Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಸಾನಿಯಾ ಮಿರ್ಜಾ ಕ್ವಾರ್ಟರ್ ಫೈನಲ್‌ಗೆ

ಸಿನ್ನಿನಾಟೆ : ಸಿನ್ನಿನಾಟೆಯಲ್ಲಿ ನಡೆಯುತ್ತಿರುವ ಮಹಿಳಾ ಓಪನ್ ಡಬ್ಲ್ಯುಟಿಎ ಟೂರ್ ಟೆನಿಸ್ ಚಾಂಪಿಯನ್‌ಷಿಪ್‌ನ ಸಿಂಗಲ್ಸ್ ವಿಭಾಗದಲ್ಲಿ ಭಾರತದ ತಾರೆ ಸಾನಿಯಾ ಮಿರ್ಜಾ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

 

ಫಿನ್‌ಲ್ಯಾಂಡ್ ಎಮ್ಮಾಲೇನ್ ವಿರುದ್ಧ ಸುಮಾರು ಒಂದುವರೆ ಗಂಟೆ ಕಾಲ ನಡೆದ ಸೆಣಸಾಟದಲ್ಲಿ ಸಾನಿಯಾ ಮಿರ್ಜಾ ೬-೧, ೦-೬, ೬-೧ ಸೆಟ್‌ಗಳಿಂದ ಅವರನ್ನು ಪರಾಭವಗೊಳಿಸಿದರು.

 

ಒಂಬತ್ತನೇ ಶ್ರೇಯಾಂಕಿತ ಸಾನಿಯಾ ಮೊದಲ ಸೆಟ್‌ನಲ್ಲಿ ಸುಲಭವಾಗಿ ಗೆದ್ದರೂ, ಎರಡನೆಯ ಸೆಟ್‌ನಲ್ಲಿ ಸೋಲನ್ನನುಭವಿಸಿದರು. ಆದರೆ ಮೂರನೇ ಸುತ್ತಿನ ಪಂದ್ಯದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿ ಗೆಲುವು ತಮ್ಮದಾಗಿಸಿಕೊಂಡರು. ೧ ಲಕ್ಷ ೭೫ ಸಾವಿರ ಡಾಲರ್ ಬಹುಮಾನದ ಟೂರ್ನಿ ಇದಾಗಿದೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com