Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 16 November 2006 12:47 PM

ಸಚಿನ್-ಕಾಂಬ್ಳಿ ದಾಖಲೆ ಧ್ವಂಸ

 

ಹೈದರಾಬಾದ್: ಹೈದಾರಬಾದಿನ ಸೈಂಟ್ ಪೀಟರ್ಸ್ ಪ್ರೌಢಶಾಲೆಯ ಬಿ. ಮನೋಜ್ ಕುಮಾರ್ ಹಾಗೂ ಮಹಮ್ಮದ್ ಶಹಬಾಜ್ ತಾಂಬಿ ಅಜೇಯ ೭೨೧ ರನ್‌ಗಳ ಜೊತೆಯಾಟದಲ್ಲಿ ಪಾಲ್ಗೊಂಡು ಸಚಿನ್ ಹಾಗೂ ವಿನೋದ್ ಕಾಂಬ್ಳಿ ಅವರ ಶಾಲಾ ದಿನದ ದಾಖಲೆಯ ಜೊತೆಯಾಟವನ್ನು ಮುರಿದಿದ್ದಾರೆ.
 

ಬೊವೆನ್‌ಪಳ್ಳಿಯ ಸೈಂಟ್ ಪೀಟರ್ಸ್ ಪ್ರೌಢಶಾಲೆ ಹಾಗೂ ಸೈಂಟ್ ಫಿಲಿಫ್ ಪ್ರೌಢಶಾಲೆ ನಡುವೆ ನಡೆದ ೧೩ ವರ್ಷ ವಯೋಮಿತಿ ಒಳಗಿನವರ ಪಂದ್ಯಾವಳಿಯಲ್ಲಿ ಸೈಂಟ್ ಪೀಟರ್ಸ್ ಪ್ರೌಢಶಾಲೆ ೭೦೦ ರನ್‌ಗಳ ಬೃಹತ್ ಅಂತರದ ಜಯ ಗಳಿಸಿತು. ಸೈಂಟ್ ಫಿಲಿಫ್ ಪ್ರೌಢಶಾಲೆ ಕೇವಲ ೨೧ ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು.
 

ಶಹಬಾಜ್ ತಾಂಬಿ ಅಜೇಯ ೩೨೪ ಹಾಗೂ ಮನೋಜ್ ಕುಮಾರ್ ಅಜೇಯ ೩೨೦ ರನ್ ಗಳಿಸಿದರು. ಸೈಂಟ್ ಪೀಟರ್ಸ್ ಪ್ರೌಢಶಾಲೆಯ ಪರ ಅಕ್ರಮ್ ೧೧ ರನ್ನಿತ್ತು ೭ ವಿಕೆಟ್ ಕಬಳಿಸಿದರು.
 

ಸೈಂಟ್ ಪೀಟರ್ಸ್ ಪ್ರೌಢಶಾಲೆಯ ತಂಡ ೪೦ ಓವರ್ ಗಳಲ್ಲಿಗಳಿಸಿದ ೭೨೧ ರನ್‌ಗಳು ಕೂಡ ದಾಖಲೆ ಸೇರಲಿದೆ. ಈವರೆಗೂ ಉತ್ತರ ಕ್ಯಾಲಿಫೋರ್ನಿಯಾ ಲೀಗ್‌ನಲ್ಲಿ ತಂಡವೊಂದು ೪೫ ಓವರ್‌ಗಳಲ್ಲಿ ಗಳಿಸಿದ ೬೩೦/೫ ರನ್‌ಗಳು ದಾಖಲೆಯಾಗಿತ್ತು.
 

೧೯೮೭-೮೮ ರಲ್ಲಿ ವಿನೋದ್ ಕಾಂಬ್ಳಿ ಹಾಗೂ ಸಚಿನ್ ತೆಂಡೂಲ್ಕರ್ ಶಾರದಾಶ್ರಮ ಶಾಲೆಯ ಪರ ಗಳಿಸಿದ್ದ ೬೬೪ ರ ಜೊತೆಯಾಟ ಈವರೆಗೂ ದಾಖಲೆಯಾಗಿ ಉಳಿದಿತ್ತು.

 

ಇನ್ನಷ್ಟು

ಫ್ರಾನ್ಸ್ ದೇಶದ ಉನ್ನತ ಪ್ರಶಸ್ತಿಗೆ ಲತಾಜೀ ಆಯ್ಕೆ

ಕರ್ನಾಟಕಕ್ಕೆ ಸದ್ಯದಲ್ಲೆ ವಿದ್ಯುತ್‌ಚಾಲಿತ ಬಸ್ಸು

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ -ಅಧಿವೇಶನದಲ್ಲಿ ಹೋರಾಟ

ಸನ್ ಫೀಸ್ಟ್ ಚಿತ್ರ ಪ್ರಶಸ್ತಿ ವಿತರಣೆ

ಚಿತ್ರೋದ್ಯಮ ಬಿಕ್ಕಟ್ಟಿಗೆ ಸಿಎಂ ಪರಿಹಾರ

ಕರ್ನಾಟಕದ ಕೈಯಿಂದ ಜಾರಲಿದೆಯೆ? ಕಾರವಾರ!

ಕಬ್ಬು ಬೆಳೆಗಾರರಿಂದ ಅನಿರ್ಧಿಷ್ಟ ಮುಷ್ಕರ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com