|
ಲಾರಾ ದ್ವಿಶತಕ: ಮುಲ್ತಾನ್‌ನ ಸುಲ್ತಾನ್ ಪಟ್ಟ
ಮುಲ್ತಾನ್: ಪಾಕಿಸ್ತಾನ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಲಾರಾ
ಸಿಡಿಸಿದ ದ್ವಿಶತಕ(೨೧೬) ಹಲವು ದಾಖಲೆಗಳಿಗೆ ಕಾರಣವಾಗಿತು.
ನಾಲ್ಕನೇ ದಿನದ ಆಟ ಪ್ರಾರಂಭವಾದಂತೆ ಒಂದೆಡೆ ಲಾರಾ ದ್ವಿಶತಕ
ಗಳಿಸಿದರೆ ಇನ್ನೊಂದೆಡೆ ವಿಕೆಟ್‌ಗಳು ಉದುರಲಾರಂಭಿಸಿದವು.
೨೩೦ ಎಸೆತಗಳಲ್ಲಿ ೧೯೬ ರನ್ ಗಳಿಸಿ ಲಾರಾ ಮೂರನೇ ದಿನದ ಅಂತ್ಯಕ್ಕೆ
ಅಜೇಯರಾಗಿ ಉಳಿದಿದ್ದರು. ಆರಂಭಿಕ ಆಟಗಾರರಾದ ಕ್ರಿಸ್ ಗೇಲ್,
ಡರೆನ್ ಗಂಗ, ಬ್ರೇವೊ ಕ್ರಮವಾಗಿ ೯೩, ೮೨ ಹಾಗೂ ೮೯ ರನ್ ಗಳಿಸಿ
ತಂಡದ ವೊತ್ತವನ್ನು ೫೯೧ ರನ್ ಆಗುವಂತೆ ಮಾಡಿದರು. ವಿಂಡೀಸ್
ತಂಡ ಒಟ್ಟು ೧೬೭.೪ ಓವರ್‌ಗಳಲ್ಲಿ ೫೯೧ ರನ್‌ಗಳಿಸಿ ತನ್ನೆಲ್ಲಾ ವಿಕೆಟ್
ಕಳೆದುಕೊಂಡಿತು. ವಿಂಡೀಸ್ ತಂಡ ಪಾಕಿಸ್ತಾನ ತಂಡಕ್ಕಿಂತ ಈಗ ೨೩೪
ರನ್‌ಗಳಿಂದ ಮುಂದಿದೆ. ಪಾಕಿಸ್ತಾನದ ಪರ ದನೇಶ್ ಕನೇರಿಯಾ ೧೮೧
ರನ್ನಿತ್ತು ೫ ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಲಾರಾ ವಿಕೆಟ್
ಪಡೆದ ಗೌರವ ದನೇಶ್ ಕನೇರಿಯಾ ಪಾಲಾಯಿತು.
ನಾಲ್ಕನೆ ದಿನದ ಭೋಜನ ವಿರಾಮದ ವೇಳೆಗೆ ವಿಕೆಟ್ ನಷ್ಟವಿಲ್ಲದೆ
ಪಾಕಿಸ್ತಾನ ೨೪ ರನ್ ಗಳಿಸಿತ್ತು.
ಮೂರನೇ ದಿನದ ವಿಶೇಷ:
ಮೂರನೇ ದಿನದ ಆಟದ ಪೂರ್ಣ ಗೌರವ ಲಾರಗೆ ಸಲ್ಲುತ್ತದೆ. ತಾವಾಡಿದ
೬ ಗಂಟೆಯ ಆಟದಲ್ಲಿ ಒಟ್ಟು ೧೯೬(೨೩೦ ಎಸೆತ) ೨೧ ಬೌಂಡರಿ, ೭ಸಿಕ್ಸರ್
ಸಿಡಿಸಿದರು.
ಲಾರ ಅವರು ಹಲವು ದಾಖಲೆಗಳನ್ನು ಮುರಿದರು.
ಅಲನ್
ಬಾರ್ಡರ್ ಅವರ ಟೆಸ್ಟ್ ಕ್ರಿಕೆಟ್‌ನ ಗರಿಷ್ಠ ರನ್ ಗಳಿಕೆಯ
ದಾಖಲೆಯನ್ನು ಮುರಿದಿದ್ದಾರೆ.
ಲಾರ
೧೧,೯೦೪ರನ್ ಗಳಿಸಿದ್ದಾರೆ.
೯ನೇ
ವೇಗದ ಶತಕ(೭೭ ಎಸೆತ)
ಭೋಜನ
ವಿರಾಮದ ಒಳಗೆ ಶತಕ ಸಿಡಿಸಿದ ಐದನೇ ಆಟಗಾರ.
ಅತಿಹೆಚ್ಚು
ದ್ವಿಶತಕ ಬಾರಿಸಿರುವವರಲ್ಲಿ ಎರಡನೆ ಆಟಗಾರ.
೧೫೦
ಕ್ಕೂ ಅಧಿಕ ಮೊತ್ತವನ್ನು ೧೯ ಬಾರಿ ದಾಖಲಿಸಿದ್ದಾರೆ.
ಟೆಸ್ಟ್
ಇನ್ಸಿಂಗ್‌ನಲ್ಲಿ ಅತಿಹೆಚ್ಚು ರನ್ ಗಳಿಕೆ ಅಜೇಯ ೪೦೦ ರನ್
ಪ್ರಥಮ
ದರ್ಜೆ ಪಂದ್ಯದಲ್ಲಿ ಅತಿಹೆಚ್ಚು ರನ್ ಗಳಿಕೆ ೫೦೧ ರನ್
ಒಂದು
ಓವರ್ ನಲ್ಲಿ ಅತಿಹೆಚ್ಚು ರನ್ ಗಳಿಕೆ ೨೮ ರನ್‌ಗಳು.
ಲಾರಾ ಅವರ ದ್ವಿಶತಕಗಳ ಪಟ್ಟಿ
ಜನವರಿ
೧೯೯೩-ಸಿಡ್ನಿಯಲ್ಲಿ ಅಸ್ಟ್ರೇಲಿಯಾ ವಿರುದ್ಧ ೨೭೭ ರನ್
ಏಪ್ರಿಲ್,
೧೯೯೪ರಲ್ಲಿ ಇಂಗ್ಲೆಂಡ್ ವಿರುದ್ಧ ಸೈಂಟ್ ಜಾನ್‌ನಲ್ಲಿ ಗಳಿಸಿದ ೩೭೫ ರನ್
ಮಾರ್ಚ್
೧೯೯೯ ಅಸ್ಟ್ರೇಲಿಯಾ ವಿರುದ್ಧ ಕಿಂಗ್ ಸ್ಟನ್ ನಲ್ಲಿ ೨೧೩ ರನ್
೨೦೦೧
ನವೆಂಬರ್ ಶ್ರೀಲಂಕಾ ವಿರುದ್ಧ ಕೊಲೊಂಬೊದಲ್ಲಿ ೨೨೧ ರನ್
ಜೂನ್
೨೦೦೩ ರಲ್ಲಿ ಶ್ರೀಲಂಕಾ ವಿರುದ್ಧ ೨೦೯ ರನ್
ಡಿಸೆಂಬರ್
೨೦೦೩ ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ೨೦೨ ರನ್
ಏಪ್ರಿಲ್
೨೦೦೪ ರಲ್ಲಿ ಇಂಗ್ಲೆಂಡ್ ವಿರುದ್ಧ ಸೈಂಟ್ ಜಾನ್ ನಲ್ಲಿ ಅಜೇಯ ೪೦೦ರನ್
ನವೆಂಬರ್
೨೦೦೫ ಅಸ್ಟ್ರೇಲಿಯಾ ವಿರುದ್ಧ ೨೨೬ ರನ್
ನವೆಂಬರ್
೨೦೦೬ ಪಾಕಿಸ್ತಾನ ವಿರುದ್ಧ ೨೧೬ ರನ್
ಮೊದಲ ಹತ್ತು ದ್ವಿಶತಕ ವೀರರು
ಡಾನ್
ಬ್ರಾಡ್ ಮನ್(ಅಸ್ಟ್ರೇಲಿಯಾ) ೧೨(೫೨ಟೆಸ್ಟ್)
ಬ್ರಿಯಾನ್
ಲಾರಾ ( ವೆಸ್ಟ್ ಇಂಡೀಸ್) ೯ (೧೩೦ ಟೆಸ್ಟ್)
ವಾಲ್ಟರ್
ಹಮ್ಮಂಡ್ (ಇಂಗ್ಲೆಂಡ್) ೭ (೮೫ ಟೆಸ್ಟ್)
ಮಾರ್ವನ್
ಅಟ್ಟಪಟ್ಟು (ಶ್ರೀಲಂಕಾ) ೬ (೮೮)
ಜವೇದ್
ಮಿಯಾಂದಾದ್(ಪಾಕಿಸ್ತಾನ) ೬(೧೨೪)
ರಾಹುಲ್
ದ್ರಾವಿಡ್ (ಭಾರತ) ೫(೧೦೪)
ಕುಮಾರ
ಸಂಗಕ್ಕಾರ (ಶ್ರೀಲಂಕಾ) ೪(೬೨)
ಮಹಮ್ಮದ್
ಯೂಸಫ್(ಪಾಕಿಸ್ತಾನ) ೪(೭೧)
ಜಹೀರ್
ಅಬ್ಬಾಸ್(ಪಾಕಿಸ್ತಾನ) ೪(೭೮)
ಲೆನ್
ಹಟ್ಟನ್(ಇಂಗ್ಲೆಂಡ್) ೪(೭೯)
ಇನ್ನಷ್ಟು
ಭಾರತ-ಚೀನಾ ಬಾಂಧವ್ಯಕ್ಕೆ ೧೦ ಅಂಶಗಳ ಕಾರ್ಯತಂತ್ರ
ಪತ್ನಿಗೆ ಹಿಂಸೆ ನೀಡುತ್ತಿರುವ ರಾಹುಲ್ ಮಹಾಜನ್!?
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಇನ್ನಿಲ್ಲ
ರಾಷ್ಟ್ರೀಯ ಸುರಕ್ಷಾ ಸಂಕಲ್ಪ ಸಮಾವೇಶದ ಸಂಕಲ್ಪಗಳು
ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನಕ್ಕೆ ಚಾಲನೆ
`ಮಹಾನದಿ' ಕೃತಿಗೆ ವೀಚಿ ಸಾಹಿತ್ಯ ಪ್ರಶಸ್ತಿ
ಪರೀಕ್ಷೆಯಲ್ಲಿ ಪಾಸಾದ `ಪೃಥ್ವಿ-೨' ಕ್ಷಿಪಣಿ
ಚುನಾವಣೆ ಗೆಲ್ಲಲು ಉದ್ಯಮಿಗಳ ಹಣ: ದೇವೇಗೌಡ
ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ
|