Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Tuesday, 31 October 2006 02:27 AM

ಹವ್ಯಕರ `ಚಕ್ಕುಲಿ ಕಂಬಳ'

  • ಸುಮಾ ಶಿಂಗನ್ನಳ್ಳಿ

ಹೊಸ ಸ್ನೇಹ ಸಾಧ್ಯತೆ ಕಲ್ಪಿಸಿಕೊಡುವ `ಆರ್ಕುಟ್' ಇಂಟರ್‌ನೆಟ್ ಬಳಸುವ ಗೆಳೆತನ ಪ್ರಿಯರಿಗೆ ಗೊತ್ತಿರಬಹುದು. ಇದರ ಒಂದು ಭಾಗ `ಆರ್ಕುಟ್ ಹವ್ಯಕ ಬಳಗ'.

ಈ ಹವ್ಯಕ ಬಳಗದ ಗೆಳೆಯರು ಸೇರಿ ಬೆಂಗಳೂರಿನ ಗಿರಿನಗರದಲ್ಲಿರುವ ರಾಮಾಶ್ರಮದಲ್ಲಿ `ಚಕ್ಕುಲಿ ಕಂಬಳ' ಎನ್ನುವ ಒಂದು ಸರಳ ಸಮಾರಂಭವನ್ನು ಏರ್ಪಡಿಸಿದ್ದರು. ಮುಖ ಪರಿಚಯವಿಲ್ಲದೆ ಇಂಟರ್‌ನೆಟ್ ಮುಖಾಂತರ ಸ್ನೇಹಿತರಾದವರಿಗೆ ಮುಖಾಮುಖಿ ಭೇಟಿಯಾಗುವ ಸುಸಂದರ್ಭ ಇದಾಗಿತ್ತು.

Venu Vighnesh, Vidwan N Ranganatha Sharma, C.H Bhat and Yajnesh in Havyaka Group Meeting`ನಿಮ್ಮ ಮಾರ್ಗದರ್ಶನ ನಮಗೆ ಇರಲಿ' ಎಂದು ವಯೋವೃದ್ಧರು, ಜ್ಞಾನವೃದ್ಧರೂ ಆದ ವಿದ್ವಾನ್ ಎನ್. ರಂಗನಾಥ ಶರ್ಮ ಹಾಗೂ ಅನುಭವಿಗಳಾದ ಸಿ.ಎಚ್.ಎಸ್. ಭಟ್ ಅವರನ್ನು ಮುಖ್ಯ ಅತಿಥಿಗಳನ್ನಾಗಿ ಯುವ ಹವ್ಯಕ ಬಳಗದವರು ಕರೆ ತಂದಿದ್ದರು. ಯುವ ಹವ್ಯಕ ಮುಂದಾಳುಗಳಾದ ವೇಣು ವಿಘ್ನೇಶ್, ಯಜ್ಞೇಶ್ ವೇದಿಕೆಯಲ್ಲಿದ್ದರು. ನಿರೂಪಣೆಯನ್ನೆಲ್ಲ ಹವ್ಯಕ ಆಡು ಭಾಷೆಯಲ್ಲಿಯೇ ಮಾಡಿದ್ದು ಬಂದವರಿಗೆ ಸಮಾರಂಭ ಆಪ್ತವೆನಿಸಿತು.

ಚಕ್ಕುಲಿ, ಚುಡುವ, ಕಷಾಯದ ಜೊತೆಗೆ ಹೋಳಿಗೆಯೂ ಇದ್ದದ್ದು ಕಾರ್ಯಕ್ರಮದ ವಿಶೇಷವಾಗಿತ್ತು!

ಅಂತೂ, ಸಂಘಟಕರಾದ ಗಿರಿಧರ, ಸಂದೀಪ, ಮುಂತಾದವರ ಈ ಪ್ರಯತ್ನ ಬೇರೆಯವರಿಗೆ ಮಾದರಿಯಾಗಲು ಮತ್ತು ಅಭಿನಂದನೆಗೆ ಅರ್ಹವಾಗಿದೆ.

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com