|
|
|
Tuesday, 31 October 2006 02:27 AM |
|
ನಾದಮಯ ಈ ಲೋಕವೆಲ್ಲ
ಆ. ೬ರಂದು ರಾಜ್ ಸ್ಮರಣಾರ್ಥ ಕಾರ್‍ಯಕ್ರಮ
ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ
? ಈ ಕವಿ ಸಂಸ್ಥೆ, ಹಲವು
ವರ್ಷಗಳಿಂದ ಹೆಮ್ಮೆಯ ಕನ್ನಡನಾಡಿನ ಭಾಷೆ, ಸಂಸ್ಕೃತಿ, ಕಲಾವೈಭವಕ್ಕೆ ತನ್ನದೇ
ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡ
ಜ್ಯೋತಿಯನ್ನು ಬೆಳಗುವಲ್ಲಿ ನಿಃಸ್ವಾರ್ಥ ಪ್ರಯತ್ನ ಮಾಡುತ್ತಿದೆ. ಕನ್ನಡದ
ರಕ್ಷಣೆಗೆ ತನ್ನದೇ ರೀತಿಯಲ್ಲಿ ಕಾಳಜಿಯನ್ನು ತೋರುತ್ತಾ ಪಾಶ್ಚಾತ್ಯ ಸಂಸ್ಕೃತಿಗೆ ಮಾರು
ಹೋಗುತ್ತಿರುವ ಕನ್ನಡಿಗರಿಗೆ ನಮ್ಮ ಸಂಸ್ಕೃತಿ, ಕಲೆಯ ಪರಿಚಯ ಮಾಡುತ್ತಿದೆ.

ಈ ನಿಟ್ಟಿನಲ್ಲಿ ಡಾ.ರಾಜ್
ಕುಮಾರ್ ಸವಿನೆನಪಿಗಾಗಿ ರಕ್ತದಾನ ಹಾಗು ನೇತ್ರದಾನ ಶಿಬಿರವನ್ನು ೧೪ ಮೇ ೨೦೦೬, ಭಾನುವಾರದಂದು
ರಾಜಾಜಿನಗರದ ಕ್ಯಾತಮಾರನಹಳ್ಳಿ ಸರ್ಕಾರಿ ಶಾಲೆಯಲ್ಲಿ ಏರ್ಪಡಿಸಲಾಗಿತ್ತು ಹಾಗು ಅದೇ
ದಿನ ಸಂಜೆ ಡಾ. ರಾಜ್ ಸಮಾಧಿಯ ಬಳಿ ೧೦೦೧ ಹಣತೆ ಬೆಳಗಿಸಿ ರಾಜಣ್ಣನಿಗೆ ಶ್ರದ್ಧಾಂಜಲಿ
ಅರ್ಪಿಸಲಾಯಿತು.
ಇದರೊಂದಿಗೆ ಅಗಸ್ಟ್
೬ ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಡಾ. ರಾಜ್ ಗೀತನಮನ
ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಡಾ.ರಾ ಜ್ ಅಭಿನಯದ
ಚಿತ್ರಗಳ ಗೀತೆಗಳನ್ನು ಯುವ ಗಾಯಕ ಗಾಯಕಿಯರು ಪ್ರಸ್ತುತಪಡಿಸಲಿದ್ದಾರೆ.
ಮುಖ್ಯ ಅತಿಥಿಗಳು :
ರಾಘವೇಂದ್ರ ರಾಜ್‌ಕುಮಾರ್, ಕೆ.ಸಿ.ಎನ್.ಗೌಡ ಹಿರಿಯ ನಿರ್ಮಾಪಕರು, ರವಿ
ಬೆಳೆಗೆರೆ, ಡಾ.ನಲ್ಲೂರು ಪ್ರಸಾದ್ ,
ನಟ ವಿಜಯ ರಾಘವೇಂದ್ರ, ಸನ್ಮಾನಿತರು :
ಕೆ.ಎಸ್.ಅಶ್ವಥ್ ಹಿರಿಯ ನಟ
ಹೆಚ್ಚಿನ
ವಿವರಗಳಿಗಾಗಿ ಸಂಪರ್ಕಿಸಿ:
ಕೆ.ಟಿ.ಸತೀಶ್ ಗೌಡ
-98800 86300
 |
|
Print
this page |
ಮುಖಪುಟ |
|
|
|