ಡಬ್ಲ್ಯೂಟಿಎ ಟೂರ್ನಿಯಿಂದ ಸಾನಿಯಾ ಔಟ್
ಸ್ಟ್ಯಾನ್‌ಫೋರ್ಡ್ (ಅಮೇರಿಕಾ)
: ಇಲ್ಲಿ ನಡೆಯುತ್ತಿರುವ ಡಬ್ಲ್ಯೂಟಿಎ ಟೂರ್ನಿಯ ಮೊದಲ ಸುತ್ತಿನಲ್ಲಿ ಸಾನಿಯಾ ಮಿರ್ಜಾ
ಸೋಲು ಕಂಡು ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ.
ಟೆನಿಸ್‌ನಲ್ಲಿ ಇನ್ನೂ
ಅಂಬೆಗಾಲಿಡುತ್ತಿರುವ ಆಟಗಾರ್ತಿ ರಷ್ಯಾದ ವಸಿಲಿಸಾ ಬರ್ಡಿನಾ ೬-೩, ೬-೨ ನೇರ ಸೆಟ್‌ಗಳಲ್ಲಿ ಸಾನಿಯಾ
ಮಿರ್ಜಾರನ್ನು ಪರಾಭವಗೊಳಿಸಿದ್ದಾರೆ.
ಸದ್ಯ ೪೨ನೇ ರ್‍ಯಾಂಕಿನಲ್ಲಿರುವ
ಸಾನಿಯಾ ಕಳೆದ ವಾರವಷ್ಟೇ ಸಿನ್ಸಿನಾಟಿ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ
ಎಡವಿದ್ದರು.
ಪಂದ್ಯ ಆರಂಭಕ್ಕೆ
ಮುನ್ನ ೯೮ನೇ ರ್‍ಯಾಂಕ್‌ನ ಬರ್ಡಿನಾರನ್ನು ಸಾನಿಯಾ ಸುಲಭದಲ್ಲಿ ಸೋಲಿಸುತ್ತಾರೆ ಎಂಬ
ಎಲ್ಲರ ಲೆಕ್ಕಾಚಾರ ತಲೆಕೆಳಗಾಯಿತು.