|
ಉದ್ಘಾಟನೆಗೊಂಡ ೭೩ನೇ ಸಾಹಿತ್ಯ ಸಮ್ಮೇಳನ
ಲೇಖನ ಹಾಗೂ ಚಿತ್ರಗಳು - ಮಲೆನಾಡಿಗ
malenadiga@gmail.com
ಶಿವಮೊಗ್ಗ: ಡಿ.೨೦ರಿಂದ ೨೩ರ ವರೆಗೆ ನಡೆಯಲಿರುವ ೭೩ನೇ
ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಶಿವಮೊಗ್ಗದಲ್ಲಿ
ಅಭೂತಪೂರ್ವಕವಾಗಿ ಆರಂಭವಾಗಿದೆ.
ನೆಹರೂ ಕ್ರೀಡಾಂಗಣದಲ್ಲಿ ನಡೆದ ಪ್ರಾರಂಭೋತ್ಸವದಲ್ಲಿ
ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಧ್ವಜಾರೋಹಣವನ್ನು
ನೆರವೇರಿಸಿದರು. ಪ್ರೊ.ಚಂದ್ರಶೇಖರ ಪಾಟೀಲ್ ಕನ್ನಡ ಸಾಹಿತ್ಯ
ಪರಿಷತ್‌ನ ಧ್ವಜಾರೋಹಣ ಮಾಡಿದರು. ಪ್ರೊ. ಕೆ.ಎಸ್. ನಿಸಾರ್
ಅಹಮ್ಮದ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.
ಮಧ್ಯಾಹ್ನ ೨ ಗಂಟೆಗೆ ಸಮ್ಮೇಳನಾಧ್ಯಕ್ಷ ಪ್ರೊ. ಕೆ.ಎಸ್. ನಿಸಾರ್
ಅಹಮ್ಮದ್ ನೇತೃತ್ವದಲ್ಲಿ `ಕನ್ನಡ ಭುವನೇಶ್ವರಿ ಮೆರವಣಿಗೆ
ಹೊರಡಲಿದೆ. ರಾಜ್ಯ ಜಲಸಂಪನ್ಮೂಲ ಸಚಿವ ಕೆ.ಎಸ್.ಈಶ್ವರಪ್ಪ
ಮೆರವಣಿಗೆ ಉದ್ಘಾಟಿಸಲಿದ್ದಾರೆ. ಇದರಲ್ಲಿ ಮುಖ್ಯ ಅತಿಥಿಗಳಾಗಿ
ಶಾಸಕರಾದ ಜಿ.ಬಸವಣ್ಯಪ್ಪ, ಕುಮಾರ್ ಬಂಗಾರಪ್ಪ, ಆರಗ
ಜ್ಞಾನೇಂದ್ರ, ಬಿ.ಕೆ. ಸಂಗಮೇಶ್, ಬೇಳೂರು ಗೋಪಾಲಕೃಷ್ಣ,
ಹರತಾಳು ಹಾಲಪ್ಪ ಮತ್ತು ವಿಧಾನ ಪರಿಷತ್ ಸದಸ್ಯರುಗಳಾದ
ಮೀರ್ ಅಜೀಜ್ ಅಹ್ಮದ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್
ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಚಿತ್ರಗಳು






|