|
ಕ್ರಿಕೆಟ್ ತರಬೇತಿ ಶಿಬಿರ
ಭಾರತೀಯ ತಂಡ ಬೆಂಗಳೂರಲ್ಲಿ
ಬೆಂಗಳೂರು :
ಮುಂದಿನ
ತಿಂಗಳು ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋನ ಸರಣಿಗೆ ಪೂರ್ವಭಾವಿಯಾಗಿ ಒಂದು
ವಾರ ಕಾಲ ಬೆಂಗಳೂರಿನಲ್ಲಿ ನಡೆಯುವ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಭಾರತೀಯ
ಕ್ರಿಕೆಟ್ ತಂಡದ ಅತಿರಥ ಮಹಾರಥರು ಇಲ್ಲಿಗೆ ಆಗಮಿಸತೊಡಗಿದ್ದಾರೆ.
ಮೊದಲ ಮೂರು
ದಿನದ ಶಿಬಿರ ಬೆಂಗಳೂರಿನ ಹೊರವಲಯದಲ್ಲಿರುವ ಯಲಹಂಕದ ಗಡಿಭದ್ರತಾ ಪಡೆಯ
ಹೊಸ ತರಬೇತಿ ಆವರಣದಲ್ಲಿ ನಡೆಯಲಿದ್ದು ಬಳಿಕ ತಂಡ ಚಿನ್ನಸ್ವಾಮಿ ನ್ಯಾಷನಲ್
ಕ್ರಿಕೆಟ್ ಅಕಾಡೆಮಿಗೆ ಹಿಂದಿರುಗಲಿದೆ.
ಸಚಿನ್ ತೆಂಡೂಲ್ಕರ್,
ವಿರೇಂದ್ರ ಸೆಹವಾಗ್ ನಿನ್ನೆ ಬೆಂಗಳೂರಿಗೆ ಆಗಮಿಸಿ ತಂಡವನ್ನು ಸೇರಿಕೊಂಡಿದ್ದು
ಬೆಂಗಳೂರಿನ ಅಭಿಮಾನಿಗಳು ತಮ್ಮ ಮೆಚ್ಚಿನ ಕ್ರಿಕೆಟ್ ತಾರೆಯರನ್ನು ನೋಡಲು
ತವಕಿಸುತ್ತಿದ್ದಾರೆ. |