|
ಇಂದು ನುಡಿಸಿರಿಗೆ ಸಂಭ್ರಮದ ತೆರೆ
ವರದಿ : ಹರೀಶ್ ಕೆ. ಆದೂರು
ಮಂಗಳೂರು : ಕಳೆದ ಎರಡು ದಿನಗಳಿಂದ
ನಡೆಯುತ್ತಿರುವ ನಾಡು ನುಡಿಯ ಸಮ್ಮೇಳನ ಆಳ್ವಾಸ್ ನುಡಿಸಿರಿ
-೨೦೦೬ಇಂದು ಸಮಾರೋಪಗೊಳ್ಳಿಲಿದೆ.
ಮೂರುದಿನಗಳ ಕನ್ನಡಾಂಬೆಯ ಅಗ್ರಪೂಜೆ ಇಂದು ಸಂಜೆ `ಆಳ್ವಾಸ್
ನುಡಿಸಿರಿ ಪ್ರಶಸ್ತಿ'ಪ್ರದಾನ ಸಮಾರಂಭದೊಂದಿಗೆ
ಸಮಾಪನಗೊಳ್ಳಲಿದೆ.
ಡಾ.ಪಾಟೀಲ ಪುಟ್ಟಪ್ಪರೂ ಸೇರಿದಂತೆ ಒಟ್ಟು ಹತ್ತು ಮಂದಿಗೆ ಇಂದು
ನುಡಿಸಿರಿಯ ಪ್ರಶಸ್ತಿ ಪ್ರದಾನ ನಡೆಯಲಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ
ಪ್ರಶಸ್ತಿ ಪ್ರದಾನ ನಡೆಸಲಿದ್ದಾರೆ. ಗೃಹಮಂತ್ರಿಗಳಾದ ಎಂ.ಪಿ ಪ್ರಕಾಶ್
ಸಮಾರೋಪ ಭಾಷಣ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ನುಡಿಸಿರಿ
೨೦೦೬ರ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ವಹಿಸಲಿದ್ದಾರೆ.
ಸಂಜೆ ೩ರಿಂದ ೫.೩೦ರ ತನಕ ಸಮಾರೋಪ ಸಮಾರಂಭ
ನಡೆಯಲಿದೆ. ಸುವರ್ಣ ಕರ್ನಾಟಕ ಚಿಂತನೆ ಎಂಬ ನಾಲ್ಕನೆಯ ಗೋಷ್ಠಿ
ಇಂದು ನಡೆಯಲಿದೆ. ಸಮೂಹ ಮಾಧ್ಯಮಗಳ ಒಲವು ನಿಲುವು,
ನನ್ನ ಕನಸಿನ ಕರ್ನಾಟಕ, ಮತ್ತು ಆಂದೋಲನಗಳು ರೂಪಿಸಿದ
ಕರ್ನಾಟಕ ಎಂಬ ವಿಚಾರದಲ್ಲಿ ಪ್ರಬಂಧ ಮಂಡನೆ ನಡೆಯಲಿದೆ.
ಸಮ್ಮೇಳನದ ಹಿಮ್ಮಾಹಿತಿ ಎಂಬ ಒಂದು ಗೋಷ್ಠಿ ನಡೆಯಲಿದ್ದು
ಡಾ.ರಾಘವೇಂದ್ರ ಪಾಟೀಲ, ಪ್ರೇಮಾಭಟ್ ಮತ್ತು ಪ್ರೊ.ಮಲ್ಲಿಕಾ
ಇದರಲ್ಲಿ ಸಮ್ಮೇಳನ ಹಿಮ್ಮಾಹಿತಿ ನೀಡಲಿದ್ದಾರೆ.
ಕವಿಸಮಯ ಕವಿನಮನದಲ್ಲಿ ಪ್ರೊ.ಮಾಧವಿ ಭಂಡಾರಿ, ಆನಂದ
ಝಂಜರವಾಡ ಭಾಗವಹಿಸಲಿದ್ದಾರೆ. ಎಸ್ ಕೆ ಕರೀಂಖಾನ್
ಸಂಸ್ಮರಣೆಯನ್ನು ಡಾ.ಹಿಚಿ ಬೋರಲಿಂಗಯ್ಯ ಮಾಡಲಿದ್ದಾರೆ.
ಕೆಂಪುದೀಪದ ಹೆದರಿಕೆ!
ಪ್ರಬಂಧ ಮಂಡನೆ ಮಾಡುವವರಿಗೆ ಕೆಂಪು ದೀಪದ
ಹೆದರಿಕೆಯಿತ್ತು. ಸಮಯದ ಮಿತಿಯನ್ನು ಸಮ್ಮೇಳನದ
ಸಂಘಟಕರು ಮಾಡಿದ್ದು, ಅವಧಿ ಮೀರಿದಾಕ್ಷಣ ಚೀಟಿಯ ಬದಲಾಗಿ
ಕೆಂಪುದೀಪ ಬೆಳಗುತ್ತಿತ್ತು. ಅಂತೂ ಸಂಪೂರ್ಣ ಸಮಯ ಪ್ರಜ್ಞೆಗೆ
ಕೆಂಪುದೀಪ ಸಹಕಾರಿಯಾಗುತ್ತಿತ್ತು. ಪ್ರತಿಯೊಂದು
ಕಾರ್ಯಕ್ರಮಗಳು ಸಮಯಕ್ಕೆ ಸರಿಯಾಗಿಯೇ
ನಡೆಯುತ್ತಿತ್ತು.
ಪೂರಕ ಮಾಹಿತಿ
ನುಡಿಸಿರಿಯ ಮುಖ್ಯಾಂಶಗಳು
ಬಸದಿಗಳ ಬೀಡಲ್ಲಿ ಕನ್ನಡದ ಬಾವುಟ
ಸಾಹಿತಿ ಕಂಬಾರರಿಗೆ `ಆಳ್ವಾಸ್ ನುಡಿಸಿರಿ ೨೦೦೬' ಸಾರಥ್ಯ
|