|
ಮುನಾಫ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್
ಜೈಪುರ: ಭಾರತದ ವೇಗಿ ಮುನಾಫ್ ಪಟೇಲ್ ಹಾಗೂ
ಇರ್ಫಾನ್ ಪಠಾಣ್ ಅವರ ಕರಾರುವಾಕ್ ಬೌಲಿಂಗ್ ದಾಳಿಗೆ ಸಿಲುಕಿ ತತ್ತರಿಸಿದ
ಇಂಗ್ಲೆಂಡ್ ತಂಡ ಭಾರತಕ್ಕೆ ಸುಲಭ ತುತ್ತಾಯಿತು.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಲೀಗ್ ಪಂದ್ಯದಲ್ಲಿ
ಅತಿಥೇಯರ ದಾಳಿಗೆ ಸಿಕ್ಕ ಇಂಗ್ಲೆಂಡ್ ೩೭ ಓವರ್‌ಗಳಲ್ಲಿ ಕೇವಲ ೧೨೫
ರನ್ನಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಟಾಸ್ ಗೆದ್ದರೂ ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿದ ಭಾರತದ
ನಿರ್ಣಯ ಆರಂಭದಲ್ಲೇ ಫಲಕೊಟ್ಟಿತು. ೫೫ ರನ್ನಿಗೆ ೫ ವಿಕೆಟ್
ಕಳೆದುಕೊಂಡ ಇಂಗ್ಲೆಂಡ್ ತಂಡ, ಪೀಟರ್ಸನ್(೨೭), ಕಾಲಿಂಗ್‌ವುಡ್(೩೮)
ಆಟದಿಂದ ಚೇತರಿಕೆ ಕಂಡರೂ ಫಲಕಾರಿಯಾಗಲಿಲ್ಲ.
ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ ೬ ವಿಕೆಟ್‌ಗಳನ್ನು
ಕಳೆದುಕೊಂಡು ಗೆಲುವು ಸಾಧಿಸಿತು. ತೆಂಡೂಲ್ಕರ್ ೩೫ ರನ್
ಹೊಡೆದಿದ್ದು ಬಿಟ್ಟರೆ ಉಳಿದವರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ.
ಭಾರತದ ಪರ ರಮೇಶ್ ಪೊವಾರ್ ೩ ವಿಕೆಟ್ ಗಳಿಸಿ ಯಶಸ್ವಿ ಬೌಲರ್
ಎನಿಸಿದರು.
೮ ಓವರ್ ಗಳಲ್ಲಿ ೧೮ ರನ್ನಿತ್ತು ೩ ವಿಕೆಟ್ ಪಡೆದ ಮುನಾಫ್ ಪಟೇಲ್
ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.
ಇಂದು ಕಿವೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಸೆಣಸಲಿದೆ. ಕಿವೀಸ್ ತಂಡದ
ಪ್ರಮುಖ ಬೌಲರ್ ಶೇನ್ ಬಾಂಡ್ ಇಂದು ಕಣಕ್ಕಿಳಿಯುವುದು
ಅನುಮಾನವಾಗಿದೆ.
ಇನ್ನಷ್ಟು
ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್
ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ
ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ
ಯೂಟೂಬ್ ವೆಬ್‌ಸೈಟ್ ಖರೀದಿಸಿದ ಗೂಗಲ್
ಬಿಎಸ್‌ಎನ್‌ಎಲ್‌ನ ಎಸ್‌ಟಿಡಿ ದರದಲ್ಲಿ ಕಡಿತ
ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ
ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್
ದೇಶ ವಿರೋಧಿ ಭಾವನೆ : ಗೂಗಲ್‌ಗೆ ನೋಟೀಸ್
ಆರ್‌ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ
ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ
ಕೆಪಿಎಸ್‌ಸಿ ಇನ್ನು ಯುಪಿಎಸ್‌ಸಿ ಮಾದರಿಯಲ್ಲಿ
|