ಶೂಮಿ ಪಾಲಿಗೆ ಇಟಾಲಿಯನ್ ಗ್ರಾಂಡ್ ಪ್ರೀ
ಮೊಂಜಾ: ಫಾರ್ಮುಲಾ ಒನ್‌ನ ಸರದಾರ
ಜರ್ಮನಿಯ ಮೈಕಲ್ ಷೂಮಾಕರ್ ಇಟಲಿಯ ಮೊಂಜಾದಲ್ಲಿ ಭಾನುವಾರದ
ನಡೆದ ಗ್ರಾಂಡ್ ಪ್ರೀಯಲ್ಲಿ ಜಯಗಳಿಸಿದ್ದಾರೆ.
ಫಾರ್ಮುಲಾ ಒನ್‌ನ ಚರಿತ್ರೆಯಲ್ಲಿ ಅತ್ಯಂತ
ಯಶಸ್ವಿ ಚಾಲಕನಾಗಿರುವ ಷೂಮಾಕರ್‌ಗೆ ಇದು ವೃತ್ತಿಜೀವನದ ೯೦ನೇ
ಗೆಲುವಾಗಿದೆ. ಪ್ರಸ್ತುತ ಋತುವಿನಲ್ಲಿ ಇನ್ನು ಮೂರು ರೇಸ್ ಬಾಕಿಯಿದೆ.
ಚಾಂಪಿಯನ್ ಅಂಕಪಟ್ಟಿಯಲ್ಲಿ ಅಲಾನ್ಸೋ ಷೂಮಾಕರ್ ನಡುವಿನ
ಅಂತರ ೧೨ ಅಂಕದಿಂದ ೨ ಅಂಕಕ್ಕೆ ಇಳಿದಿದೆ. ವಾಹನ ರಚನೆ ತಂಡದ
ಅಂಕಪಟ್ಟಿಯಲ್ಲಿ ಫೆರರಿ ತಂಡವು ರೆನೊಲ್ಟ್‌ಗಿಂತ ೩ ಅಂಕ ಮುಂದಿದೆ.
ರೇಸ್ ಗೆದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ
ಷೂಮಾಕರ್ `ಪ್ರಸ್ತುತ ಫಾರ್ಮುಲಾ ಒನ್ ಋತುವಿನ ನಂತರ ರೇಸ್
ಚಾಲನೆಯಿಂದ ದೂರ ಉಳಿಯಲಿದ್ದೇನೆ. ಭವಿಷ್ಯದ ಜೀವನವನ್ನು
ಕುಟುಂಬದ ಜೊತೆ ಕಳೆಯುತ್ತೇನೆ
ಎಂದು ಹೇಳಿದರು.
`ಫೆರರಿ ತಂಡದೊಂದಿಗಿನ ಉತ್ತಮ ಸಂಬಂಧವನ್ನು
ಸದಾ ನೆನಪಿನಲ್ಲಿಟ್ಟುಕೊಳ್ಳುತ್ತೇನೆ
ಎಂದು ಷೂಮಾಕರ್ ಹೇಳಿದ್ದಾರೆ.
೧೯೯೪ರಲ್ಲಿ ಮೊದಲ ಪ್ರಶಸ್ತಿ ಗಳಿಸಿದ ೩೭ ವರ್ಷದ
ಮೈಕಲ್ ಷೂಮಾಕರ್ ಇವರೆಗೂ ೭ ಪ್ರಶಸ್ತಿ, ಒಂದು ಋತುವಿನಲ್ಲಿ ೧೩
ಜಯಗಳು, ೬೮ ಪೋಲ್ ಸ್ಥಾನಗಳು, ೭೫ ವೇಗದ ಲ್ಯಾಪ್‌ಗಳು, ೯೦
ಗ್ರ್ಯಾಂಡ್ ಪ್ರಿಕ್ಸ್ ಜಯ, ೧೩೫೪ ಅಂಕಗಳನ್ನು ಗಳಿಸಿದ ಕೀರ್ತಿ ಮೈಕಲ್‌ಗೆ
ಸಲ್ಲುತ್ತದೆ.
ಇನ್ನಷ್ಟು
ಫೆಡರರ್‌ಗೆ ಯುಸ್ ಮುಕ್ತ
ಟೆನ್ನಿಸ್‌ನಲ್ಲಿ ಹ್ಯಾಟ್ರಿಕ್
ಶರಪೋವಾಗೆ
ಯುಎಸ್ ಮುಕ್ತ ಟೆನ್ನಿಸ್ ಕೀರಿಟ
ಮಾರ್ಟಿನಾ
ನವತ್ರಿಲೋವಾಗೆ ಮಿಶ್ರ ಡಬಲ್ಸ್ ಪ್ರಶಸ್ತಿ
ಪೇಸ್-ಡ್ಯಾಮ್ ಜೋಡಿಗೆ ಯುಸ್ ಡಬಲ್ಸ್
ಹಾಕಿ :ಕೊನೆ ಕ್ಷಣದಲ್ಲಿ ಪಂದ್ಯ ಬಿಟ್ಟುಕೊಟ್ಟ ಭಾರತ
ವಿಶ್ವಕಪ್ ಹಾಕಿ: ಭಾರತದ
ಹಾದಿ ಕಠಿಣ
ಅಗಾಸ್ಸಿಯಿಂದ ಭಾವನಾತ್ಮಕ ನಿರ್ಗಮನ
ಸೌರವ್ ಗಂಗೂಲಿ ಕ್ರಿಕೆಟ್ ಜೀವನ ಅಂತ್ಯವಾಯಿತೆ?