ಸಚಿನ್ ಆಟ ವ್ಯರ್ಥ, ವಿಂಡೀಸ್‌ಗೆ ಗೆಲುವು
ಕೌಲಾಲಂಪುರ: ತಮ್ಮ ಇಂದಿನ ಲಯಕ್ಕೆ
ಮರಳಿದ ಸಚಿನ್ ತೆಂಡೂಲ್ಕರ್ ಆಕರ್ಷಕ ಶೈಲಿಯ ಆಟ
ಪ್ರದರ್ಶಿಸಿದರು. ವಿಂಡೀಸ್‌ನ ಬೌಲರ್ ಗಳನ್ನು ಲೀಲಾಜಾಲ ಆಟಗಾರರನ್ನು
ದಂಡಿಸಿದ ತೆಂಡೂಲ್ಕರ್ ತಮ್ಮ ೪೦ ನೇ ಶತಕವನ್ನು ಬಾರಿಸಿದರು. ೧೪೮
ಎಸೆತಗಳಲ್ಲಿ ೧೪೧ ರನ್ ಹೊಡೆದು ಅಜೇಯರಾಗಿ ಉಳಿದ ಸಚಿನ್ ೧೩ ಬೌಂಡರಿ
ಹಾಗೂ ೫ ಆಕರ್ಷಕ ಸಿಕ್ಸರ್ ಸಿಡಿಸಿದ್ದು ವಿಶೇಷ.
ಆದರೆ ಮಳೆಯ ಕಾರಣ ಆಟ ನಿಂತಾಗ ಅವಶ್ಯವಿದ್ದ
ರನ್ ಸರಾಸರಿ ಹೊಂದಿದ್ದ ವಿಂಡೀಸ್ ತಂಡ ಡಕವರ್ತ್ ಲೂಯಿಸ್ ಪ್ರಕಾರ
ವಿಜಯಿ ಎಂದು ಘೋಷಿಸಲಾಯಿತು.
ಮೋಡ ಮುಸುಕಿದ ವಾತಾವರಣದ ನಡುವೆ ಶುರುವಾದ
ಡಿಎಲ್‌ಎಫ್ ಕಪ್‌ನ ಭಾರತ ಹಾಗೂ ವೆಸ್ಟ್‌ಇಂಡೀಸ್ ಪಂದ್ಯ ಸ್ವಲ್ಪ
ತಡವಾಗಿ ಪ್ರಾರಂಭವಾಯಿತು. ಟಾಸ್ ಗೆದ್ದ ಭಾರತ ದ್ರಾವಿಡ್ ಹಾಗೂ ಸಚಿನ್‌ರ
ಚುರುಕಾದ ಆಟದ ಮೂಲಕ ಉತ್ತಮ ಆರಂಭ ಕಂಡಿತು. ದ್ರಾವಿಡ್(೨೬
ರನ್) ವಿಕೆಟ್ ಪತನ ನಂತರ ಪಿಂಚ್ ಹಿಟ್ಟರ್ ಆಗಿ ಬಂದ ಪಠಾಣ್ ಮೋಹಕವಾಗಿ
ಆಡಿ ೬೪ ರನ್ ಗಳಿಸಿದರು. ಈ ಮೊತ್ತದಲ್ಲಿ ೬ ಬೌಂಡರಿ ಹಾಗೂ ೨ ಸಿಕ್ಸರ್
ಒಳಗೊಂಡಿತ್ತು. ನಂತರ ಆಡಲು ಬಂದ ಸೆಹವಾಗ್(೯) ಹಾಗೂ ಧೋನಿ(೨)
ಕ್ರೀಸ್ ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಸುರೇಶ್ ರೈನಾ ಸಚಿನ್‌ಗೆ
ಉತ್ತಮ ಬೆಂಬಲ ನೀಡಿ ೨೯ ಎಸೆತದಲ್ಲಿ ೩೪ರನ್ ಹೊಡೆದು ತಂಡದ ಮೊತ್ತ
ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಭಾರತ ನಿಗದಿತ
ಓವರ್‌ಗಳಲ್ಲಿ ೫ ವಿಕೆಟ್ ಕಳೆದುಕೊಂಡು ೩೦೯ ರನ್ ಪೇರಿಸಿತು.
ಭಾರತದ ಬೃಹತ್ ಮೊತ್ತವನ್ನು ಬೆನ್ನಟ್ಟಿದ
ವಿಂಡೀಸ್ ಆಟಗಾರರು ೨೦ ಓವರ್‌ಗಳಲ್ಲಿ ೨ ವಿಕೇಟ್ ಕಳೆದುಕೊಂಡಿದ್ದಾಗ
ಮಳೆಯ ಕಾರಣ ಆಟ ನಿಲ್ಲಿಸಲಾಯಿತು. ಆಗ ಡಿಎಲ್ ನಿಯಮಾವಳಿಯ ಪ್ರಕಾರ
ಬೇಕಾಗಿದ್ದ ಮೊತ್ತ ೧೧೨ ರನ್ ಆಗಿತ್ತು. ಈ ಮೊತ್ತಕ್ಕಿಂತ ಮುಂದಿದ್ದ ವಿಂಡೀಸ್
ತಂಡ ಗೆಲುವನ್ನು ತನ್ನದಾಗಿಸಿಕೊಂಡಿತು. ವಿಂಡೀಸ್ ಪರ ಕ್ರಿಸ್ ಗೇಲ್
೩೫ ಎಸೆತಗಳಲ್ಲಿ ೪೫ ರನ್ ಹೊಡೆದಿದ್ದರು.
ಆಕರ್ಷಕ ಆಟ ಪ್ರದರ್ಶಿಸಿದ ತೆಂಡೂಲ್ಕರ್ ಪಂದ್ಯ
ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಇನ್ನಷ್ಟು
ಇಂದು ಸರ್.ಎಂ. ವಿಶ್ವೇಶ್ವರಯ್ಯ ಹುಟ್ಟುಹಬ್ಬ
ನಿಗೂಢ ರೀತಿಯಲ್ಲಿ ಮತ್ತೊಂದು ಸಿಡಿ ಲಭ್ಯ
ಭೂಪಾಲ್ ದುರಂತ ಸಂತ್ರಸ್ತರಿಗೆ ಪರಿಹಾರ
ಅಂಧರಿಗಾಗಿ ಸ್ವಯಂಚಾಲಿತ ಮಾರ್ಗದರ್ಶಕ
ಎಂಎಲ್‌ಎ ಕೋಣೆಗೆ ಬೀಗಜಡಿದ ರಕ್ಷಣಾವೇದಿಕೆ
ಅಧಿಕಾರ ಬಿಡಲು ಮುಂಡಾ ನಿರ್ಧಾರ
ಗಣಿ ಪ್ರಕರಣ: ಮತ್ತೆ ಎರಡು ಸಿ.ಡಿ ಬಿಡುಗಡೆ
ಅಕ್ಟೋಬರ್ ೨೦ ರಿಂದ `ಕುಡ್ಲೋತ್ಸವ'
ಹೊಸ ಪಕ್ಷಿ
ಸಂಕುಲ ಪತ್ತೆ
ಹೊಸ ತಂತ್ರಾಂಶದಿಂದ ಕನ್ನಡದಲ್ಲಿ ಇ-ಮೇಲ್
ಕರ್ನಾಟಕ ಬಂದ್ ಮುಂದಕ್ಕೆ: ಕನ್ನಡ ಸಂಘಟನೆ
ದತ್ತಜಯಂತಿಯಲ್ಲಿ ಶೋಭಾಯಾತ್ರೆಯಿಲ್ಲ: ಸರ್ಕಾರ
೯೩ರ ಮುಂಬೈ ಸ್ಫೋಟ: ನ್ಯಾಯಾಲಯ ತೀರ್ಪು
ಘೋಷಣೆ