ಮಿನಿವಿಶ್ವಕಪ್‌ಗೆ ಇಂದು ಚಾಲನೆ
ಮೊಹಾಲಿ: ಮಿನಿ ವಿಶ್ವಕಪ್ ಎಂದೇ
ಕರೆಯಲ್ಪಡುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಳು ಇಂದಿನಿಂದ
ಪ್ರಾರಂಭಗೊಳ್ಳಲಿದೆ. ಮೊದಲಿಗೆ ಆರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದ್ದು
ವೆಸ್ಟ್ ಇಂಡೀಸ್, ಶ್ರೀಲಂಕಾ, ಬಾಂಗ್ಲಾ ಹಾಗೂ ಜಿಂಬಾಬ್ವೆ ತಂಡಗಳು ಸೆಣೆಸಲಿದೆ.
ಆಸ್ಟ್ರೇಲಿಯಾ, ಭಾರತ, ನ್ಯೂಜಿಲ್ಯಾಂಡ್, ಪಾಕಿಸ್ತಾನ, ಇಂಗ್ಲೆಂಡ್ ಹಾಗೂ
ದಕ್ಷಿಣ ಅಫ್ರಿಕಾ ತಂಡಗಳು ಮುಂದಿನ ಸುತ್ತಿಗೆ ಈಗಾಗಲೇ ಪ್ರವೇಶ ಪಡೆದಿವೆ.
ಅರ್ಹತಾ ಸುತ್ತಿನ ಪಂದ್ಯಗಳು ಅಕ್ಟೋಬರ್ ೭
ರಿಂದ ೧೪ರ ತನಕ ನಡೆಯಲಿದೆ. ಅಕ್ಟೋಬರ್ ೧೫ ರಿಂದ ನವೆಂಬರ್ ೫ರ
ತನಕ ನಾಕೌಟ್ ಸುತ್ತು ಶುರುವಾಗಲಿದೆ. ಅರ್ಹತಾ ಸುತ್ತಿನಲ್ಲಿ ಹೆಚ್ಚು
ಅಂಕ ಗಳಿಸಿದ ಎರಡು ೨ ತಂಡಗಳು ಮುಂದಿನ ಸುತ್ತು ಪ್ರವೇಶಿಸಲಿದೆ.
ಪ್ರಾರಂಭಿಕ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಬಾಂಗ್ಲಾ ತಂಡವು
ಎದುರಿಸಲಿದೆ. ಎಲ್ಲಾ ಪಂದ್ಯಾವಳಿಗಳು ಸೆಟ್ ಮ್ಯಾಕ್ಸ್ ಚಾನೆಲ್‌ನಲ್ಲಿ ಅಪರಾಹ್ನ
೨:೩೦ ರಿಂದ ನೇರ ಪ್ರಸಾರವಾಗಲಿದೆ.