ಸಂತಸದ ಕ್ಷಣಗಳಲ್ಲಿ ನಿಸಾರ್‌ಅಹ್ಮದ್ ಮಾತು
ಹಿಂದೆ
ಶಿವಮೊಗ್ಗದಲ್ಲೇ ಏಳೆಂಟು ವರ್ಷಗಳ ಕಾಲ ವಾಸವಾಗಿದ್ದ ನಿಸಾರ್ ಅಹ್ಮದ್ ಈಗ ಅಲ್ಲಿ ನಡೆಯಲಿರುವ
ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ವಿಕ್ರಾಂತ ಕರ್ನಾಟಕದೊಂದಿಗೆ ಅವರು ತಮ್ಮ ಸಂತಸ ಹಂಚಿಕೊಂಡದ್ದು ಹೀಗೆ :
-
ಶಿವಮೊಗ್ಗದ ಪರಿಸರ
ನನ್ನ ಅಧ್ಯಯನಕ್ಕೆ ಪೂರಕವಾಗಿತ್ತು. ಹಾಗೆ ನೋಡಿದರೆ ನನ್ನ ಉತ್ತಮ
ಕೃತಿಗಳು, ನಿತ್ಯೋತ್ಸವ ಪದ್ಯವನ್ನೂ ಅಲ್ಲೇ ಬರೆದೆ.
-
ಸಾಹಿತ್ಯ
ಸಮ್ಮೇಳನಕ್ಕೆ ಅಧ್ಯಕ್ಷನಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವುದಕ್ಕೆ ತುಂಬ
ಖುಷಿಯಾಯಿತು.
-
ಅದರಲ್ಲೂ ಸುವರ್ಣ
ಕರ್ನಾಟಕ ವರ್ಷದಲ್ಲಿ ನಾನು ಅಧ್ಯಕ್ಷನಾಗಿರುವುದು ನನ್ನ ಅದೃಷ್ಟ.
-
೯೦ ವರ್ಷದ
ಇತಿಹಾಸದಲ್ಲಿ ಅಲ್ಪಸಂಖ್ಯಾತನೊಬ್ಬ ಅಧ್ಯಕ್ಷನಾಗುತ್ತಿರುವುದು ಇದೇ ಮೊದಲು
-
ಅಧ್ಯಕ್ಷ ಭಾಷಣದಲ್ಲಿ
ಹಲವಾರು ವಿಚಾರಗಳನ್ನು ಮಂಡಿಸಬೇಕೆಂಬ ಉದ್ದೇಶವಿದೆ. ಅದರಲ್ಲಿ ಮುಖ್ಯವಾದುದು
ಗಡಿ ಸಮಸ್ಯೆ. ಮಹಾಜನ್ ವರದಿಯನ್ನು ಒಪ್ಪದೇ ಇದ್ದಲ್ಲಿ ಪ್ರತಿಭಟನೆಗೆ ಕರೆ.
ಅಗತ್ಯ ಬಿದ್ದರೆ ಗೋಕಾಕ್ ಮಾದರಿ ಚಳವಳಿಗೂ ಸಿದ್ಧ.
-
ಕನ್ನಡದ ಮುಲಭೂತ
ಸಮಸ್ಯೆಗಳ ಕುರಿತು ಮಾತನಾಡುತ್ತೇನೆ.
-
ಕನ್ನಡಕ್ಕೆ ಈಗ
ಕಾಡುತ್ತಿರುವ ತಬ್ಬಲಿತನ ಮತ್ತು ಭಾಷಾ ಸಮಸ್ಯೆ ನನ್ನನ್ನು ಕಾಡುತ್ತಿದೆ. ಆ ಬಗ್ಗೆ
ಉಲ್ಲೇಖಿಸುವ ಯೋಜನೆ ಇದೆ.
ರಾಜ್ಯದಲ್ಲಿ ಕನ್ನಡ
ಆಡಳಿತ ಭಾಷೆಯಾಗಿ ಜಾರಿಯಾಗಿಲ್ಲ. ಅದಲ್ಲದೆ ಕನ್ನಡಿಗರಲ್ಲಿ ತಮ್ಮತನದ ಕುರಿತು
ಅಭಿಮಾನ ಬೆಳೆಸುವ ನಿಟ್ಟಿನಲ್ಲಿ ಭಾಷಣ.