ಸಾನಿಯಾ - ಮಾರ್ಟಾ ಫೈನಲ್‌ಗೆ
ಮಸೋನ್ : ಭಾರತದ
ಸಾನಿಯಾ ಮಿರ್ಜಾ ಮತ್ತು ಪೊಲೆಂಡ್‌ನ ಮಾರ್ಟಾ ದೊಮಚೋಸ್ಕ ಜೋಡಿ ಇಲ್ಲಿ ನಡೆಯುತ್ತಿರುವ
ಡಬ್ಲ್ಯುಟಿಎ ಟೆನಿಸ್ ಕೂಟದ ಡಬಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.
ತೈವಾನ್‌ನ ಚನ್ ಚಿನ್
ವೇ ಮತ್ತು ಉಕ್ರೇನ್‌ನ ಟಿಟಿಯಾನಾ ಲುಹನ್‌ಸ್ಕ ಜೋಡಿಯನ್ನು ೬-೦ ಮತ್ತು ೬-೧ರ ನೇರ
ಸೆಟ್‌ಗಳ ಅಂತರದಲ್ಲಿ ಸೋಲಿಸಿ ಈ ಜೋಡಿ ಫೈನಲ್‌ಗೇರಿತು.
ಭಾರತದ ಉದಯೋನ್ಮುಖ
ಆಟಗಾರ್ತಿ ಸಾನಿಯಾ ೧.೭ಲಕ್ಷ ಡಾಲರ್ ಬಹುಮಾನ ಮೊತ್ತದ ಈ ಪಂದ್ಯಾವಳಿಯಲ್ಲಿ ಪ್ರಶಸ್ತಿ
ಜಯಿಸುವ ಭರವಸೆಯಲ್ಲಿದ್ದಾರೆ.