ಸುಂದರ ಮೈಸೂರಿಗೆ ಶೋಭೆಯ ದಸರಾ
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ, ಪ್ರಸಿದ್ಧ ಪ್ರವಾಸಿ ತಾಣವಾದ ಮೈಸೂರು
ನಗರವೀಗ ಝಗಮಗಿಸುವ ವಿದ್ಯುತ್ ದೀಪಾಲಂಕಾರದಿಂದ ಮಿನುಗುತ್ತಿದೆ.
ಧಾರ್ಮಿಕ ಕಂಪನ್ನು ಬೀರುವ, ಭಾವೈಕ್ಯತೆಯ ಸೇತುವೆಯನ್ನು
ನಿರ್ಮಿಸುವ, ಸಾಂಸ್ಕೃತಿಕ ಸಮ್ಮಿಲನವನ್ನು ಏರ್ಪಡಿಸುವ ಮೈಸೂರು
ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೈಸೂರಿನ ಪತ್ರಿಕೋದ್ಯಮ
ವಿದ್ಯಾರ್ಥಿ ಶ್ರೀನಿಧಿ ಓಡಿಲ್ನಾಳ ಸಂಪೂರ್ಣ ೧೦ ದಿನಗಳ ಸಂಭ್ರಮವನ್ನು ಸೆರೆಹಿಡಿದು
ನಮ್ಮ ವಿಕ್ರಾಂತ ಕರ್ನಾಟಕಕ್ಕೆ ಕಳುಹಿಸಲಿದ್ದಾರೆ. ವರ್ಣ ರಂಜಿತವಾಗಿ
ದಸರಾವನ್ನು ವಿಕ್ರಾಂತ ಬಳಗದೊಡನೆ ಆಚರಿಸಿ.
ಶ್ರೀನಿಧಿ
ಓಡಿಲ್ನಾಳ
haninidhi@yahoo.com
ಮೈಸೂರು ದಸರಾ ಎಂಥವರನ್ನು ಕೂಡ ಮೋಡಿ
ಮಾಡುತ್ತದೆ. ದೇಶ-ವಿದೇಶಗಳ ಜನರನ್ನು, ಪ್ರವಾಸಿ ಪ್ರಿಯರನ್ನು
ಅಯಸ್ಕಾಂತದಂತೆ ಆಕರ್ಷಿಸಿರುವ ಸಾಂಸ್ಕೃತಿಕ ರಾಜಧಾನಿ ಮೈಸೂರು
ದಸರಾಕ್ಕೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತಿದೆ.
ಇದೇ ಸೆ.೨೩ರಿಂದ ಆರಂಭಗೊಂಡು ಒಂಬತ್ತು ದಿ
ನಗಳ
ಈ ಉತ್ಸವಕ್ಕೆ ಎಲ್ಲ ರೀತಿಯಲ್ಲೂ ಸೊಬಗು ಕಳೆಗಟ್ಟುತ್ತಿದೆ. ಈ ಬಾರಿಯ
ಉತ್ಸವಕ್ಕೆ ನಾಡಿನ ಹಿರಿಯ ಸಾಹಿತಿ, ಗಾಂಧೀವಾದಿ ಜಿ. ನಾರಾಯಣರವರು
ಸೆ.೨೩ರಂದು ಬೆಳಗ್ಗೆ ೮-೧೫ಕ್ಕೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ
ಮೂಲಕ ಚಾಲನೆ ನೀಡಲಿದ್ದಾರೆ.
ಮೈಸೂರು ದಸರಾದ ಕೇಂದ್ರ ಬಿಂದು ಜಂಬೂ ಸವಾರಿ.
ವಿಜಯ ದಶಮಿ ದಿನದಂದು ನಡೆಯುವ ಜಂಬೂ ಸವಾರಿಗೆ ಅ.೨ರಂದು ಮಧ್ಯಾಹ್ನ
೧.೧೫ಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಅರಮನೆ
ಆವರಣದಲ್ಲಿರುವ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ
ನೀಡಲಿದ್ದಾರೆ. ೭೦೦ ಕೆ.ಜಿ. ಚಿನ್ನದ ಅಂಬಾರಿಯನ್ನು ಹೊತ್ತು ಬಲರಾಮ
ಘನಗಾಂಭೀರ್‍ಯದಿಂದ ಹೆಜ್ಜೆ ಹಾಕುವುದನ್ನು ನೋಡಿ ಎಂತವರೂ ನಿಬ್ಬೆರಗಾಗಲೇಬೇಕು.
ಬಲರಾಮನ ಹಿಂದೆಯೇ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ಬರುವ
ಆನೆಗಳ ಸಾಲು, ಪಾರಂಪರಿಕ ಕಾರ್‍ಯಕ್ರಮ ಒಂದೆಡೆಯಾದರೆ, ಇನ್ನೊಂದೆಡೆ
ಸ್ತಬ್ಧ ಚಿತ್ರ, ನೃತ್ಯ, ಗಾಯನ, ಕರ್ನಾಟಕದ ನಾನಾ ಪ್ರದೇಶದ
ಕಲಾವಿದರ ತಂಡದವರಿಂದ ಡೊಳ್ಳು ಕುಣಿತ, ಕಂಸಾಳೆ, ಯಕ್ಷಗಾನ,
ದೊಡ್ಡಾಟ, ಕೋಲಾಟ, ವೀರಗಾಸೆ ಹೀಗೆ ವಿಧವಿಧದ ಪ್ರದರ್ಶನ ನಮ್ಮ
ಕಣ್ಮನ ಸೆಳೆಯುತ್ತದೆ.
ಈ ಬಾರಿಯ ಉತ್ಸವಕ್ಕೆ ಅರಮನೆ ಆವರಣವು ಸುಮಾರು
೯೬,೦೦೦ ವಿದ್ಯುತ್ ಬಲ್ಬ್‌ಗಳಿಂದ ಅಲಂಕೃತಗೊಂಡು ವಿಶ್ವದ ಗಮನ
ಸೆಳೆಯುತ್ತಿದೆ. ೩೬,೦೦೦ ಬಲ್ಬ್‌ಗಳು ಈ ಬಾರಿಯ ದಸರಾಗೆ ಸೇರ್ಪಡೆಯಾಗಿರುದು
ವಿಶೇಷವಾಗಿದೆ.
ವಿಶ್ವವಿಖ್ಯಾತ ಗಾಯಕರಿಂದ ಸಂಗೀತ
ಕಾರ್‍ಯಕ್ರಮ, ಜಗನ್ಮೋಹನ ಅರಮನೆಯಲ್ಲಿ ಕವಿಗೋಷ್ಠಿ, ಪುರಭವನ,
ಕ
ಮಂದಿರ,
ವೀಣೆಶೇಷಣ್ಣ ಭವನದಲ್ಲಿ ವಿವಿಧ ಸಾಂಸ್ಕೃತಿಕ ಮನರಂಜನೆ
ಕಾರ್‍ಯಕ್ರಮ, ರಂಗಾಯಣದಲ್ಲಿ ನಾಟಕಾಸಕ್ತರಿಗೆ ನವರಂಗೋತ್ಸವ,
ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಯುವಕರನ್ನು
ಆಕರ್ಷಿಸುವ ಯುವ ದಸರಾ, ಫಲಪುಷ್ಪ ಪ್ರದರ್ಶನ, ಸಾಹಸ
ಕ್ರೀಡೋತ್ಸವ, ಚಲನಚಿತ್ರೋತ್ಸವ, ಪುರಭವನ ಆವರಣದಲ್ಲಿ
ಆಹಾರ ಮೇಳ, ಕುಪ್ಪಣ್ಣ ಪಾರ್ಕ್‌ನಲ್ಲಿ ಸಾಕು ಪ್ರಾಣಿಗಳ ಪ್ರದರ್ಶನ.
ಚಲನಚಿತ್ರೋತ್ಸವ
ಮೈಸೂರು ದಸರಾ ಹಬ್ಬದಂದು ಮೈಸೂರಿನ
ವಿವಿಧ ಚಿತ್ರಮಂದಿರಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ
ಚಿತ್ರಗಳೊಳಗೊಂಡಂತೆ ಒಟ್ಟು ೩೮ ಚಿತ್ರ ಪ್ರದರ್ಶಿಸಲಾಗುವುದು.
ಚಿತ್ರಪ್ರೇಮಿಗಳನ್ನು ತನ್ನತ್ತ ಕೈ ಬೀಸಿ ಕರೆಯುವ ಈ ಚಲನಚಿತ್ರೋತ್ಸವವನ್ನು
ಈ ಬಾರಿ ನಟ ಡಾ.ವಿಷ್ಣುವರ್ಧನ್ ಉದ್ಘಾಟಿಸಲಿದ್ದಾರೆ. ರೀಜೆನ್ಸಿ, ಸ್ಟರ್ಲಿಗ್,
ಶ್ರೀ ನಾಗರಾಜ, ರಣಜಿತ್, ತಿಬ್ಬಾದೇವಿ ಮತ್ತು ಬಾಲಭವನ ಚಿತ್ರಮಂದಿರಗಳಲ್ಲಿ
ಚಲನಚಿತ್ರ ಪ್ರದರ್ಶಿಸಲಾಗುತ್ತದೆ.
ವಿವಿಧ ಚಿತ್ರಮಂದಿರಗಳಲ್ಲಿ
ಪ್ರದರ್ಶಿಸಲಾಗುವ ಪಟ್ಟಿ ಇಂತಿದೆ
ರೀಜೆನ್ಸಿ ಚಿತ್ರಮಂದಿರದಲ್ಲಿ ಸೆ.೨೩ರಂದು
ಗಂಡುಗಲಿ ಕುಮಾರರಾಮ, ೨೪ರಂದು ಶಂಕರ್‌ಗುರು, ೨೫ರಂದು ಸಂಸ್ಕಾರ,
೨೬ರಂದು ಬೆಳದಿಂಗಳ ಬಾಲೆ, ೨೭ರಂದು ಶರಪಂಜರ, ೨೮ರಂದು ಹಂಸಗೀತೆ
ಚಿತ್ರಗಳು.
ಸ್ಟರ್ಲಿಗ್‌ನಲ್ಲಿ ಚಿತ್ರಮಂದಿರದಲ್ಲಿ ಸೆ.೨೩ರಂದು
ಜೋಗಿ, ೨೪ರಂದು ಬಂಗಾರದ ಮನುಷ್ಯ, ೨೫ರಂದು ಪಣಿಯಮ್ಮ,
೨೬ರಂದು ಹಠವಾದಿ, ೨೭ರಂದು ಪರಸಂಗದ ಗೆಂಡೆತಿಮ್ಮ, ೨೮ರಂದು
ಅಮೇರಿಕ ಅಮೇರಿಕ ಚಿತ್ರಗಳು.
ರಣಜಿತ್ ಚಿತ್ರಮಂದಿರದಲ್ಲಿ ಸೆ.೨೩ರಂದು
ಗಂಧದ ಗುಡಿ, ೨೪ರಂದು ಸೇವಂತಿ ಸೇವಂತಿ, ೨೫ರಂದು ಸಂಸ್ಕಾರ,
೨೬ರಂದು ಹುಲಿಯ, ೨೭ರಂದು ಗೆಜ್ಜೆಪೂಜೆ, ೨೮ರಂದು ಹಸೀನಾ
ಚಿತ್ರಗಳು.
ಬಾಲಭವನ್ ಚಿತ್ರಮಂದಿರದಲ್ಲಿ ಸೆ.೨೩ರಂದು,
ಬೆಟ್ಟದ ಹೂವು, ಕುಮಾರರಾಮ, ೨೪ರಂದು ಸತ್ಯಹರಿಶ್ಚಂದ್ರ,
೨೫ರಂದು ಚುಕ್ಕಿಚಂದ್ರಮ, ೨೬ರಂದು ಪಂಚಾಕ್ಷರಿ ಗವಾಯಿ, ೨೭ರಂದು
ನಮ್ಮ ಮಕ್ಕಳು, ೨೮ರಂದು ಬಿ.ಆರ್.ಅಂಬೇಡ್ಕರ್, ೨೯ರಂದು ಚಿನ್ನಾರಿಮುತ್ತ,
೩೦ರಂದು ವರ್ಷಋತು ಚಿತ್ರಗಳು ಬೆಳ್ಳಿ ಪರದೆ ಮೇಲೆ ಮೂಡಿಬರಲಿದೆ.
ವಸ್ತು ಪ್ರದರ್ಶನ
ಮೈಸೂರು ದಸರಾ ಮಹೋತ್ಸವದ ಅವಿಭಾಜ್ಯ
ಅಂಗದಂತಿರುವ ದಸರಾ ವಸ್ತು ಪ್ರದರ್ಶನಕ್ಕೆ ನೂರ ಹದಿನೆಂಟು
ವರ್ಷಗಳ ಇತಿಹಾಸವಿದೆ. ಈ ಸಾಲಿನ ದಸರಾ ವಸ್ತು ಪ್ರದರ್ಶನ
ದೊಡ್ಡಕೆರೆ ಮೈದಾನದಲ್ಲಿ ಸೆ.೨೩ರಂದು ಮಧ್ಯಾಹ್ನ ೪-೩೦ಕ್ಕೆ ಸಚಿವ
ಶ್ರೀ ರಾಮುಲು ಉದ್ಘಾಟಿಸಲಿದ್ದಾರೆ. ಸುಮಾರು ೯೦ ದಿನಗಳ ಕಾಲ ನಡೆಯುವ
ಈ ದಸರಾ ವಸ್ತು ಪ್ರದರ್ಶನ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ
ಗುತ್ತಿಗೆ ನೀಡಿದ್ದರಿಂದ ಆಕರ್ಷಕ ರೀತಿಯಲ್ಲಿ ಸಿದ್ಧತೆ ಮಾಡಲಾಗಿದೆ. ಬೇರೆ
ಬೇರೆ ಇಲಾಖೆಗಳ ಟ್ಯಾಬ್ಲೋ, ಹೊರ ರಾಜ್ಯದ ಹಲವು ಮಳಿಗೆಗಳು, ಬಣ್ಣ
ಬಣ್ಣದ ಮಕ್ಕಳ ಆಟಿಕೆ ವಸ್ತುಗಳು ಸೇರಿದಂತೆ ಹತ್ತು ಹಲವು ಶೈಲಿಯ
ಪ್ರದರ್ಶನವನ್ನು ಈ ವರ್ಷದ ದಸರಾ ವಸ್ತು ಪ್ರದರ್ಶನದಲ್ಲಿ ನೋಡಬಹುದಾಗಿದೆ.
ಕವಿಗೋಷ್ಠಿ
ದಸರಾ ಮಹೋತ್ಸವದ ಮತ್ತೊಂದು
ಆಕರ್ಷಣೆ ದಸರಾ ಕವಿಗೋಷ್ಠಿ. ಸೆ.೨೮ರಂದು ಸಂಜೆ ೪ಕ್ಕೆ ಜಗನ್ಮೋಹನ
ಅರಮನೆಯಲ್ಲಿ ಆರಂಭವಾಗುವ ಈ ಕವಿಗೋಷ್ಠಿಯನ್ನು ನಾಡಿನ ಸಾಹಿತಿ
ಪ್ರೊ.ಸಿ.ಪಿ.ಕೃಷ್ಣಕುಮಾರ್ ಉದ್ಘಾಟಿಸಲಿದ್ದಾರೆ. ಈ ಬಾರಿ ೨೫ ಕವಿಗಳು
ತಮ್ಮ ಕವನವನ್ನು ವಾಚಿಸಲಿದ್ದಾರೆ.
ಕ್ರೀಡಾಕೂಟ
ಈ ಬಾರಿಯ ಕ್ರೀಡಾಕೂಟವನ್ನು ಅರ್ಜುನ ಪ್ರಶಸ್ತಿ
ಪುರಸ್ಕೃತ ಕ್ರೀಡಾಪಟು ಅಶ್ವಿನಿ ನಾಚಪ್ಪ ಅವರು ಸೆ.೨೬ರಂದು ಬೆಳಿಗ್ಗೆ
೧೦ಕ್ಕೆ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಉದ್ಘಾಟಿಸಲಿದ್ದಾರೆ.
ಸೆ. ೨೬ರಿಂದ ೨೮ರವರೆಗೆ ನಡೆಯುವ ಈ ಕ್ರೀಡಾಕೂಟದಲ್ಲಿ ೧೪ ವಿವಿಧ
ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಇದರ ಜೊತೆಗೆ ಪುರುಷ ಮತ್ತು
ಮಹಿಳೆಯರ ಅರ್ಧ ಮ್ಯಾರಥಾನ್ ಓಟ, ಸೈಕಲ್ ಸ್ಪರ್ಧೆ, ಕೃತಕ
ಗೋಡೆ ಹತ್ತುವ ಸ್ಪರ್ಧೆ, ಚಾಮುಂಡಿಬೆಟ್ಟ ಹತ್ತುವ ಸ್ಪರ್ಧೆ,
ಕರಾಟೆ ಇವೇ ಮುಂತಾದ ಸ್ಪರ್ಧೆಗಳು ನಡೆಯಲಿದೆ.
ನವರಾತ್ರಿ
ರಂಗೋತ್ಸವ
ಮೈಸೂರು ದಸರಾ ನಾಟಕಾಸಕ್ತರಿಗಾಗಿ
ರಂಗಾಯಣದ ಭೂಮಿಗೀತದಲ್ಲಿ ಒಂಬತ್ತು ದಿನಗಳ ಕಾಲ ಹಲವು
ನಾಟಕಗಳನ್ನು ಪ್ರದರ್ಶಿಸುವ ಮೂಲಕ ನವರಾತ್ರಿ ರಂಗೋತ್ಸವಕ್ಕೆ
ಮತ್ತೊಂದು ಕಳೆ ತರಲಿದೆ. ಸೆ.೨೩ರಿಂದ ಆರಂಭಗೊಳ್ಳುವ ನಾಟಕ
ಅ.೦೧ರವರೆಗೆ ಪ್ರತೀ ದಿನ ೬-೩೦ಕ್ಕೆ ಪ್ರದರ್ಶನಗೊಳ್ಳಲಿದೆ. ಈ ಬಾರಿ
ಸೆ.೨೩ರಂದು ಪಿ.ಗಂಗಾಧರ್ ಸ್ವಾಮಿ ನಿರ್ದೇಶನದ
ಈ ವರ್ಷ ವಿಶೇಷವಾಗಿ ದೀಪಗಳ ಪ್ರದರ್ಶನ,
ದಸರಾ ಗೊಂಬೆಗಳ ಪ್ರದರ್ಶನ ಮತ್ತು ಕಾವಾ ವಿದ್ಯಾರ್ಥಿಗಳಿಂದ ವಸ್ತು
ಪ್ರದರ್ಶನ ಹಾಗೂ ಬಿ.ವಿ.ಕಾರಂತರ ಸಂಗ್ರಹಾಲಯದ ವಸ್ತು ಪ್ರದರ್ಶನ
ಏರ್ಪಡಿಸಲಾಗಿದೆ. ಈ ಬಾರಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ೯ ಮಂದಿಯನ್ನು
ಸನ್ಮಾನಿಸಲಾಗುವುದು.
ಕುಸ್ತಿ ಪಂದ್ಯಾವಳಿ
ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ
ದೇವರಾಜ ವಿವಿದ್ದೋಶ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾಟವನ್ನು
ಸೆ.೨೩ರಂದು ಮಧ್ಯಾಹ್ನ ೩ ಗಂಟೆಗೆ ಸಚಿವ ಚೆಲುವರಾಯ ಸ್ವಾಮಿ
ಉದ್ಘಾಟಿಸಲಿದ್ದಾರೆ. ಈ ಕುಸ್ತಿ ಪಂದ್ಯಾಟವು ಸೆ.೨೯ರವರೆಗೆ ನಡೆಯಲಿದೆ.
ಆಹಾರಮೇಳ
ದಸರಾ ನೋಡಲು ಬರುವ ಜನರಿಗೆ ಎಲ್ಲವೂ
ಕಣ್ಮನ ಸೆಳೆಯುವುದರ ಜೊತೆಗೆ ಆಹಾರ ಮೇಳವು ಕೂಡ
ಸೆಳೆಯುವುದರಲ್ಲಿ ಸಂದೇಹವಿಲ್ಲ. ವಿವಿಧ ರಾಜ್ಯಗಳ ತಿಂಡಿತಿನಿಸುಗಳ
ಪ್ರದರ್ಶನ ಮತ್ತು ಮಾರಾಟ ಒಳಗೊಂಡಿದೆ. ಸೆ.೨೩ರಂದು
ಆರಂಭಗೊಂಡು ೩೦ರವರೆಗೆ ತಿಂಡಿಗಳ ಚಪ್ಪರಿಸುವ ಭಾಗ್ಯ ದಸರಾ
ನೋಡಲು ಬಂದ ಜನರ ಪಾಲಿಗಿದೆ.
ಬೊನ್ಸಾಯ್
ಗಿಡಗಳ ಪ್ರದರ್ಶನ
ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ
ಮಹಾರಾಜ ಕಾಲೇಜು ಆವರಣದಲ್ಲಿರುವ ಮೈಸೂರು ವಿ.ವಿ. ಕುಲಪತಿ ಪ್ರೊ.
ಶಶಿಧರ ಪ್ರಸಾದ್ ಅವರ ನಿವಾಸದಲ್ಲಿ ಸೆ.೨೨ರಿಂದ ೨೪ರವರೆಗೆ ಬೊನ್ಸಾಯ್
ಗಿಡಗಳ ಪ್ರದರ್ಶನ ಮತ್ತು ಕಾರ್‍ಯಾಗಾರ ನಡೆಯಲಿದೆ. ನಗರದ ಸೃಷ್ಟಿ
ಬೊನ್ಸಾಯ್ ಸ್ಟಡಿ ಸರ್ಕಲ್ ಈ ಪ್ರದರ್ಶನ ನಡೆಸಿಕೊಡಲಿದೆ. ಇದಲ್ಲದೆ
ಈ ಸಂದರ್ಭದಲ್ಲಿ ಬೊನ್ಸಾಯ್ ಗಿಡಗಳ ಬೆಳೆಸುವ ಬಗೆ ಕುರಿತು ಉಪನ್ಯಾಸ
ಕೂಡ ಏರ್ಪಡಿಸಲಾಗಿದೆ.
ಫಲಪುಷ್ಪ ಪ್ರದರ್ಶನ
ಸೆ.೨೩ರಿಂದ ಅ.೩ರವರೆಗೆ ದಸರಾ ಪ್ರಯುಕ್ತ
ಫಲಪುಷ್ಪ ಪ್ರದರ್ಶನ ಕರ್ಜನ್ ಪಾರ್ಕ್‌ನಲ್ಲಿ ನಡೆಯಲಿದೆ. ಈ ವರ್ಷ
ಕ್ರಾಫರ್ಡ್ ಭವನ, ಕುಲಪತಿಗಳ ನಿವಾಸ, ವಿ.ವಿ.ಅಧಿಕಾರಿಗಳ ವಸತಿ
ಗೃಹ, ಶೈಕ್ಷಣಿಕ ಸಿಬ್ಬಂದಿ ಕಾಲೇಜು, ಕುವೆಂಪು ಕನ್ನಡ ಅಧ್ಯಯನ
ಸಂಸ್ಥೆ ಹೀಗೆ ನಾನಾ ವಿಭಾಗಗಳ ಮುಂದೆ ಫಲಪುಷ್ಪ ಪ್ರದರ್ಶನ ನಡೆಯಲಿದೆ.
ಈ ಫಲಪುಷ್ಪ ಪ್ರದರ್ಶನದ ಸೆ.೨೪ರಂದು ವಿ.ವಿ.ಕುಲಪತಿ ಪ್ರೊ.ಜೆ.ಶಶಿಧರ
ಪ್ರಸಾದ್ ಉದ್ಘಾಟಿಸಲಿದ್ದಾರೆ.
ಯೋಗ ನಡಿಗೆ
ದಸರಾ ಪ್ರವಾಸೋದ್ಯಮ ಸಮಿತಿಯು ಈ ಬಾರಿ
ಮೈಸೂರನ್ನು ಅಂತಾರಾಷ್ಟ್ರೀಯ ಯೋಗ ಪ್ರವಾಸೋದ್ಯಮ
ಕೇಂದ್ರವನ್ನಾಗಿ ಪರಿವರ್ತಿಸುವ ಉದ್ದೇಶದಿಂದ