ಆ.೧೪ರಿಂದ ಯುನಿಟೆಕ್ ತ್ರಿಕೋಣ ಸರಣಿ
ಕೊಲೊಂಬೊ: ಶ್ರೀಲಂಕಾ, ಭಾರತ ಹಾಗೂ ದಕ್ಷಿಣ ಆಫ್ರಿಕಾ
ತಂಡಗಳ ನಡುವಿನ ಯುನಿಟೆಕ್ ಕಪ್ ತ್ರಿಕೋಣ ಸರಣಿ ಆಗಸ್ಟ್ ೧೪ರಂದು
ಆರಂಭವಾಗಲಿದೆ.
ಮೊದಲ
ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು
ಸೆಣಸಲಿವೆ. ಆದರೆ ಮೊದಲ ಪಂದ್ಯಕ್ಕೆ ಮಳೆ ಅಡ್ಡಗಾಲು ಹಾಕುವ ಎಲ್ಲ
ಸಾಧ್ಯತೆಗಳು ದಟ್ಟವಾಗಿದೆ.
ಕಳೆದೆರಡು ದಿನಗಳಿಂದ ಕೊಲೊಂಬೊದಲ್ಲಿ ಮಳೆ ಸುರಿಯುತ್ತಿದ್ದು ಮುಂದಿನ
ಐದು ದಿನ ಇದೆ ರೀತಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ
ತಿಳಿಸಿದೆ.
ಹಾಗಾಗಿ
ಮೊದಲೆರಡು ಪಂದ್ಯಗಳು ರದ್ದಾಗುವ ಸಂಭವವಿದೆ. ಎರಡನೇ ಪಂದ್ಯ
ಅಗಸ್ಟ್ ೧೬ ರಂದು ಭಾರತ ಮತ್ತು ಶ್ರೀಲಂಕಾ ವಿರುದ್ಧ ನಡೆಯಲಿದೆ.