ದಕ್ಷಿಣ ಆಫ್ರಿಕಾ ದಾಳಿಗೆ ತತ್ತರಿಸಿದ ಜಿಂಬಾಬ್ವೆ
ಪೋರ್ಚಸ್ಟರಂ: ದಕ್ಷಿಣ ಅಫ್ರಿಕಾದ ಬೃಹತ್
ಮೊತ್ತವನ್ನು ಬೆನ್ನಟ್ಟಿದ ಜಿಂಬಾಬ್ವೆ ತಂಡ ೧೭೧ ರನ್‌ಗಳ ಅಂತರದಿಂದ
ಸೋಲನ್ನು ಒಪ್ಪಿಕೊಂಡಿತು.
ಮೂರನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಮೊದಲು
ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ೫ ವಿಕೆಟ್ ಕಳೆದುಕೊಂಡು ೪೧೮ ರನ್
ಗಳಿಸಿತ್ತು. ಜಿಂಬಾಬ್ವೆ ತಂಡ ೪ ವಿಕೆಟ್ ನಷ್ಟಕ್ಕೆ ೨೪೭ ರನ್ ಗಳಿಸಿ ಸೋಲೊಪ್ಪಿಕೊಂಡಿತು.
ದಕ್ಷಿಣ ಆಫ್ರಿಕಾ ಪರ ೬೮ ಎಸೆತಗಳಲ್ಲಿ ೧೪೭ ರನ್ ಗಳಿಸಿದ ಮಾರ್ಕ್ ಬುಚರ್ ಪಂದ್ಯ ಶ್ರೇಷ್ಠ
ಪ್ರಶಸ್ತಿ ಗಳಿಸಿದರು.
ನೆದರ್‌ಲ್ಯಾಂಡ್ಸ್‌ನ ವಿರುದ್ಧ ಶ್ರೀಲಂಕಾ ತಂಡ
ಗಳಿಸಿದ ೪೪೩ ರನ್‌ಗಳು ವಿಶ್ವದಾಖಲೆಯಾಗಿದೆ. ದಕ್ಷಿಣ ಆಫ್ರಿಕಾದ ಈ ಮೊತ್ತ
ಎರಡನೇ ಸ್ಥಾನದಲ್ಲಿದೆ.