ಅಗಾಸ್ಸಿಯಿಂದ ಭಾವನಾತ್ಮಕ ನಿರ್ಗಮನ
ನ್ಯೂಯಾರ್ಕ್: ಯುಸ್ ಓಪನ್ ಟೆನ್ನಿಸ್
ಪಂದ್ಯಾವಳಿಯ ಮೂರನೇ ಸುತ್ತಿನ ಪಂದ್ಯದಲ್ಲಿ ೧೧೨ ನೇ ಶ್ರೇಯಾಂಕಿತ
ಆಟಗಾರ ಬೆಂಜಮಿನ್ ಬೆಕರ್ ನಿಂದ ೭-೫, ೬-೭(೪), ೬-೪, ೭-೫ ಯಿಂದ ಸೋಲುಂಡು
ನಿರ್ಗಮಿಸಿದ್ದಾರೆ.
೩೬ ವರ್ಷ ವಯಸ್ಸಿನ ಅಗಾಸ್ಸಿ ಯುಎಸ್ ಓಪನ್
ಪಂದ್ಯಾವಳಿಯೇ ತಮ್ಮ ಟೆನ್ನಿಸ್ ಜೀವಿತ ಕೊನೆ ಪಂದ್ಯಾವಳಿಯಾಗಲಿದೆ
ಎಂದು ಹೇಳಿದ್ದರು.
`ಕಳೆದ ೨೧ ವರ್ಷದಿಂದ ಟೆನ್ನಿಸ್ ಆಟವು ನನಗೆ
ಬರಿ ಆಟವಷ್ಟೇ ಆಗಿರದೆ ಜೀವನದ ಉತ್ಸಾಹದ ಒಂದು ಭಾಗವಾಗಿತ್ತು.
ಎಂದು ಅಶ್ರುತುಂಬಿದ ಕಣ್ಣುಗಳಿಂದ ಅಗಾಸ್ಸಿ ಹೇಳಿದರು.
ಬೆಕರ್ ಮುಂದಿನ ಸುತ್ತಿನಲ್ಲಿ ಆಂಡಿ ರಾಡಿಕ್ ಅನ್ನು
ಎದುರಿಸಲಿದ್ದಾರೆ. ರೋಜರ್ ಫೆಡರರ್, ಮರತ್ ಸಫಿನ್, ನಡಾಲ್ ಮುಂದಿನ
ಸುತ್ತು ತಲುಪಿದ್ದಾರೆ.
ಸೆರೆನಾ ವಿಲಿಯಂಸ್, ಅಮೆಲಿ ಮರೆಸ್ಮೋ, ಲಿಂಡ್ಸೆ
ಡೆವನ್‌ಪೋರ್ಟ್, ಮೇರಿ ಪಿಯರ್ಸ್, ಮರಿಯಾ ಶೇರಪೋವ ಮುಂದಿನ
ಸುತ್ತು ತಲುಪಿದ ಅಗ್ರಗಣ್ಯರಾಗಿದ್ದಾರೆ.
ಇನ್ನಷ್ಟು
ಸೌರವ್ ಗಂಗೂಲಿ ಕ್ರಿಕೆಟ್ ಜೀವನ ಅಂತ್ಯವಾಯಿತೆ?
ಮಲೇಷಿಯಾ
ತ್ರಿಕೋಣ ಸರಣಿಗೆ ಟೀಂ ಘೋಷಣೆ
`ಟ್ವೆಂಟಿ-ಟ್ವೆಂಟಿ' ಕ್ರಿಕೆಟ್ ಪಂದ್ಯದಲ್ಲಿ ಪಾಕ್‌ಗೆ ಜಯ
ಚೆಂಡುವಿರೂಪ ಪ್ರಕರಣ: ಗೊಂದಲದಲ್ಲಿ
ಇಂಗ್ಲೆಂಡ್
ಯುನಿಟೆಕ್ ಸರಣಿಯಿಂದ ದ.ಆಫ್ರಿಕಾ ಹೊರಕ್ಕೆ
ಯುವ ವಿಶ್ವ ಚೆಸ್ ಚಾಂಪಿಯನ್ ಆಗಿ ಹರಿಕೃಷ್ಣ