ಪಶ್ಚಿಮ ಆಸ್ಟ್ರೇಲಿಯಾವನ್ನು ಮಣಿಸಿದ ಕರ್ನಾಟಕ
ತಂಡ
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ
ಬುಧವಾರ ಪಶ್ಚಿಮ ಆಸ್ಟ್ರೇಲಿಯಾ ಹಾಗೂ ಕರ್ನಾಟಕ ತಂಡಗಳ ನಡುವೆ
ನಡೆದ ಏಕದಿನ ಪಂದ್ಯದಲ್ಲಿ ಕರ್ನಾಟಕ ತಂಡ ೩೦ ರನ್ ಗಳಿಂದ
ಜಯಗಳಿಸಿದೆ.
ಕರ್ನಾಟಕ ತಂಡದ ಸಾಧಾರಣ ಮೊತ್ತ ೨೦೮ ರನ್
ಗಳನ್ನು ಬೆನ್ನತ್ತಿದ ಪಶ್ಚಿಮ ಆಸ್ಟ್ರೇಲಿಯಾ ತಂಡಕ್ಕೆ ಮಳೆಯ
ಕಾರಣ ೪೫ ಓವರ್‌ಗಳಲ್ಲಿ ೨೦೨ ರನ್ ಮೊತ್ತ ನೀಡಲಾಯಿತು. ಆದರೆ ಕರ್ನಾಟಕ
ತಂಡ ೪೩.೪ ಓವರ್‌ಗಳಲ್ಲಿ ೧೭೨ ರನ್ ಗಳಿಗೆ ಪಶ್ಚಿಮ ಅಸ್ಟ್ರೇಲಿಯಾ
ತಂಡವನ್ನು ಸೀಮಿತಗೊಳಿಸಿ ಜಯ ಗಳಿಸಿತು.
ಕರ್ನಾಟಕದ ಪರ ತಿಲಕ್ ನಾಯ್ಡು (೩೯), ಸ್ಟುವರ್ಟ್
ಬಿನ್ನಿ(೪೦) ಹಾಗೂ ಸುನೀಲ್ ಜೋಷಿ(೩೬) ಹೆಚ್ಚಿನ ಮೊತ್ತ
ಗಳಿಸಿದವರಾಗಿದ್ದಾರೆ. ಆಸ್ಟ್ರೇಲಿಯಾ ಪರ ಡರೆನ್ ವ್ಹಾಟ್ ೪೪ ರನ್
ಗಳಿಸಿದರು. ಕರ್ನಾಟಕದ ಪರ ಸುನೀಲ್ ಜೋಷಿ ೧೯ ರನ್ನಿತ್ತು ೪ ವಿಕೆಟ್
ಪಡೆದು ಯಶಸ್ವಿ ಬೌಲರ್ ಎನಿಸಿದರು.
ಮುಂದಿನ ಎರಡು ಪಂದ್ಯಗಳು ಮೈಸೂರಿನಲ್ಲಿ
ಸೆಪ್ಟೆಂಬರ್ ೨೯ ಹಾಗೂ ೩೦ ರಂದು ನಡೆಯಲಿದೆ.