ಚೆಂಡುವಿರೂಪ ಪ್ರಕರಣ: ಗೊಂದಲದಲ್ಲಿ
ಇಂಗ್ಲೆಂಡ್
ಒವಲ್: ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ
ಚೆಂಡು ವಿರೋಪಗೊಳಿಸಿದ ಆರೋಪದ ಮೇಲೆ ಪಾಕಿಸ್ತಾನ ತಂಡಕ್ಕೆ ೫
ರನ್ ದಂಡವನ್ನು ಅಂಪೈರ್ ವಿಧಿಸಿದರು.
ಈ
ನಿರ್ಣಯವನ್ನು ಪಾಕ್ ಆಟಗಾರರು ಪ್ರತಿಭಟಿಸಿ ಆಡಲು ನಿರಾಕರಿಸಿದರು. ನಂತರ
ನಡೆದ ಚರ್ಚೆಯಲ್ಲಿ ಇಂಗ್ಲೆಂಡ್ ವಿಜಯಿ ಎಂದು ಘೋಷಿಸಿದ ಅಂಪೈರ್‌ಗಳ
ಮೇಲೆ ಪಾಕಿಸ್ತಾನದ ಕ್ರಿಕೆಟ್ ಸಂಸ್ಥೆ ಪಿಸಿಬಿ ಕಿಡಿಕಾರಿದೆ.
ಪಂದ್ಯ
ನಿಂತದ್ದರಿಂದ ಇಂಗ್ಲೆಂಡ್‌ನ ಕ್ರಿಕೆಟ್ ಸಂಸ್ಥೆ ಇಸಿಬಿಗೆ ೨೫೦,೦೦೦ ನಷ್ಟ ವಾಗಿದೆ.
ಪಂದ್ಯದ ರೆಫ್ರಿ ಮೈಕ್ ಪ್ರಾಕ್ಟರ್ ಪಂದ್ಯದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.ಚೆಂಡು
ವಿರೋಪಗೊಳಿಸಿದ್ದಕ್ಕೆ ಯಾವುದೇ ಪ್ರತ್ಯಕ್ಷ ಸಾಕ್ಷಿಯಿಲ್ಲದಿರುವುದು,
ಯಾವುದೇ ಕೆಮರಾದಲ್ಲಿ ಸೆರೆಹಿಡಿಯದಿರುವುದು ಘಟನೆಗೆ ಹೊಸ
ತಿರುವು ತಂದಿದೆ.
ಜೊತೆಗೆ ಈ ರೀತಿಯ ಆರೋಪಗಳು ಆಸ್ಟ್ರೇಲಿಯಾದ ಅಂಪೈರ್ ಡೆರೆಲ್
ಹೇರ್ ಸುತ್ತಮುತ್ತ ತಿರುಗುತ್ತಿರುವುದು ಸೋಜಿಗವಾಗಿದೆ. ಇನ್ನೊಬ್ಬ
ಅಂಪೈರ್ ಬಿಲ್ಲಿ ಡಾಕ್ಟರೋವ್ ನಿರ್ಣಯದಿಂದ ಬೇಸರಗೊಂಡಿರುವ ಪಿಸಿಬಿ ಮುಂದಿನ
ಒಂದು ದಿನದ ಸರಣಿಯಲ್ಲಿ ಭಾಗವಹಿಸುವ ಬಗ್ಗೆ ಮರುಚಿಂತನೆ ನಡೆಸುವುದಾಗಿ
ಹೇಳಿದೆ.
ಐಸಿಸಿ ಈ ಬಗ್ಗೆ ಇನ್ನೂ ಏನನ್ನೂ ಹೇಳಿಲ್ಲ, ಪಂದ್ಯದ ರೆಫ್ರಿಯ ವರದಿಯ
ನಂತರ ಐಸಿಸಿಯು ಹೇಳಿಕೆ ಕೊಡುವ ನಿರೀಕ್ಷೆಯಿದೆ.