|
ಮದ್ದು ಸೇವಿಸಿ ನಿಷೇಧಕ್ಕೊಳಗಾದ ಅಖ್ತರ್, ಆಸೀಫ್
ಕರಾಚಿ: ಉದ್ದೀಪನಾ ಮದ್ದು ಸೇವಿಸಿದ್ದರಿಂದ ಪಾಕಿಸ್ತಾನ ಕ್ರಿಕೇಟ್
ಮಂಡಳಿ (ಪಿಸಿಬಿ) ಶೋಯೇಬ್ ಅಖ್ತರ್ ಮತ್ತು ಮೊಹಮ್ಮದ್ ಆಸೀಫ್
ಮೇಲೆ ಕ್ರಮವಾಗಿ ೨ ಮತ್ತು ೧ ವರ್ಷದ ನಿಷೇಧ ಹೇರಿದೆ.
ಪಿಸಿಬಿಯ ಮಾದಕ ದ್ರವ್ಯ ನ್ಯಾಯಮಂಡಳಿ ೧೯ ಪುಟಗಳ ವಿಸ್ತಾರ
ಹೇಳಿಕೆಯನ್ನು ಬಿಡುಗಡೆ ಮಾಡಿ ಈ ತೀರ್ಪಿತ್ತಿದೆ.
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಸಮಯದಲ್ಲಿ ನಡೆಸಿದ
ಪರೀಕ್ಷೆಯಲ್ಲಿ ಇವರಿಬ್ಬರೂ ಉದ್ದೀಪನಾ ಮದ್ದನ್ನು ಸೇವಿಸಿದ್ದಾರೆಂದು
ಬಹಿರಂಗ ಗೊಂಡಿತ್ತು. ಕೂಡಲೆ ಪಾಕಿಸ್ತಾನ ಈ ಆಟಗಾರರನ್ನು ಹಿಂದಕ್ಕೆ
ಕರೆಯಿಸಿಕೊಂಡಿತ್ತು.
ಮುಂದಿನ ವರ್ಷ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ
ನಿಷೇಧಕ್ಕೊಳಗಾದ ಈ ಆಟಗಾರರು ಅಲಭ್ಯರಾಗಿದ್ದು ಪಾಕಿಸ್ತಾನ
ತಂಡಕ್ಕೆ ನುಂಗಲಾರದ ತುತ್ತಾಗಿದೆ.
ನಿಷೇಧದ ವಿರುದ್ಧ ಮನವಿ ಸಲ್ಲಿಸಲಿರುವ ಅಖ್ತರ್: `೨ ವರ್ಷ ಪಿಸಿಬಿ
ಹೇರಿರುವ ನಿಷೇಧದ ವಿರುದ್ಧ ಶೋಯೇಬ್ ಮೇಲ್ಮನವಿ
ಸಲ್ಲಿಸಲಿದ್ದಾರೆ. ತಂಡದ ವೈದ್ಯರಿಗೆ ಹೇಳದೆ ಕೆಲವು ವಿಟಮಿನ್
ಮತ್ತು ನೈಸರ್ಗಿಕ ಔಷಧಗಳನ್ನು ಸೇವಿಸಿದ್ದೇ ನ್ಯಾಯ ಮಂಡಳಿ ಈ
ನಿರ್ಣಯಕ್ಕೆ ಬರಲು ಕಾರಣವಾಯಿತು' ಎಂದು ಶೋಯೆಬ್ ಅಖ್ತರ ಅವರ
ಗೆಳೆಯ ವೈದ್ಯ ತೌಸೀಫ್ ರಜಾಕ್ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನಷ್ಟು
ಹೈ-ಕ ಗಡಿಯಲ್ಲಿ
ನ.೧ರಂದು ಕಪ್ಪು ದಿನಾಚರಣೆ
ಸನ್ ಟಿವಿ ಯಿಂದ ೩ ಹೊಸ
ಎಫ್‌ಎಂ ವಾಹಿನಿ
ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ
ಪ್ರಿಯದರ್ಶಿನಿ ಕೊಲೆ: ಹಂತಕನಿಗೆ ಗಲ್ಲು
ರಾಷ್ಟ್ರೀಯ ಹೆದ್ದಾರಿ-೪ ಬಂದ್‌ಗೆ ಕರೆ
ಮತ್ಸ್ಯೋತ್ಪಾದನೆ: ವಿಶ್ವದಲ್ಲಿ ಭಾರತಕ್ಕೆ ೨ನೇ ಸ್ಥಾನ
ಐಟಿ ಕ್ವಿಜ್‌ನಿಂದ ಗಿನ್ನೆಸ್‌ಗೆ ಸೇರಲು ಟಿಸಿಎಸ್ ಉತ್ಸುಕ
ಭಾರತದಲ್ಲಿ ೩೭ ದಶಲಕ್ಷ ದೃಷ್ಟಿ ಹೀನರು!!
ಸೋನಿಯಾ ವಿರುದ್ಧ ತಿರುಗಿಬಿದ್ದ ನಟವರ್
ದಕ್ಷಿಣ ಅಫ್ರಿಕ ಸರಣಿಗೆ ಕುಂಬ್ಳೆ, ಜಾಫರ್, ಜಹೀರ್
ಜೋಗ ಆಗಲಿದೆ ಮೈಸೂರಿನ ಬೃಂದಾವನದಂತೆ!!
ಮೊನ್ನೆಯಷ್ಟೆ
ನಿಧನರಾದರೆ ಬೋಸ್?!!
ಕನಕ ಪೀಠಕ್ಕೆ ಈಗ ಹೊಸ ಜಗದ್ಗುರು
|