ಡಿಎಲ್‌ಎಫ್ ತ್ರಿಕೋಣ ಸರಣಿ:ಆಸ್ಟ್ರೇಲಿಯಾಕ್ಕೆ
ಜಯ
ಕೌಲಾಲಂಪುರ: ಮಂಗಳವಾರ ನಡೆದ
ಡಿಎಲ್‌ಎಫ್ ತ್ರಿಕೋಣ ಸರಣಿಯ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ
ತಂಡವು ವೆಸ್ಟ್‌ಇಂಡೀಸ್ ತಂಡದ ವಿರುದ್ಧ ೭೮ ರನ್‌ಗಳಿಂದ
ಜಯಗಳಿಸಿದೆ.
ಗೆಲ್ಲಲು ೨೮೦ ರನ್‌ಗಳ ಮೊತ್ತವನ್ನು ಬೆನ್ನಟ್ಟಿದ
ವೆಸ್ಟ್‌ಇಂಡೀಸ್ ತಂಡ ೨೦
೧ ರನ್ ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು
ಕಳೇದುಕೊಂಡು ಸೋಲೊಪ್ಪಿಕೊಂಡಿತು. ಮೊದಲ ವಿಕೆಟ್‌ಗೆ ಶತಕದ
ಜೊತೆಯಾಟ ಪ್ರದರ್ಶಿಸಿದ ಚಂದ್ರಪಾಲ್ (೯೨ರನ್, ೮೩ ಎಸೆತ, ೧೦ ಬೌಂಡರಿ,
೪ ಸಿಕ್ಸರ್) ಹಾಗೂ ಕ್ರಿಸ್ ಗೇಲ್ (೫೮ರನ್, ೪೬ ಎಸೆತ, ೭ ಬೌಂಡರಿ, ೨
ಸಿಕ್ಸರ್) ಪರಿಶ್ರಮವನ್ನು ಇತರ ಆಟಗಾರರು ಬೇಕಾಬಿಟ್ಟಿ ಆಟವಾಡಿ ವಿಕೆಟ್
ಚೆಲ್ಲಿದರು.
ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಮೈಕಲ್
ಕ್ಲಾರ್ಕ್(೮೧ ರನ್) ಹಾಗೂ ನಾಯಕ ರಿಕಿ ಪಾಯಿಂಟ್ (೫೪ ರನ್) ನೆರವಿನೊಂದಿಗೆ
೫೦ ಓವರ್‌ಗಳಲ್ಲಿ ೯ ವಿಕೆಟ್ ಕಳೆದುಕೊಂಡು ೨೭೯ ರನ್ ಗಳಿಸಿತ್ತು.
ಶೇನ್ ವಾಟ್ಸನ್ ೪೨ಕ್ಕೆ೪ ವಿಕೆಟ್ ಪಡೆದು ಯಶಸ್ವಿ
ಬೌಲರ್ ಎನಿಸಿ ಪಂದ್ಯ ಶ್ರೇಷ್ಠರಾದರು.
ಅಂಪೈರ್ ನಿರ್ಣಯದ ವಿರುದ್ಧ ಮಾತನಾಡಿದ್ದಕ್ಕಾಗಿ
ಆಸ್ಟ್ರೇಲಿಯಾದ ನಾಯಕ ರಿಕಿ ಪಾಯಿಂಟ್‌ಗೆ ಪಂದ್ಯದಲ್ಲಿ ಸಿಗುವ ಪೂರ್ಣ
ಹಣವನ್ನು ತಂಡವಾಗಿ ತೆರಬೇಕೆಂದು ಪಂದ್ಯದ ರೆಫ್ರಿ ಕ್ರಿಸ್ ಬ್ರಾಡ್
ಹೇಳಿದ್ದಾರೆ.
ಇನ್ನಷ್ಟು
೯೩ರ ಮುಂಬೈ ಸ್ಫೋಟ: ನ್ಯಾಯಾಲಯ ತೀರ್ಪು
ಘೋಷಣೆ
ವಾಕ್ಯದಿಂದ ಹೊಸ ಭಾಷಾಲಿಪಿ ಸಾಫ್ಟ್‌ವೇರ್
ಶೂಮಿ ಪಾಲಿಗೆ ಇಟಾಲಿಯನ್ ಗ್ರಾಂಡ್ ಪ್ರೀ
ಫೆಡರರ್‌ಗೆ ಯುಸ್ ಮುಕ್ತ ಟೆನ್ನಿಸ್‌ನಲ್ಲಿ ಹ್ಯಾಟ್ರಿಕ್
ಶರಪೋವಾಗೆ
ಯುಎಸ್ ಮುಕ್ತ ಟೆನ್ನಿಸ್ ಕೀರಿಟ
ಮಾರ್ಟಿನಾ ನವತ್ರಿಲೋವಾಗೆ
ಮಿಶ್ರ ಡಬಲ್ಸ್ ಪ್ರಶಸ್ತಿ
ಪೇಸ್-ಡ್ಯಾಮ್ ಜೋಡಿಗೆ ಯುಸ್ ಡಬಲ್ಸ್