ಯುನಿಟೆಕ್ ಸರಣಿಯಿಂದ ದ.ಆಫ್ರಿಕಾ ಹೊರಕ್ಕೆ
ಕೊಲೊಂಬೊ: ಆಟಗಾರರ ಸುರಕ್ಷತೆ ಹಾಗೂ ಮಳೆಯ ಕಾರಣ ನೀಡಿ
ದಕ್ಷಿಣ ಅಫ್ರಿಕಾ ತಂಡ ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋಣ ಸರಣಿಯಿದ
ಹೊರಬಿದ್ದಿದೆ.
ಶ್ರೀಲಂಕಾ ಕ್ರಿಕೆಟ್ ಸಂಸ್ಥೆಯ ಮಾಧ್ಯಮ ವಕ್ತಾರ ಸಮಂತಾ
ಅಲಗಾಮ ಈ ವಿಷಯವನ್ನು ಖಚಿತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾ ಸರಣಿಯಿಂದ
ಹೊರಬಿದ್ದಿರುವ ಹಿನ್ನೆಲೆಯಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಭಾರತದೊಂದಿಗೆ
೫ ಏಕದಿನ ಪಂದ್ಯಗಳ ಸರಣಿಯನ್ನು ಆಡಲು ಇಚ್ಛಿಸಿದೆ. ಪ್ರೇಮದಾಸ
ಕ್ರೀಡಾಂಗಣದಿಂದ ಪಂದ್ಯಾವಳಿಗಳು ಸಿಂಹಳೀಸ್ ಸ್ಫೋರ್ಟ್ಸ್ ಕ್ಲಬ್
(ಎಸ್‌ಎಸ್‌ಸಿ) ಕ್ರೀಡಾಂಗಣಕ್ಕೆ ವರ್ಗಾವಣೆಯಾಗುವ ಸಾಧ್ಯತೆಗಳೂ
ನಿಚ್ಚಳವಾಗಿದೆ.
ಶ್ರೀಲಂಕಾ ಕ್ರಿಕೇಟ್ ಮಂಡಳಿಯ ಮನವಿಯನ್ನು ಪುರಸ್ಕರಿಸಿದ ಭಾರತದ
ಕ್ರಿಕೇಟ್ ಮಂಡಳಿ ದಿನಾಂಕ ೧೮, ೨೦ ಹಾಗೂ ೨೨ ರಂದು ಮೂರು ಏಕ ದಿನ
ಪಂದ್ಯವಳಿಗಳನ್ನು ಆಡಲು ಒಪ್ಪಿದೆ.