|
ಆಸೀಸ್ ದಾಳಿಗೆ ಇಂಡಿಯಾ ಬಲಿ
ಮೊಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ `ಎ' ಗುಂಪಿನ
ಪಂದ್ಯದಲ್ಲಿ ಭಾರತದ ವಿರುದ್ಧ ಸುಲಭವಾಗಿ ಜಯ ಸಾಧಿಸಿದೆ.
ಆಸೀಸ್ ಈ ಗೆಲುವಿನಿಂದ ಸೆಮಿಫೈನಲ್‌ಗೆ ಅರ್ಹತೆಯನ್ನು ಪಡೆಯಿತು.
ಪಂದ್ಯದಲ್ಲಿ ಸೋತ ಭಾರತ ಟೂರ್ನಿಯಿಂದ ಹೊರಬಿದ್ದಿದೆ.

ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ತಂಡಗಳು ಈಗಾಗಲೇ
ಸೆಮಿಫೈನಲ್ ಹಂತ ತಲುಪಿವೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ವಿರೇಂದ್ರ ಸೆಹ್ವಾಗ್ (೬೫),
ರಾಹುಲ್ ದ್ರಾವಿಡ್( ೫೨) ರನ್‌ಗಳ ನೆರವಿನಿಂದ ೮ ವಿಕೆಟ್
ಕಳೆದುಕೊಂಡು ೨೪೯ ರನ್ ಗಳಿಸಿತು.
೨೫೦ ರನ್ ಗಳನ್ನು ಬೆನ್ನತ್ತಿದ ಆಸ್ಟೇಲಿಯಾ ತಂಡ ೪೫.೨
ಓವರ್‌ಗಳಲ್ಲಿ ೪ ವಿಕೆಟ್ ಕಳೆದುಕೊಂಡು ಗುರಿಯನ್ನು ಸಾಧಿಸಿತು.
ಆಸೀಸ್ ಪರ ಆರಂಭಿಕ ಆಟಗಾರ ಶೇನ್ ವ್ಯಾಟ್ಸನ್(೫೦), ರಿಕಿ ಪಾಂಟಿಂಗ್(೫೮)
ಹಾಗೂ ಡೇಮಿಯನ್ ಮಾರ್ಟಿನ್ ೭೩ ರನ್ ಹೊಡೆದು ಅಜೇಯರಾಗಿ
ಉಳಿದು ಜಯ ತಂದರು.
ಪಂದ್ಯದ ವಿಶೇಷಗಳು:

ಈ ಪಂದ್ಯದ ಮೂಲಕ ೬೦ರ ಹರೆಯದ ವೆಸ್ಟ್‌ಇಂಡೀಸ್‌ನ ಅಂಪೈರ್
ಸ್ಟೀವ್ ಬಕ್ನರ್ ೧೫೦ ನೇ ಅಂತರರಾಷ್ಟ್ರೀಯ ಪಂದ್ಯವನ್ನು
ಪೂರೈಸಿದರು. ಈ ಮುಂಚೆ ಇಂಗ್ಲೆಂಡ್‌ನ ಡೆವಿಡ್ ಶೇಫರ್ಡ್ ಹಾಗೂ
ದಕ್ಷಿಣ ಆಫ್ರಿಕಾ ದ ರೂಡಿ ಕರ್ಜನ್ ೧೫೦ ಏಕದಿನ ಪಂದ್ಯಗಳಲ್ಲಿ ಅಂಪೈರ್
ಆಗಿ ಕಾರ್ಯ ನಿರ್ವಹಿಸಿದ್ದರು.
೩೪ ರ ಹರೆಯದ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಆಡಂ ಗಿಲ್‌ಕ್ರಿಸ್ಟ್
೪೦೦ ನೇ ವಿಕೆಟ್ ಪಡೆದರು. ತೆಂಡೂಲ್ಕರ್ ಅವರ ಕ್ಯಾಚ್ ಹಿಡಿದು ಈ
ಸಾಧನೆ ಮಾಡಿದ್ದಾರೆ. ಗಿಲ್ ಕ್ರಿಸ್ಟ್ ೨೪೫ ಪಂದ್ಯಗಳಲ್ಲಿ ೩೫೫ ಕ್ಯಾಚ್
ಹಾಗೂ ೪೫ ಸ್ಟಂಪಿಂಗ್ ಮಾಡಿದ ಸಾಧನೆಯನ್ನು ಹೊಂದಿದ್ದಾರೆ.
ಇನ್ನಷ್ಟು
ಕನಕ ಪೀಠಕ್ಕೆ ಈಗ ಹೊಸ ಜಗದ್ಗುರು
ಇಂದು ಪೊಲೀಸ್ ಪೇದೆ ಹುದ್ದೆಗೆ ಲಿಖಿತ ಪರೀಕ್ಷೆ
ಕೌಟುಂಬಿಕ ಹಿಂಸಾ ಕಾಯಿದೆ ವಿರುದ್ಧ ಹೋರಾಟ
ಕೆಪಿಎಸ್‌ಸಿ ಫಲಿತಾಂಶ ನಾಳೆ ಪ್ರಕಟ
ನ.೩ರಿಂದ ೫ರವರೆಗೆ ಜಗತ್ಪ್ರಸಿದ್ಧ ಹಂಪಿ ಉತ್ಸವ
ಕೊಡಗಿನಲ್ಲಿ ಅಕ್ಟೋಬರ್ ೩೧ ರಂದು ಜಾನಪದ ಜಾತ್ರೆ
ವೀಣಾವಾದನದಿಂದ ಗಿನ್ನೆಸ್ ದಾಖಲೆ
ಪ್ರಧಾನಿಗೆ ಉಗ್ರರಿಂದ ಬೆದರಿಕೆ ಪತ್ರ
ವಿಕೃತ ಕಾಮಿ ಉಮೇಶನಿಗೆ ಮರಣದಂಡನೆ
ಕರ್ನಾಟಕದ ಮೇಲೆ ಭಯೋತ್ಪಾದನೆಯ ಕರಿ ಮೋಡ
೯ನೇ ಐಟಿ ಮೇಳಕ್ಕೆ ಸುರಕ್ಷತೆಯ ಚಿಂತೆ
ಮನೆಯಾಳುಗಳ ಗಣತಿಯಲ್ಲಿ ತಮಿಳುನಾಡು ಸರ್ಕಾರ
ಪಾಕ್‌ನೊಂದಿಗೆ ಸರಕು ನೌಕಾಸೇವೆ ಪುನರಾರಂಭ
ಒಂದೇ ಹೆಸರಲ್ಲಿ
ಬೇಕಾದಷ್ಟು ಸಿಮ್
ಶುಕ್ರವಾರ ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ
ಪುದುಚೇರಿ ಶಾಲಾ ಮಕ್ಕಳಿಗೆ ಛತ್ರಿ ಕೊಡುಗೆ
ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ
|