Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 25 November 2006 04:22 PM

ಆಳ್ವಾಸ್ ನುಡಿಸಿರಿ- ೨೦೦೬ ರ ಪೂರ್ಣ ವರದಿಗಳು

ರಾಜಕಾರಣಿಗಳು ಐಟಿ, ಬಿಟಿ ವಕ್ತಾರರಾಗುತ್ತಿದ್ದಾರೆ, ಕನ್ನಡದ ಹೆಸರಿನಲ್ಲಿ ದುಡ್ಡು ಪೋಲು ಮಾಡದಿರಿ- ಕಂಬಾರ


 

ವರದಿ : ಹರೀಶ್ ಕೆ. ಆದೂರು

ಚಿತ್ರ ಕೃಪೆ : ಪ್ರಕಾಶಕ.ಕಾಂ

 

ರಾಜಕಾರಣಿಗಳು ಐಟಿ, ಬಿಟಿ ವಕ್ತಾರರಾಗುತ್ತಿದ್ದಾರೆ. ಅಮೆರಿಕಾಕ್ಕೆ ಬೇಕಾದಂತಹ ವ್ಯವಸೆಯನ್ನಷ್ಟೇDr.Chandrashekar Kambar in Alva's Nudisiri-2006 ಮಾಡುತ್ತಿದ್ದಾರೆ ವಿನ: ಇಲ್ಲಿನ ಮಕ್ಕಳ ಬಗ್ಗೆ ಚಿಂತನೆ ನಡೆಸುತ್ತಿಲ್ಲ ಎಂದು ಡಾ.ಚಂದ್ರಶೇಖರ ಕಂಬಾರ ಮಾತಿನ ಛಾಟಿಯೇಟು ಬೀಸಿದ್ದಾರೆ. ಕನ್ನಡದ ಹೆಸರಿನಲ್ಲಿ ದುಡ್ಡು ಪೋಲು ಮಾಡುವುದು ಸರಿಯಲ್ಲ. ಭಾಷೆಯ ಬೆಳವಣಿಗೆ ದೃಷ್ಠಿಯಿಂದ ಉಪಯುಕ್ತ ಕೆಲಸಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರ, ಸಾಹಿತ್ಯ ಪರಿಷತ್ತು, ಪ್ರಾಧಿಕಾರಗಳು ಚಿಂತನೆ ನಡೆಸಬೇಕಾಗಿದೆ ಎಂದು `ನುಡಿಸಿರಿ-೨೦೦೬'ರ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಿಸಿದ್ದಾರೆ.

 

 

ನುಡಿಸಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಸೀ ಸಂಸ್ಕೃತಿಯನ್ನು ಉಳಿಸುವ ಸಾಹಿತ್ಯ ಇಂದು ಬರಬೇಕಾಗಿದೆ ಎಂದು ಒತ್ತಿ ಹೇಳಿದರು. ನಮ್ಮದನ್ನು ನಾವು ಸ್ವೀಕರಿಸುತ್ತಾ ಹೋಗಬೇಕು. ಆದರೆ ದುರದೃಷ್ಟವಶಾತ್ ನಾವು ಅಂತರಾಷ್ಟ್ರೀಯವಾಗಲು ಹೊರಟಿದ್ದೇವೆ. ಕನ್ನಡದ ಅನುಭವವನ್ನೇ ನಾವು ಬರೆಯಬೇಕು. ಪ್ರಸ್ತುತತೆಗಳನ್ನು ಬರೆಯುತ್ತಾ ಕನ್ನಡ ಉಳಿವಿಗೆ ಶ್ರಮಿಸಬೇಕೆಂದರು.
 

ರಾಜಕಾರಣಿಗಳು ಬೇಡ: ಸಾಹಿತ್ಯ ಸಮ್ಮೇಳನಕ್ಕೆ ರಾಜಕಾರಣಿಗಳು ಬೇಡವೇ ಬೇಡ ಎಂದ ಕಂಬಾರರು, ಅವರಿದ್ದು ಏನುಮಾಡುತ್ತಾರೆ? ಭಾಷೆ, ಸಂಸ್ಕೃತಿಯ ವಿಷಯ ಬಂದಾಗ ಏನು ನಿರ್ಧಾರ ಕೈಗೊಳ್ಳುತ್ತಾರೆಂದು ಪ್ರಶ್ನಿಸಿದರು. ಏನಾದ್ರೂ ಉಪಯೋಗ ಆಗೋದಾದ್ರೆ ಅವರನ್ನೆಲ್ಲಾ ಕರೀಬೇಕು. ಇಲ್ಲಾಂದ್ರೆ ಅಗತ್ಯವೇ ಇಲ್ಲ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಜ್ಞಾನ ಪೀಠ ದೊರಕಲಿDr. Siddalingaiah in Alva's Nudisiri-2006

ನುಡಿಸಿರಿಯ ಅಧ್ಯಕ್ಷ ಪಟ್ಟ ವಹಿಸಿದ್ದ ಕವಿ, ನಾಟಕಗಾರ ಡಾ.ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠದೊಕರಲಿ ಎಂಬ ಆಶ್ರಯ ತುಂಬಿದ ಸಭೆಯಲ್ಲಿ ವ್ಯಕ್ತವಾಯಿತು. ಸಮ್ಮೇಳನ ಉದ್ಘಾಟಿಸಿದ ಡಾ.ಸಿದ್ಧಲಿಂಗಯ್ಯ ತಮ್ಮ ಭಾಷಣದಲ್ಲಿ ಹೇಳಿದಾಗ ತುಂಬಿದ ಸಭೆ ಕರತಾಡನದಮೂಲಕ ಬೆಂಬಲ ಸೂಚಿಸಿತು.

 


 

ಪೂರಕ ಮಾಹಿತಿ

ಆಧುನಿಕ ವಿದ್ಯಮಾನಗಳ ನಡುವೆ ಶಿಕ್ಷಣದ ಸವಾಲುಗಳು ಪ್ರಥಮಗೋಷ್ಠಿಯಲ್ಲಿ ಪರಿಣಾಮಕಾರಿ ಚರ್ಚೆ

ನುಡಿಸಿರಿಯ ಮುಖ್ಯಾಂಶಗಳು

ಬಸದಿಗಳ ಬೀಡಲ್ಲಿ ಕನ್ನಡದ ಬಾವುಟ

ಸಾಹಿತಿ ಕಂಬಾರರಿಗೆ `ಆಳ್ವಾಸ್ ನುಡಿಸಿರಿ ೨೦೦೬' ಸಾರಥ್ಯ


 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com