|
ದಕ್ಷಿಣ ಆಫ್ರಿಕಾಕ್ಕೆ ಸುಲಭ ತುತ್ತಾದ ಶ್ರೀಲಂಕಾ
ಅಹಮದಾಬಾದ್: ಐಸಿಸಿ ಚಾಂಪಿಯನ್ ಟ್ರೋಫಿಯ ಲೀಗ್
ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ ತಂಡವನ್ನು ಸುಲಭವಾಗಿ
ಸೋಲಿಸಿ ಗುಂಪಿನಲ್ಲಿ ಮೇಲುಗೈ ಪಡೆಯಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಪಡೆದ ದಕ್ಷಿಣ ಆಫ್ರಿಕ ಆರಂಭಿಕ
ಕುಸಿತ ಕಂಡರೂ ಎ.ಬಿ. ಡಿ ವಿಲ್ಲೆಯರ್ಸ್ (೫೪), ಜಾಕ್ ಕಾಲೀಸ್(೪೩)
ಉತ್ತಮ ಆಟದಿಂದ ೨೦೦ರ ಗಡಿ ದಾಟಿತು.
೪.೪ ರ ಸರಾಸರಿಯಲ್ಲಿ ೨೨೦ ರನ್‌ಗಳನ್ನು ಬೆನ್ನತ್ತಿದ್ದ ಶ್ರೀಲಂಕಾ
ತಂಡ ಶಾನ್ ಪೊಲಾಕ್, ನಿಟಿನಿ ಬೌಲಿಂಗ್ ದಾಳಿಯನ್ನು ಎದುರಿಸಲಾರದೆ
ಆರಂಭಿಕ ಕುಸಿತ ಕಂಡ ನಂತರ ಚೇತರಿಕೆ ಕಾಣಲೇ ಇಲ್ಲ. ೩೯.೧
ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ೧೪೧ ರನ್ ಮಾತ್ರ
ಗಳಿಸಿ, ದಕ್ಷಿಣ ಆಫ್ರಿಕಾಕ್ಕೆ ಜಯ ತಂದುಕೊಟ್ಟಿತು.
ಆಲ್ ರೌಂಡರ್ ಆಟ ಪ್ರದರ್ಶಿಸಿದ ಶಾನ್ ಪೊಲಾಕ್ ಪಂದ್ಯ ಶ್ರೇಷ್ಠ
ಪ್ರಶಸ್ತಿಗಳಿಸಿದರು. ಬುಧವಾರದ ಪಂದ್ಯದಲ್ಲಿ ನ್ಯೂಜಿಲಾಂಡ್ ತಂಡ
ಪಾಕಿಸ್ತಾನವನ್ನು ಎದುರಿಸಲಿದೆ.
ಇನ್ನಷ್ಟು
ಸ್ವತಃ ಅಣ್ಣನ ಮಗನಿಂದ ಗುಂಡೇಟು ತಿಂದ ಕೋರೆ
ಇಮ್ರಾನಾ ಪ್ರಕರಣ: ತಪ್ಪಿತಸ್ಥ ಮಾವ
ಇನ್ನು ಯಾಹೂ ಮೆಸ್ಸೆಂಜರ್ ಹಿಂದಿ ತಮಿಳಲ್ಲೂ ಲಭ್ಯ
ರಾಷ್ಟ್ರಪತಿಯ ಕ್ಷಮಾದಾನ ಕೋರಲಿರುವ ಅಫಜಲ್
೧, ೪೦೦ ಉದ್ಯೋಗಿಗಳನ್ನು ಹೊರದಬ್ಬಿದ ಎಓಆಲ್
ಪಾಕ್ ಪಂದ್ಯವನ್ನು ಹಾಳುಗೆಡವಲು ಶಿವಸೇನೆ ಹಂಚಿಕೆ
ನೈಸರ್ಗಿಕ ಕೃಷಿಗೆ ಮಾರು ಹೋದ ಮಠ
|