ನಗರದ ರವೀಂದ್ರ
ಕಲಾಕ್ಷೇತ್ರದಲ್ಲಿ ಆಗಸ್ಟ್ ೧ರಂದು ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ
ಅರವಿಂದ ಕಲಾವೃಂದದವರ ೨೨ ನೇ ವರ್ಷದ ವಾರ್ಷಿಕ ಮಹೋತ್ಸವ ನಡೆಯಿತು. ಇದರ
ಅಂಗವಾಗಿ ಸುಗಮ ಸಂಗೀತ ಮಹೋತ್ಸವವನ್ನುಏರ್ಪಡಿಸಲಾಗಿದ್ದು, ಖ್ಯಾತ ಗಾಯಕ
ಗಾಯಕಿಯರಿಂದ ಯುಗಳ ಗೀತೆಗಳ ಗಾಯನವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ
ಉದ್ಘಾಟನೆಯನ್ನು ಎಂ.ಪಿ. ಪ್ರಕಾಶ್, ಅಧ್ಯಕ್ಷತೆಯಲ್ಲಿ ಬಿ.ಎನ್. ಬಚ್ಚೇಗೌಡ ಹಾಗೂ ಮುಖ್ಯ
ಅತಿಥಿಗಳಾಗಿ ಡಾ|| ಎಸ್. ಪರಶಿವಮೂರ್ತಿ, ಮಹೇಶ್ ಜೋಶಿ, ಮಾರ್ಕಾಂಡಪುರಂ ಶ್ರೀನಿವಾಸ,
ಅಲ್ಲಿಯನ್ ಗ್ಲ್ಯಾವೀರ್ ಹಾಗೂ ಬಿ. ಮೋಹನ್ ವಹಿಸಿದ್ದರು.
ಇದೇ
ಕಾರ್ಯಕ್ರಮದಲ್ಲಿ ಡಾ|| ಸಿದ್ದಲಿಂಗಯ್ಯ, ಬಿ.ಆರ್. ಲಕ್ಷ್ಮಣ್ ರಾವ್, ಸಿ.ಕೆ. ತಾರಾ, ಲಕ್ಷ್ಮಣ್
ರಾಮ್ ಅವರನ್ನೂ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬಾಲ ಕಲಾವಿದರ ಗಾಯನ ಪ್ರೇಕ್ಷಕರ
ಮನ ಸೂರೆಮಾಡಿತ್ತು.