|
ನುಡಿಸಿರಿ-೨೦೦೬ ಇದರ ದ್ವಿತೀಯ ದಿನದ ಪ್ರಥಮ ಗೋಷ್ಠಿ
ವರದಿ : ಹರೀಶ್ ಕೆ. ಆದೂರು
ಆಳ್ವಾಸ್ ನುಡಿಸಿರಿ-೨೦೦೬ ಇದರ ದ್ವಿತೀಯ ದಿನದ ಪ್ರಥಮ ಗೋಷ್ಠಿ
ಗಡಿಭಾಗದ ಕನ್ನಡಿಗರ ಸಮಸ್ಯೆಗಳನ್ನು
ತೆರೆದಿಡುವಲ್ಲಿಯಶಸ್ವಿಯಾಯಿತು. ಹಲವು ಸಂದೇಹಗಳಿಗೆ
ಉತ್ತರದೊರಕಿಸುವಲ್ಲಿ ಯಶಸ್ವಿಗಳಿಸಿತು ಎಂದರೆ ತಪ್ಪಾಗಲಾರದು.
 
ಅಸಿಷ್ಣುತೆಯ ಮನೋಭಾವ-ಡಾ.ಸುಬ್ರಹ್ಮಣ್ಯ ಭಟ್: ಗಡಿನಾಡ
ಕಾಸರಗೋಡಿನ ಕಚೇರಿಗಳಲ್ಲಿ ಅಧಿಕಾರಿವರ್ಗದವರು ಅಸಹಿಷ್ಣುತಾ
ಮನೋಭಾವವನ್ನು ತಳೆಯುತ್ತಾರೆ. ಇದು ಕನ್ನಡಿಗರ ಪಾಲಿಗೆ
ದೊಡ್ಡ ಸಮಸ್ಯೆಯಾಗಿದೆ ಎಂದು ಪ್ರಬಂಧ ಮಂಡಿಸಿದ
ಡಾ.ಸುಬ್ರಹ್ಮಣ್ಯ ಭಟ್ ವಿಷಾಧಿಸಿದರು.
ಕಲೆ,ಸಂಸ್ಕೃತಿ,ಸಾಂವಿಧಾನಿಕ, ಶೈಕ್ಷಣಿಕ, ದೇವಸ್ಥಾನ ಹೀಗೆ
ಎಲ್ಲೆಲ್ಲೂ ಕನ್ನಡಕ್ಕೆ ಅಪಚಾರವಾಗುತ್ತಿದೆ ಎಂದು ನಿರೂಪಿಸಿದ ಅವರು,
ಮಲೆಯಾಳಿಗಳಿಂದಾಗಿ ಸಾಂಸ್ಕೃತಿಕವಾಗಿಯೂ ಕನ್ನಡದ
ಸ್ಥಾನಮಾನಕ್ಕೆ ತೀವ್ರ ಹೊಡೆತಬಿದ್ದಿದೆ ಎಂದರು. ನಾಡ ಹಬ್ಬ
ನವರಾತ್ರಿ, ದೀಪಾವಳಿಗಳು ಇಂದು ಕಳೆಗುಂದತೊಡಗಿದೆ. ಓಣಂ ಆಚರಣೆ
ವಿಜ್ರಂಭಿಸತೊಡಗಿದೆ.ಇದಕ್ಕೆ ಸರಕಾರದ ಪ್ರತ್ಯಕ್ಷ ಬೆಂಬಲವೂ
ದೊರಕುತ್ತಿರುವುದು ಕನ್ನಡಿಗರನ್ನು ಭ್ರಮನಿರಸರನ್ನಾಗಿಸಿದೆ
ಎಂದರು.
ಕಾಸರಗೋಡಿನಲ್ಲಿ ತೆಂಕಣ ಕೇರಳದ ಮಲೆಯಾಳಿ ಸಮುದಾಯ
ತುಂಬಿ ಹೋಗಿದೆ ಎಂದು ವಿಷಾಧಿಸಿದ ಸುಬ್ರಹ್ಮಣ್ಯ ಭಟ್, ಇದರಿಂದಾಗಿ
ಕನ್ನಡಿಗರ ಸಂಖ್ಯೆ, ಕನ್ನಡದ ಅಭಿಮಾನ, ಸ್ಥಾನಮಾನ
ಕುಂದುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಕನ್ನಡದ ಸ್ಥಿತಿ ವಿನಾಶದಂಚಿನಲ್ಲಿದೆ ಎಂದ ಪ್ರೊ.
ಶ್ರೀನಿವಾಸ ಕುಲಕರ್ಣಿ ತೀವ್ರ ಕಳವಳಿ ವ್ಯಕ್ತಪಡಿಸಿದ್ದಾರೆ. ಮರಾಠಿ
ಭಾಷಿಗರ ಒತ್ತಡದಿಂದ ಕನ್ನಡಿಗರು ಮುದುಡಿ ಹೋಗಿದ್ದಾರೆ.
ವ್ಯಾವಹಾರಿಕವಾಗಿ ಅನಿವಾರ್ಯವಾಗಿ ಮರಾಠಿ ಭಾಷೆಗೆ ಇಲ್ಲಿನ ಕನ್ನಡಿಗರು
ಒಗ್ಗಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದವರು
ಕಳವಳ ವ್ಯಕ್ತಪಡಿಸಿದರು
ಬೆಳಗಾವಿಯಲ್ಲಿ ಮರಾಠಿ ಭಾಷಿಗರ ದಾಂಧಲೆ, ದುಷ್ಕೃತ್ಯಗಳು,
ಕಾನೂನು ಬಾಹಿರ ಚಟುವಟಿಕೆಗಳು ಅತ್ಯಂತ ಹೆಚ್ಚು
ನಡೆಯುತ್ತಿದ್ದರೂ, ಅಧಿಕಾರಿ ವರ್ಗದ ಮೌನ ಪರೋಕ್ಷ
ಪ್ರೋತ್ಸಾಹ ನೀಡಿದಂತಾಗುತ್ತಿದೆ ಎಂದವರು ವಿಷಾಧಿಸಿದರು.
ನಾವು ಸಂಸ್ಕೃತಿಯಲ್ಲಿ ಬದುಕುವುದನ್ನು ಮೊದಲು ಕಲಿಯಬೇಕು
ಆಗ ತನ್ನಷ್ಟಕ್ಕೇ ಕನ್ನಡ ಉಳಿಯುವುದು ಎಂಬುದು ಡಾ.ತಾಳ್ತಜೆ
ವಸಂತ ಕುಮಾರ್ ಅವರ ಅಭಿಪ್ರಾಯ. ಹೊರನಾಡು ವಿಚಾರದಲ್ಲಿ
ಪ್ರಬಂಧ ಮಂಡಿಸಿದ ಅವರು ಮುಂಬಯಿಯನ್ನು ಕೇಂದ್ರೀಕರಿಸಿ
ಮಾತನಾಡಿದರು.
ನಾವು ಕನ್ನಡದಲ್ಲಿ ಬದುಕುವುದನ್ನು ರೂಢಿಸಿಕೊಳ್ಳಬೇಕೆಂದ
ಅವರು, ಇದು ಸಾರ್ವತ್ರಿಕವಾಗಿ ಆದರೆ ತನ್ನಿಂದ ತಾನೇ ಕನ್ನಡ
ಉಳಿಯುತ್ತದೆ ಎಂದರು.
ಹೊರನಾಡಿನಲ್ಲೂ ಕನ್ನಡಿಗರು ಸಾಕಷ್ಟು ಪ್ರಾಭಲ್ಯ ಸ್ಥಾಪಿಸಿದ್ದಾರೆಂದ
ತಾಳ್ತಜೆ, ರಾಜಕೀಯ ಶಕ್ತಿಯ ಕೇಂದ್ರವಾಗಿ, ಈ ಕ್ಷೇತ್ರದಲ್ಲಿ
ಮುಂಚೂಣಿಯಲ್ಲಿ ಕನ್ನಡಿಗರು ಮುಂಬಯಿನಲ್ಲಿ
ಮಿಂಚುತ್ತಿದ್ದಾರೆಂದರು.
ಉದಾರವಾಗಿ ಯೋಚಿಸುವ ಮನೋಭಾವವನ್ನು ಕನ್ನಡಿಗರು
ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ನುಡಿಸಿರಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಆಳ್ವಾಸ್ ಎಜುಕೇಶನ್
ಫೌಂಡೇಶನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ವೇದಿಕೆಯಲ್ಲಿ
ಉಪಸ್ಥಿತರಿದ್ದರು.
ಪೂರಕ ಮಾಹಿತಿ
ನುಡಿಸಿರಿಯ ಮುಖ್ಯಾಂಶಗಳು
ಬಸದಿಗಳ ಬೀಡಲ್ಲಿ ಕನ್ನಡದ ಬಾವುಟ
ಸಾಹಿತಿ ಕಂಬಾರರಿಗೆ `ಆಳ್ವಾಸ್ ನುಡಿಸಿರಿ ೨೦೦೬' ಸಾರಥ್ಯ
|