ಗಂಗೂಲಿ ದಾಲ್ಮಿಯಾ : ಭಿನ್ನಮತ ಸ್ಫೋಟ
ಕೋಲ್ಕತ : ಭಾರತ
ಕ್ರಿಕೆಟ್ ತಂಡದಿಂದ ಹೊರಗುಳಿದಿದ್ದ ಸೌರವ್ ಗಂಗೂಲಿ, ಮಾಜಿ ಬಿಸಿಸಿಐ ಅಧ್ಯಕ್ಷ ಜಗಮೋಹನ್
ದಾಲ್ಮಿಯಾ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಬಂಗಾಳ ಕ್ರಿಕೆಟ್ ಸಂಸ್ಥೆಯಲ್ಲಿರುವ
ಕೆಲವರು ತಮ್ಮ ಸ್ವಾರ್ಥಕ್ಕಾಗಿ ಆಟಗಾರರ ವೃತ್ತಿ ಬದುಕಿನೊಂದಿಗೆ ಆಟವಾಡುತ್ತಿದ್ದಾರೆ ಎಂದು
ಗಂಗೂಲಿ ಗಂಭೀರವಾಗಿ ಆರೋಪ ಮಾಡಿದ್ದಾರೆ.
ಈಗ ಇಂಗ್ಲೆಂಡ್‌ನಲ್ಲಿ
ಕೌಂಟಿ ಕ್ರಿಕೆಟ್ ಆಡುತ್ತಿರುವ ಗಂಗೂಲಿ, ಅಲ್ಲಿಂದಲೇ ಕ್ರಿಕೆಟ್ ಅಧ್ಯಕ್ಷ ಸ್ಥಾನದ
ಅಭ್ಯರ್ಥಿಯಾಗಿರುವ ಮುಖರ್ಜಿಯವರಿಗೆ ಇ-ಮೇಲ್ ಕಳುಹಿಸಿ ಬೆಂಬಲ ಸೂಚಿಸಿದ್ದರು.
ಕ್ರಿಕೆಟ್ ಸಂಸ್ಥೆಯ
ಅಧ್ಯಕ್ಷ ಸ್ಥಾನಕ್ಕೆ ದಾಲ್ಮಿಯಾ ಸ್ಪರ್ಧಿಸುತ್ತಿರುವ ಸಮಯದಲ್ಲೇ ಭಿನ್ನಮತ ಸ್ಫೋಟಗೊಂಡಿರುವುದರಿಂದ
ಇದು ಮಹತ್ವ ಪಡೆದುಕೊಂಡಿದೆ.