ಮಸ್ಕತ್ ಕನ್ನಡ ಸಂಘದಲ್ಲಿ ಸಾಂಸ್ಕೃತಿಕ
ಅಭಿಯಾನ
ಮಸ್ಕತ್ತಿನ `ಇಂಡಿಯನ್ ಸೋಷಿಯಲ್ ಕ್ಲಬ್'ನ
ಆಶ್ರಯದಲ್ಲಿ ಕರ್ನಾಟಕ ಸಂಘವು ೨೦೦೨ರಲ್ಲಿ ರೂಪುಗೊಂಡು, ನಾಲ್ಕು
ಯಶಸ್ವೀ ಸಂವತ್ಸರಗಳನ್ನು ಪೂರೈಸಿದೆ.
ಸಂಘದ ಸಾಮಾಜಿಕ ಹಾಗು ಸಾಂಸ್ಕೃತಿಕ
ಚಟುವಟಿಕೆಗಳು ಅಭಿವೃದ್ಧಿ ಪ್ರೇರಕವಾಗಿವೆ. ಕನ್ನಡಿಗರನ್ನು ಒಟ್ಟಿಗೆ
ಒಂದೆಡೆ ಸೇರಿಸಿ, ಸುಪ್ತ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ, ಕನ್ನಡದ ಸಂಸ್ಕೃತಿಯನ್ನು
ಜನಪ್ರಿಯಗೊಳಿಸಲು ನಾನಾ ಮನರಂಜನಾ ಕಾರ್ಯಕ್ರಮಗಳನ್ನು ಹಾಗೂ
ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಕನ್ನಡದ ಕಲೆ, ನಾಟಕ ಮತ್ತು
ಸಂಗೀತ ಕ್ಷೇತ್ರದ ಹೆಸರಾಂತ ಕಲಾವಿದರನ್ನು ಕರೆಸಿ ಉತ್ತಮ ಸಾಂಸ್ಕೃತಿಕ
ಕಾರ್ಯಕ್ರಮಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ.
ರಾಗ ಮಾಲಿಕೆ (ಒಂದು ಸುಂದರ ಸಂಜೆಯ
ಅನಿರ್ವಚನೀಯ ಸಂಗೀತಾ
ಭವ)
ಗರ್ತಿಕೆರೆ ರಾಘಣ್ಣ, ರತ್ನಮಾಲ ಪ್ರಕಾಶ್, ಪಂಚಮ್ ಹಳಿಬಂಡಿ ಮುತಾಂದ
ಖ್ಯಾತ ಗಾಯಕರು ನೆಡೆಸಿಕೊಟ್ಟ ಈ ಸಂಗೀತದ ಕಾರ್ಯಕ್ರಮ ಸಭಿಕರಿಗೆ
ಅವಿಸ್ಮರಣೀಯ ಸಂಗೀತದ ರಸಾನುಭವವನ್ನು ನೀಡಿತು.
ಪ್ರವೀಣ್ ಗೋಡ್ಖಿಂಡಿ ಅವರ `ಫ್ಯೂಷನ್?
ಸಂಗೀತ ಮತ್ತು ಯಶವಂತ್ ಸರದೇಶಪಾಂಡೆಯವರ
`ರಾಶಿಚಕ್ರ' ಏಕವ್ಯಕ್ತಿ ರಂಗಪ್ರಯೋಗ ಮಸ್ಕತ್ ಕನ್ನಡಿಗರ ಮನದಲ್ಲಿ
ಅನೇಕ ವರ್ಷ ಉಳಿಯಲಿದೆ.
ಗಾನ ಗಾರುಡಿಗ ಸಿ ಅಶ್ವತ್ ಮತ್ತು ಸಿರಿಕಂಠದ
ಎಂ. ಡಿ. ಪಲ್ಲವಿ ತಂಡದವರು ನೆಡೆಸಿಕೊಟ್ಟ ಭಾವ ಸಂಗಮ
ಕಾರ್ಯಕ್ರಮ, ಗಂಧರ್ವ ಗಾಯನದ ದೈವೀಕ ಆನಂದ ನೀಡಿತು.
ಮಸ್ಕತ್ ಕನ್ನಡ ಸಂಘವು ಇತ್ತೀಚಿಗೆ ಕನ್ನಡ
ಚಿತ್ರಗೀತೆಗಳನ್ನು ಆಧರಿಸಿದ `ಚಿತ್ರ ಲಹರಿ?
ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ಶ್ರೀನಿವಾಸ ಉಡುಪ, ಪಂಚಮ್
ಹಳಿಬಂಡಿ, ಅರ್ಚನ ಉಡುಪ ಮತ್ತು ದಿವ್ಯ ರಾಘವನ್‌ರವರು ಚಿತ್ರ
ಗೀತೆಗಳ ರಸದೌತಣ ನೀಡಿದರು.
ಈ ವರ್ಷಾಂತ್ಯದಲ್ಲಿ, ಅಂದರೆ ನವೆಂಬರ್
ತಿಂಗಳಲ್ಲಿ, ಕನ್ನಡದ ಹೆಸರಾಂತ ಕಲಾವಿದರಾದ ಎನ್ ಎಸ್ ಪ್ರಸಾದ್, ಪ್ರವೀಣ್
ಡಿ ರಾವ್, ಅರುಣ್ ಕುಮಾರ್, ಪ್ರ
ವೀಣ್
ಗೋಡ್ಖಿಂಡಿ, ಎಂ. ಡಿ. ಪಲ್ಲವಿ, ಮಧುಸೂದನ್, ಶ್ರೀನಿವಾಸ್ ಆಚಾರ್ ಅವರನ್ನೊಳಗೊಂಡ
ತಂಡದಿಂದ ಫ್ಯೂಷನ್ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಪ್ರತಿ ಹೆಜ್ಜೆಯಲ
ಹೊಸತನದಿಂದ ಕಾರ್ಯಕ್ರಮ ರೂಪಿಸಿ ಕನ್ನಡದ ಸಾಂಸ್ಕೃತಿಕ
ಅಭಿಯಾನ ಕೈಗೊಂಡಿರುವ ಸಂಘವು ರಕ್ತದಾನ ಶಿಬಿರಗಳ ಮೂಲಕ
ಸಾಮಾಜಿಕ ಸೇವೆಯಲ್ಲೂ ನಿರತವಾಗಿದೆ.
ಮಸ್ಕತ್ತಿನಲ್ಲಿ ನೆಲಸಿರುವ ಕನ್ನಡಿಗರ
ಮಕ್ಕಳಿಗೆ ಕನ್ನಡ ತರಗತಿಗಳನ್ನು ನೆಡೆಸುತ್ತಿದೆ. ಸ್ವಾತಂತ್ರ್ಯ
ದಿನಾಚರಣೆ, ಕನ್ನಡ ರಾಜ್ಯೊತ್ಸವ, ಯುಗಾದಿ, ರಂಜಾನ್, ಕ್ರಿಸ್ಮಸ್
ಹಬ್ಬಗಳನ್ನೂ ಅಚರಿಸಲಾಗುತ್ತಿದೆ.
ಸ್ಥಳೀಯ ಪ್ರತಿಭೆಗಳನ್ನು ಗುರುತಿಸಲು ಸಂಗೀತ
ಮತ್ತು ನೃತ್ಯ ಸ್ಪರ್ದೆಗಳನ್ನೂ, ಆಟೋಟ ಸ್ಪರ್ಧೆಗಳನ್ನೂ ಏರ್ಪಡಿಸುತ್ತಿದೆ.
ಇನ್ನಷ್ಟು
೯೩ರ ಮುಂಬೈ ಸ್ಫೋಟ: ನ್ಯಾಯಾಲಯ ತೀರ್ಪು
ಘೋಷಣೆ
ವಾಕ್ಯದಿಂದ ಹೊಸ ಭಾಷಾಲಿಪಿ ಸಾಫ್ಟ್‌ವೇರ್
ಬೌದ್ಧ ಧರ್ಮಕ್ಕೆ ಮೂರುಲಕ್ಷ ಜನ: ಬೊಧಿಧಾಮ
ಪೈರಸಿಯನ್ನು
ತಡೆಹಿಡಿದ `ಗಾಂಧಿ?!
ಡಮಾಸ್ಕಸ್‌ನಲ್ಲಿ ಯುಎಸ್ ದೂತವಾಸದ ಮೇಲೆ
ಧಾಳಿ
ಶೀಘ್ರದಲ್ಲೇ ಹೊಸ ನ್ಯೂಸ್ ಚಾನೆಲ್: ಟಿವಿ-೯
ಸೆಪ್ಟೆಂಬರ್ ೩೦ ರಂದು ಕರ್ನಾಟಕ ಬಂದ್
ವಿಮಾನ ಪ್ರಯಾಣಿಕರಿಗಾಗಿ ಕಿಂಗ್‌ಫಿಶರ್ ಹೆಲಿಕಾಪ್ಟರ್