿಶ್ವಕಪ್ ಹಾಕಿ
ಮೌಂಚೆನ್‌ಗ್ಲಾಡ್‌ಬಾಕ್: ವಿಶ್ವಕಪ್ ಹಾಕಿಯ
ಅಂತಿಮ ಪಂದ್ಯದಲ್ಲಿ ಜರ್ಮನಿ ತಂಡ ಆಸ್ಟ್ರೇಲಿಯಾ ತಂಡವನ್ನು ೪-೩
ಗೋಲುಗಳ ಅಂತರದಿಂದ ಸೋಲಿಸಿ ವಿಶ್ವಕಪ್ ತನ್ನದಾಗಿಸಿಕೊಂಡಿದೆ.
ಭಾನುವಾರ ನಡೆದ ಫೈನಲ್
ಪಂದ್ಯಾವಳಿಯಲ್ಲಿ ಆರಂಭದಿಂದಲೂ ಮೇಲುಗೈ ಸಾಧಿಸಿದ ಆಸ್ಟ್ರೇಲಿಯಾ
ತಂಡ ಕೊನೆಗೆ ಜರ್ಮನಿ ತಂಡದ ದಾಳಿಯನ್ನು ಎದುರಿಸಲಾರದೆ ಸೋಲನ್ನೊಪ್ಪಿಕೊಂಡಿತು.
ಮಧ್ಯಂತರ ವೇಳೆಗೆ ಆಸ್ಟ್ರೇಲಿಯಾ
ತಂಡವು ೨-೧ ಗೋಲುಗಳಿಂದ ಮುನ್ನಡೆ ಪಡೆದಿತ್ತು. ಜರ್ಮನಿಯ ಮುನ್ನಡೆಯ
ಆಟಗಾರ ಕ್ರಿಸ್ಟೋಫರ್ ಜೆಲ್ಲರ್‌ನ ಅದ್ಭುತ ಆಟದಿಂದ ತಂಡಕ್ಕೆ ಜೀವ
ತಂದು ಕೊಟ್ಟಿತು. ಆಸ್ಟ್ರೇಲಿಯಾದ ಮಾರ್ಕ್ ನೋಲ್ಸ್‌ವೆಲ್ಸ್, ಮ್ಯಾಟ್
ನ್ನೆಲಾರ್, ಟ್ರಾಯ್ ಎಲ್ಟರ್ ತಲಾ ಒಂದು ಗೋಲು ಗಳಿಸಿದರೆ, ಜರ್ಮನಿಯವರ
ಜೆಲ್ಲರ್-೨, ಫರ್ಸಟ್, ಎಮ್ಮರ್ಲಿಂಗ್ ತಲಾ ೧ ಗೋಲುಗಳಿಂದ ಜಯ
ತಂದುಕೊಟ್ಟರು.
ದಕ್ಷಿಣ ಕೊರಿಯಾ ತಂಡವನ್ನು ೨-೦ ಅಂತರದಿಂದ
ಮಣಿಸಿ ಸ್ಪೇನ್ ತಂಡ ಮೂರನೇ ಸ್ಥಾನವನ್ನು ಗಳಿಸಿತು.
ಭಾರತ ಕೊನೆಗೂ ಜಯಗಳಿಸುವಲ್ಲಿ ಸಫಲವಾಯಿತು.
ರಾಜ್‌ಪಾಲ್‌ಸಿಂಗ್ ಹೊಡೆದ ಏಕೈಕ ಗೋಲಿನಿಂದ ದಕ್ಷಿಣ ಆಫ್ರಿಕಾ ತಂಡವನ್ನು
ಮಣಿಸಿ ೧೧ನೇ ವಿಶ್ವಕಪ್‌ನಲ್ಲಿ ೧೧ ನೇ ಸ್ಥಾನವನ್ನು ಗಳಿಸಿ ಅಭಿಮಾನಿಗಳಿಗೆ
ನಿರಾಶೆ ಮೂಡಿಸಿತು.
ಇನ್ನಷ್ಟು
ಬೆಳಗಾವಿಯಲ್ಲಿ ಎಂಇಎಸ್ ಮಹಾ ಮೇಳ
ರಾಜ್ಯದಲ್ಲಿ ೧, ೪೧೬ ಶಾಲೆಗಳ ಪರವಾನಿಗೆ ರದ್ದು
ವಿಪತ್ತುಗಳ ದತ್ತಸಂಚಯ
ತಯಾರಿಕೆಯಲ್ಲಿ ಇಸ್ರೋ
ವಿಮೋಚನಾ
ದಿನಕ್ಕೆ ಸಿಪಿಐ(ಎಂ)ನಿಂದ ಬಹಿಷ್ಕಾರ
ಕೆ.ಕೆ.ಎನ್.ಸಿ ಗಣೇಶೋತ್ಸವದಲ್ಲಿ ಸಾಂಸ್ಕೃತಿಕ
ಕಾರ್ಯಕ್ರಮಗಳು
ದಸರಾಕ್ಕೆ ಸಿಂಗಾರ ಗೊಂಡ ಮೈಸೂರು
ಮಾಜಿ ಕಾನೂನು ಸಚಿವ ಹಾವನೂರು ಇನ್ನಿಲ್ಲ
ಪೋಪ್ ಹೇಳಿಕೆಗೆ ಮುಸ್ಲಿಂ ಸಮುದಾಯ ಖಂಡನೆ
ಚಿಕ್ಕಮಗಳೂರಿನಲ್ಲಿ ಕೊಂಕಣಿ ಮಹೋತ್ಸವ