|
|
|
Monday, 04 September 2006 04:45 PM |
|
ಸೌರವ್ ಇನ್ನೂ `ಬಚ್ಚಾ :
ದಾಲ್ಮಿಯಾ
ಕೋಲ್ಕತಾ : ಮಾಜಿ ನಾಯಕ
ಸೌರವ್ ಅವರನ್ನು `ಬಚ್ಚಾ. ಎಂದು ಕರೆದಿರುವ
ಬಂಗಾಳ ಕ್ರಿಕೆಟ್ ಒಕ್ಕೂಟದ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ, ಮಾಜಿ ನಾಯಕ ಸೇರಿದಂತೆ
ತಂಡದ ಎಲ್ಲಾ ಆಟಗಾರರಿಗೆ ನೆರವಾಗುವುದಾಗಿ ಹೇಳಿದ್ದಾರೆ.
ಸಿಎಬಿ ಚುಣಾವಣೆಗೆ ಮುನ್ನ
ತನ್ನ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ ಎಂದು ಆಯೋಗಕ್ಕೆ ಸೌರವ್ ದೂರು ನೀಡಿದ್ದಾರೆ.
ಹೀಗಿರುವಾಗ ಅವರು ತಂಡಕ್ಕೆ ವಾಪಾಸಾಗಲಿದ್ದಾರೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ದಾಲ್ಮಿಯಾ
ಉತ್ತರಿಸುತ್ತಾ, `ಅವನಿನ್ನೂ ಬಚ್ಚಾ. ಬಚ್ಚಾಗಳ ಬಗ್ಗೆ ಮಾತನಾಡಲು ಇದು ಸಮಯವಲ್ಲ
ಎಂದಿದ್ದಾರೆ.
ಮರು ಚುನಾವಣೆಯಲ್ಲಿ
ಕೋಲ್ಕತ್ತಾ ಪೋಲೀಸ್ ವರಿಷ್ಠಾಧಿಕಾರಿ ಪ್ರಸೂನ್ ಮುಖರ್ಜಿ ಅವರನ್ನು ಸೋಲಿಸಿದ ನಂತರ ಮಾಧ್ಯಮ
ಗೋಷ್ಠಿಯಲ್ಲಿ ಮಾತನಾಡಿದ ದಾಲ್ಮಿಯಾ, ಬಿಸಿಸಿಐ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ತಾನು,
ಬಾಲ್ ವಿರೂಪಗೊಳಿಸುವ ಪ್ರಕರಣದಲ್ಲಿ ವಿರೇಂದ್ರ ಸೆಹವಾಗ್ ಅಲ್ಲದೆ, ಸಚಿನ್ ತೆಂಡೂಲ್ಕರ್,
ಹರ್‌ಭಜನ್ ಸಿಂಗ್ ಅವರಿಗೂ ಕಷ್ಟ ಕಾಲದಲ್ಲಿ ನೆರವಾಗಿದ್ದೆ. ತಾನು ಆಟಗಾರರ ಒಳಿತನ್ನು ಬಯಸುತ್ತೇನೆ.
ಅದು ನನಗೆ ಧರ್ಮವಿದ್ದಂತೆ. ಯಾವ ಕಾರಣಕ್ಕೂ ಈ ವಿಷಯದಲ್ಲಿ ರಾಜಿ ಇಲ್ಲ ಎಂದು
ಅವರು ಸ್ಪಷ್ಟಪಡಿಸಿದ್ದಾರೆ.
ಗಂಗೂಲಿ ತಂಡಕ್ಕೆ
ವಾಪಾಸಾಗುತ್ತಾರಾ ಎನ್ನುವ ಪ್ರಶ್ನೆಗೆ ಅವರು ಉತ್ತರಿಸುತ್ತಾ, `ಯಾಕಿಲ್ಲಾ? ಆತನ ವಿಷಯದಲ್ಲಿ
ನಾನು ಸದಾ ಆಶಾವಾದಿ. ಕ್ರಿಕೆಟ್‌ನಲ್ಲಿ ಸೌರವ್‌ಗೆ ಇನ್ನೂ ಭವಿಷ್ಯವಿದೆ' ಎಂದು ಹೇಳಿದ್ದಾರೆ. |
|
Print
this page |
ಮುಖಪುಟ |
|
|
|