ಬಂಗಾಳ ಕ್ರಿಕೆಟ್ ಸಂಸ್ಥೆಗೆ
ದಾಲ್ಮಿಯಾ ಪುನರಾಯ್ಕೆ
ದಾಲ್ಮಿಯಾ
ಎದುರಾಳಿ ಪ್ರಸುನ್ ಮುಖರ್ಜಿಗೆ ೫೬ ಮತ
ಕೋಲ್ಕತಾ:
ಬಂಗಾಳ ಕ್ರಿಕೆಟ್ ಸಂಸ್ಥೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಜಗಮೋಹನ್ ದಾಲ್ಮಿಯಾ
ಪುನರಾಯ್ಕೆಯಾಗಿದ್ದಾರೆ.
೧೧೭ ಮತಗಳ ಪೈಕಿ
ದಾಲ್ಮಿಯಾ ೬೧ ಮತಗಳನ್ನು ಪಡೆದು ಜಯಶಾಲಿಯಾದರಲ್ಲದೇ, ಸಂಸ್ಥೆಯ ಪ್ರಮುಖ
ಸ್ಥಾನಗಳಲ್ಲೂ ದಾಲ್ಮಿಯಾ ಗುಂಪಿನ ಸ್ಪರ್ಧಿಗಳೇ ಗೆದ್ದಿರುವುದು ವಿಶೇಷವಾಗಿದೆ.
ದಾಲ್ಮಿಯಾ ವಿರುದ್ಧ
ಸ್ಪರ್ಧಿಸಿದ್ದ ಕೋಲ್ಕತಾ ನಗರದ ಪೊಲೀಸ್ ಆಯುಕ್ತ ಪ್ರಸುನ್ ಮುಖರ್ಜಿ ೫೬ ಮತ ಪಡೆದು
ಸೋಲನುಭವಿಸಿದ್ದಾರೆ.