|
ಶ್ರೀಲಂಕಾ ಪಂದ್ಯಕ್ಕೆ ಶ್ರೀನಾಥ್ ರೆಫ್ರಿ
ದುಬೈ:
ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಶ್ರೀಲಂಕಾದಲ್ಲಿ ನಡೆಯಲಿರುವ
ಶ್ರೀಲಂಕಾ ಹಾಗೂ ದಕ್ಷಿಣ ಅಫ್ರಿಕಾ ನಡುವಿನ ಎರಡು ಟೆಸ್ಟ್ ಪಂದ್ಯಕ್ಕೆ ಮ್ಯಾಚ್
ರೆಫ್ರಿಯಾಗಿ ಆಯ್ಕೆಗೊಂಡಿದ್ದಾರೆ.
ಈ ಬಗ್ಗೆ ಹರ್ಷ ವ್ಯಕ್ತ
ಪಡಿಸಿರುವ ಶ್ರೀನಾಥ್ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಟೆಸ್ಟ್ ಪಂದ್ಯದ
ವೇಳೆಯಲ್ಲಿ ರೆಫ್ರಿ ರಂಜನ್ ಮುದಗಲೆ ಅವರೊಂದಿಗೆ ತಾವು ನಡೆಸಿದ ಸಮಾಲೋಚನೆ
ಈಗ ಉಪಯುಕ್ತವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. |