ಯುವ ವಿಶ್ವ ಚೆಸ್ ಚಾಂಪಿಯನ್ ಆಗಿ ಹರಿಕೃಷ್ಣ
ಜರ್ಮನಿ: ಭಾರತದ ಗ್ರಾಂಡ್ ಮಾಸ್ಟರ್ ಪೆಂಡ್ಯಾಲಾ ಹರಿಕೃಷ್ಣ
ಜರ್ಮನಿಯ ಮೈಜ್ ನಲ್ಲಿ ನಡೆಯುತ್ತಿರುವ ೨೦ ವರ್ಷ ವಯೋಮಿತಿ
ಒಳಗಿನವರ ರ್‍ಯಾಪಿಡ್ ಚೆಸ್ ಪಂದ್ಯಾವಳಿಯಲ್ಲಿ ಜರ್ಮನಿಯ ಎ. ನೈಸ್ಚಿನ್‌ರನ್ನು
ಸತತವಾಗಿ ನಾಲ್ಕು ಆಟಗಳಲ್ಲಿ ಸೋಲಿಸುವ ಮೂಲಕ ವಿಶ್ವ ರ್‍ಯಾಪಿಡ್ ಚೆಸ್
ಪಟು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಬಿಳಿಕಾಯಿಯೊಂದಿಗೆ ಆಟ ಪ್ರಾರಂಭಿಸಿದ ಹರಿಕೃಷ್ಣ ಮೊದಲನೇ, ಎರಡನೇ
ಹಾಗೂ ೪ ನೇ ಆಟದಲ್ಲಿ ಸೋತು, ಮೂರನೇ ಪಂದ್ಯವನ್ನು ಡ್ರಾ ಮಾಡಿಕೊಂಡರೂ
೫ನೇ ಪಂದ್ಯದಿಂದ ಸತತವಾಗಿ ಗೆಲವು ಸಾಧಿಸಿ ಎದುರಾಳಿಗಿಂತ ೧ ಅಂಕ ಹೆಚ್ಚಿಗೆ
ಗಳಿಸಿ ಅಚ್ಚರಿ ಮೂಡಿಸಿದರು.