|
ಸಾರ್ಥಕ್ಯವೆನಿಸಿದ ಕವಿ
ಸಮಯ-ಕವಿನಮನ
ಮನಬಿಚ್ಚಿ ಮಾತನಾಡಿದ ಕನ್ನಡದ ಕವಿವರ್ಯರು
ವರದಿ : ಹರೀಶ್ ಕೆ. ಆದೂರು
ಚಿತ್ರಗಳು : ಸುಮ, ಮೂಡಬಿದ್ರಿ
ಕವಿಗಳಿಗೆ ಮನಬಿಚ್ಚಿ ಮಾತನಾಡುವ ಅವಕಾಶ ಪ್ರಾಪ್ತವಾದದು
ನುಡಿಸಿರಿಯ ಕವಿಸಮಯ-ಕವಿನಮನದಲ್ಲಿ. ಹೌದು ಇಲ್ಲಿ
ಗೊಂದಲಗಳಿಲ್ಲ. ಒಬ್ಬ ಕವಿ ತನ್ನ ಕವನದ ಸ್ಪೂರ್ತಿಯನ್ನು
ಕವನಕ್ಕೆ ಪ್ರೇರಣೆಯಾದ ಅಂಶವನ್ನು ಮನಬಿಚ್ಚಿ ಇಲ್ಲಿ
ಹೇಳುತ್ತಿದ್ದರು. ನಂತರ ಕವನ ವಾಚಿಸುತ್ತಿದ್ದರು. ಅವರು ವಾಚಿಸಿದ
ಕವನಗಳನ್ನು ಆಳ್ವಾಸ್ ವಿದ್ಯಾರ್ಥಿ ವೃಂದ ಎಂ.ಎಸ್ ಗಿರಿಧರ್
ನಿರ್ದೇಶನದೊಂದಿಗೆ ಹಾಡಿ ರಂಜಿಸುತ್ತಿದ್ದರು.

ತನ್ಮೂಲಕ ಕವಿಗಳಿಗೆ ತಾನು ಬರೆದ ಕವನಕ್ಕೆ ಒಂದು ಗೌರವ
ನೀಡುವಲ್ಲಿ ನುಡಿಸಿರಿ ಯಶಸ್ವಿಯೆನಿಸಿತು.
ದ್ವಿತೀಯ ದಿನ ಲಲಿತಾ ಸಿದ್ಧಬಸವಯ್ಯ ಎರಡು ಕವನ ವಾಚಿಸಿದರು.
ತೆಂಕಣ ಬಾನು ಮತ್ತು ಕನ್ನಡ ಪದವಿರಲಿ ತಾಯೇ ಎಂಬ
ಭಾವನಾತ್ಮಕ ಕವನಗಳು ನಾಡು ನುಡಿಯ ಬಗೆಗಿನ ಅವರ
ತುಡಿತವನ್ನು ಬಿಂಭಿಸುತ್ತಿತ್ತು.
ಶಾಶ್ವತ ಬರಗಾಲದ ಪ್ರದೇಶವಾದ ತುಮಕೂರಿನಿಂದ ಬಂದ ಲಲಿತಾ
ಸಿದ್ಧಬಸವಯ್ಯ ತನ್ನ ಮಣ್ಣಿನ ಕಂಪನ್ನು ಕವನದಲ್ಲಿ
ಸೆರೆಹಿಡಿದಿದ್ದಾರೆ.
ಇಲ್ಲಿನ ಮಣ್ಣ ಕಂಪು ಇವರ ಕವನದಲ್ಲಿ ಸ್ಪಷ್ಟವಾಗಿ ಬಿಂಭಿಸುತ್ತಿತ್ತು.
ತೆಂಕಣ ಬಾನು ಎಂಬ ಇವರ ಕವನ `ಕಾಕಡ ನಮ್ಮ ಬಯಲು
ಸೀಮೆಯ ಹೂವು...' ಹೀಗೆ ಮುಂದುವರಿಯುತ್ತಿತ್ತು.
ಕಳೆದ ೧೫ವರ್ಷಗಳಿಂದ ಸಾಹಿತ್ಯ ರಚನೆಯಲ್ಲಿ ತೊಡಗಿದ್ದ ರಜಿಯಾ
ಡಿ.ಬಿ ಮೂಲತ: ಬಳ್ಳಾರಿ ಜಿಲ್ಲೆಯವರು. ಇದೀಗ ಸುರತ್ಕಲ್ ನಲ್ಲಿ
ವಾಸವಾಗಿರುವ ಇವರು ದಕ್ಷಿಣ ಕನ್ನಡದ ಜನತೆ, ಇಲ್ಲಿನ
ಮಾಧ್ಯಮಗಳು, ಕವಿಗಳು ತನ್ನನ್ನು ಈ ಎತ್ತರಕ್ಕೇರಿಸಿದರು
ಎಂದು ಬಿಚ್ಚು ನುಡಿಗಳನ್ನು ಆಡುತ್ತಾರೆ.
ಸ್ತ್ರೀ ಸಂಸ್ಕೃತಿಯ ಸುತ್ತ ಹೊಸೆದ ಇವರ ಕವನಗಳು ಅತ್ಯಂತ
ಭಾವನಾತ್ಮಕವಾಗಿ ಮೂಡಿಬಂದಿದ್ದವು. ತಂತು ಮತ್ತು ಪ್ರಕೃತಿಯ
ಬಗೆಗಿನ ಕವನಗಳನ್ನು ಇವರು ವಾಚಿಸಿದರು.
 
ಕಲಾವಿದೆ ಎಸ್ ಆನಂದ ಬೃಹತ್ ಬಿಳಿ ಹಾಳೆಯಲ್ಲಿ ಸುಂದರವಾಗಿ
ಚಿತ್ರರಚಿಸುತ್ತಿದ್ದರು. ಕವಿಯ ಕವನಗಳ ಗಾಯನವಾಗುತ್ತಿದ್ದಂತೆ
ಕಲಾವಿದನ ಕುಂಚ ಚಿತ್ತಾರದಲ್ಲಿ ತೊಡಗುತ್ತಿತ್ತು. ಹಾಡು
ಮುಕ್ತಾಯಗೊಳ್ಳುತ್ತಿದ್ದಂತೆ ಬೃಹತ್ ಹಾಳೆಯಲ್ಲಿ ಭಾವನಾತ್ಮಕ
ಹಾಡಿನ ಚಿತ್ರ ರೂಪಕವೊಂದು ಸೃಷ್ಠಿಯಾಗುತ್ತಿತ್ತು. ಇದು
ಸಾಹಿತ್ಯಾಸಕ್ತರ ಮನಗೆಲ್ಲುತ್ತಿತ್ತು.!
ಪೂರಕ ಮಾಹಿತಿ
ನುಡಿಸಿರಿಯ ಮುಖ್ಯಾಂಶಗಳು
ಬಸದಿಗಳ ಬೀಡಲ್ಲಿ ಕನ್ನಡದ ಬಾವುಟ
ಸಾಹಿತಿ ಕಂಬಾರರಿಗೆ `ಆಳ್ವಾಸ್ ನುಡಿಸಿರಿ ೨೦೦೬' ಸಾರಥ್ಯ
|