Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 25 November 2006 04:22 PM

ಆಳ್ವಾಸ್ ನುಡಿಸಿರಿ- ೨೦೦೬ ರ ಪೂರ್ಣ ವರದಿಗಳು

ನುಡಿಸಿರಿಯ ಮುಖ್ಯಾಂಶಗಳು

ಸಮ್ಮೇಳನಕ್ಕಾಗಮಿಸಿದ ಮಾಧ್ಯಮದವರಿಗೆ ಅನುಕೂಲವಾಗುವಂತೆ ಆಧುನಿಕ ರೀತಿಯಲ್ಲಿ ಸುಸಜ್ಜಿತ ಮಾಧ್ಯಮ ಕೇಂದ್ರ ವ್ಯವಸ್ಥೆಗೊಳಿಸಲಾಗಿತ್ತು.

 

ವರದಿ : ಹರೀಶ್ ಕೆ.ಆದೂರು

 

ಎಲ್ಲವೂ ಅಚ್ಚುಕಟ್ಟು

ಸಮ್ಮೇಳನ ಅಂದ್ರೆ ಹೀಗಿರಬೇಕು. ಈ ಮಾತು ಸಭೆಯಲ್ಲಿ ಕುಳಿತಿದ್ದ ಪ್ರತಿಯೊಬ್ಬರ ಬಾಯಲ್ಲೂ ಕೇಳಿಬರುತ್ತಿತ್ತು. ಕಾರಣ ಅಷ್ಟೊಂದು ಅಚ್ಚುಕಟ್ಟು. ಆಡಂಬರವಿಲ್ಲದೆ ವಿಷಯಕ್ಕೆ ಮಹತ್ವ. ಅನಗತ್ಯ ಚರ್ಚೆ, ಭಾಷಣ, ವೇದಿಕೆಬಳಸಿಕೊಳ್ಳುವುದಕ್ಕೆ ಅವಕಾಶವಿರಲಿಲ್ಲ. ನಿಗಧಿಪಡಿಸಿದ ಸಮಯಕ್ಕೆ ಸರಿಯಾಗಿ ಗೋಷ್ಠಿಗಳ ಪ್ರಬಂಧ ಮಂಡನೆಯಾಗುತ್ತಿತ್ತು. ಸಮಯಕ್ಕೆ ಅತ್ಯಂತ ಹೆಚ್ಚಿನ ಮಹತ್ವವನ್ನು ನೀಡುತ್ತಿರುವುದು ಕಂಡುಬಂತು.

ಸಮ್ಮೇಳನಕ್ಕೆ ಆಗಮಿಸಿದವರನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯಂತ ಪ್ರೀತಿಪೂರ್ವಕವಾಗಿ ಸ್ವಾಗತಿಸಿ ಉಪಚರಿಸುತ್ತಿದ್ದರು. ಅಂತೂ ಮಾದರಿ ಸಮ್ಮೇಳನ ಎಂಬ ಹೆಮ್ಮೆಯನ್ನು ಮತ್ತೊಮ್ಮೆ ನುಡಿಸಿರಿ ಸಾಕ್ಷೀಕರಿಸಿತು.


* * * * *

ಸುಸಜ್ಜಿತ ಮಾಧ್ಯಮ ಕೇಂದ

ಸಮ್ಮೇಳನಕ್ಕಾಗಮಿಸಿದ ಮಾಧ್ಯಮದವರಿಗೆ ಅನುಕೂಲವಾಗುವಂತೆ ಆಧುನಿಕ ರೀತಿಯಲ್ಲಿ ಸುಸಜ್ಜಿತ ಮಾಧ್ಯಮ ಕೇಂದ್ರ ವ್ಯವಸ್ಥೆಗೊಳಿಸಲಾಗಿತ್ತು. ಅಂತರ್ಜಾಲ ವ್ಯವಸ್ಥೆಯೊಂದಿಗೆ ಕಂಪ್ಯೂಟರ್, ದೂರವಾಣಿ ಸಂಪರ್ಕ, ಫ್ಯಾಕ್ಸ್, ಸ್ವಯಂ ಸೇವಕರ ನಗುಮುಖದ ಸ್ವಾಗತ ಇವೆಲ್ಲವೂ ಅತ್ಯಂತ ಸುಸಜ್ಜಿತವಾಗಿ ವ್ಯವಸ್ಥೆಗೊಳಿಸಲಾಗಿತ್ತು.


* * * * *

ನುಡಿಸಿರಿಯ ಕಾರ್ಯಕ್ರಮಗಳು

ದ್ವಿತೀಯ ದಿನವಾದ ಶನಿವಾರ ಗಡಿನಾಡು, ಹೊರನಾಡುಗಳಲ್ಲಿ ಕನ್ನಡ ಮತ್ತು ಕನ್ನಡ ಸಂಸ್ಕೃತಿ ಹಾಗೂ ಪ್ರದರ್ಶನ ಕಲೆಗಳ ಮುಂದಿರುವ ಪ್ರಶ್ನೆಗಳು ಎಂಬ ಮಹತ್ವದ ಎರಡು ಗೋಷ್ಠಿಗಳು ನಡೆಯಲಿದೆ.
 

ಮೊದಲ ಗೋಷ್ಠಿಯಲ್ಲಿ ಕಾಸರಗೋಡು, ಬೆಳಗಾವಿ, ಹೊರನಾಡುಗಳ ಬಗ್ಗೆ ಡಾ.ಸುಬ್ರಹ್ಮಣ್ಯ ಭಟ್, ಪ್ರೊ. ಶ್ರೀನಿವಾಸ ಕುಲಕರ್ಣಿ ಮತ್ತು ಡಾ.ತಾಳ್ತಜೆ ವಸಂತ ಕುಮಾರ್ ಕ್ರಮವಾಗಿ ಪ್ರಬಂಧ ಮಂಡಿಸಲಿದ್ದಾರೆ.
 

ದ್ವಿತೀಯ ಗೋಷ್ಠಿಯಲ್ಲಿ ಜನಪದ ಕಲೆಗಳು , ರಂಗಭೂಮಿ, ಸಿನೆಮಾಗಳ ಬಗ್ಗೆ ಡಾ.ಹಿ.ಶಿ ರಾಮಚಂದ್ರೇಗೌಡ, ಟಿ.ಎಸ್ ನಾಗಾಭರಣ ಮತ್ತು ಪಿ.ಶೇಷಾದ್ರಿ ಪ್ರಬಂಧ ಮಂಡಿಸಲಿದ್ದಾರೆ.
ಕೆ.ಆರ್ ಗೋಪಾಲಕೃಷ್ಣ ಮತ್ತು ಭಾವನಾ ಬಳದವರಿಂದ ಭಾವಗೀತೆಗಳು ನಡೆಯಲಿವೆ. ಕವಿಸಮಯ -ಕವಿನಮನದಲ್ಲಿ ರಜಿಯಾ ಡಿ.ಬಿ, ಡಾ.ರಾಧಾಕೃಷ್ಣ ಬೆಳ್ಳೂರು, ಡಾ.ನಾದಾಶೆಟ್ಟಿ ಭಾಗವಹಿಸಲಿದ್ದಾರೆ.
 

ಡಾ.ಶೇಣಿಗೋಪಾಲಕೃಷ್ಣ ಭಟ್ ಸಂಸ್ಮರಣೆಯನ್ನು ಕುಂಬ್ಳೆಸುಂದರರಾವ್ ಮಾಡಲಿದ್ದಾರೆ. ಕೊಡಿಕಲ್ ನಾಗರಾಜ ಕಿಣಿ ಮತ್ತು ನಮೃತಾ ಕಿಣಿಯವರಿಂದ ಭಾವಗಾನ ನಡೆಯಲಿದೆ.

 

ಪೂರಕ ಮಾಹಿತಿ

ಬಸದಿಗಳ ಬೀಡಲ್ಲಿ ಕನ್ನಡದ ಬಾವುಟ

ಸಾಹಿತಿ ಕಂಬಾರರಿಗೆ `ಆಳ್ವಾಸ್ ನುಡಿಸಿರಿ ೨೦೦೬' ಸಾರಥ್ಯ


 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com