|
ಎಫ್-೧:ಅಲ್ಸಾನೋಗೆ ಹೊಸ ಜೋಡಿಯಾಗಿ ಹ್ಯಾಮಿಲ್ಟನ್
ಇಂಗ್ಲೆಂಡ್: ಫಾರ್ಮೂಲಾ -೧ ಇತಿಹಾಸದಲ್ಲಿ ಮೊದಲ ಕಪ್ಪು
ಜನಾಂಗದ ಡ್ರೈವರನ್ನು ಪರಿಚಯಿಸುತ್ತಿದೆ ಮಕ್ಲೆರನ್ ಮರ್ಸಿಡೀಜ್
ತಂಡ.
ಎರಡು ಬಾರಿಯ ಎಫ್-೧ ಚಾಂಪಿಯನ್ ಫರ್ನಾಂಡೋ ಅಲಾನ್ಸೊ ಜೊತೆಗೆ
ಬ್ರಿಟನ್ ದೇಶದ ಲಿವಿಸ್ ಹ್ಯಾಮಿಲ್ಟನ್ ಮುಂದಿನ ವರ್ಷದಿಂದ ರೇಸ್ ಕಣಕ್ಕೆ
ಇಳಿಯಲಿದ್ದಾರೆ. ಈ ಮೂಲಕ ಕಪ್ಪು ಜನಾಂಗದ ಯುವಕ ಒಬ್ಬ
ಮೊದಲ ಬಾರಿಗೆ ಎಫ್-೧ ಚಾಲಕನಾಗಿ ಕಾಣಿಸಿಕೊಳ್ಳಲಿದ್ದಾರೆ.
`ಫಾರ್ಮೂಲಾ ಒನ್ ರೇಸ್ ಚಾಲಕನಾಗುವುದು ನನ್ನ ಕನಸಾಗಿತ್ತು. ಆ
ಕನಸು ಈಗ ನನಸಾಗಿದೆ. ಅದೂ ಮೆಕ್ಲೆರನ್ ಇಂತಹ ಖ್ಯಾತ
ಸಂಸ್ಥೆಯ ಮೂಲಕ ಎಫ್-೧ ರೇಸ್‌ಗೆ ಪ್ರವೇಶ
ದೊರೆಯುತ್ತಿರುವುದು ನನ್ನ ಸೌಭಾಗ್ಯ' ಎಂದು ೨೧ ವರ್ಷದ
ಹ್ಯಾಮಿಲ್ಟನ್ ಪ್ರತಿಕ್ರಿಯಿಸಿದ್ದಾರೆ.
  
ಫಾರ್ಮೂಲಾ ಒನ್ ರೇಸ್ ತಂಡಗಳಲ್ಲಿ ಹೊಸ ಸೇರ್ಪಡೆ, ತಂಡದಿಂದ
ತಂಡಕ್ಕೆ ಡ್ರೈವರ್‌ಗಳು ಹಾರುವುದು ಸಾಮಾನ್ಯ ವಿಷಯ.
ಮುಂದಿನ ಋತುವಿನ ರೇಸ್‌ನಲ್ಲಿ ರೆನೋ ತಂಡವನ್ನು ತೊರೆದು
ಚಾಂಪಿಯನ್ ಫರ್ನಾಂಡೋ ಅಲಾನ್ಸೋ ಮೆಕ್ಲೆರನ್ ತಂಡವನ್ನು
ಸೇರುತ್ತಿದ್ದಾರೆ. ಹಾಗಾಗಿ ಮುಂದಿನ ರೇಸ್‌ನಲ್ಲಿ ಮೆಕ್ಲೆರನ್ ತಂಡ
ಇಬ್ಬರು ಹೊಸ ಚಾಲಕರೊಂದಿಗೆ ಕಣಕ್ಕಿಳಿಯಲಿದೆ.
ಫಿನ್ ಲ್ಯಾಂಡ್‌ನ ಕಿಮಿ ರೈಕೊನೆನ್ ಫೆರಾರಿ ತಂಡ ಸೇರಲಿದ್ದಾರೆ. ಹೈಕಿ
ಕೊವಲೈನೆನ್ ರೆನೋ ತಂಡದೊಂದಿಗೆ ಮೊದಲ ರೇಸ್ ಅನುಭವ
ಪಡೆಯಲಿದ್ದಾರೆ.
ಇನ್ನಷ್ಟು
ಭದ್ರಾ ಮೇಲ್ದಂಡೆ
ಯೋಜನೆಗೆ ತಜ್ಞರ ಸಲಹೆ
ರೈಲ್ವೇ ಹಳಿ ಮೇಲೆ ಬಿದ್ದ
ನಾಸಿರುದ್ದೀನ್ ಷಾ ಪುತ್ರ
ಮಂಗಳೂರು ಹುಬ್ಬಳ್ಳಿಗೆ
ಹೊಸ ರೈಲು
ಹಿಮಾಚಲದಲ್ಲಿ ಆರರಲ್ಲಿ
ಒಬ್ಬರ ಬಳಿ ಮೊಬೈಲ್
ಫೊರ್ಬ್ಸ್ ಪಟ್ಟಿ:ಮೊದಲ ಇಪ್ಪತ್ತರಲ್ಲಿ ಟಾಟ ಸಂಸ್ಥೆ
ಆಷಸ್ ಸರಣಿ: ಪಾಂಟಿಂಗ್
ಭರ್ಜರಿ ಬ್ಯಾಟಿಂಗ್
ಸುವರ್ಣ ಕಾಯಕ ಯೋಜನೆಗೆ ಚಾಲನೆ
ಕಾಲಿಸ್ ಶ್ರೇಷ್ಠ ಪ್ರದರ್ಶನ; ಭಾರತಕ್ಕೆ ಸೋಲು
ಡಿಸೆಂಬರ್ ೧: ಮಂಗಳೂರಲ್ಲಿ
ಕೊಂಕಣಿ ಹಬ್ಬ
|