Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಮಂಡೇಲಾ ಜೀವನಚರಿತ್ರೆ ಕನ್ನಡಕ್ಕೆ-ಮತ್ತೂರು

ಮಂಡೇಲಾ ಪ್ರಶಸ್ತಿ ಪ್ರದಾನ

 

ಬೆಂಗಳೂರು: ಭಾರತೀಯ ವಿದ್ಯಾಭವನದ ನಿರ್ದೇಶಕ ಮತ್ತೂರು ಕೃಷ್ಣಮೂರ್ತಿಗೆ ಅಸ್ಪೃಶ್ಯತಾ ನಿರ್ಮೂಲನ ವೇದಿಕೆಯವರು ಮಂಗಳವಾರ ಮಂಡೇಲಾ ಮಾನವ ಪ್ರಶಸ್ತಿ ನೀಡಿ ಗೌರವಿಸಿದರು.

 

ರಾಮಾಯಣ ಮತ್ತು ಮಹಾಭಾರತದ ಮೌಲ್ಯಗಳು, ಮಹಾತ್ಮ ಗಾಂಧಿಯವರ ಸಂದೇಶಗಳನ್ನು ಜನರಿಗೆ ತಿಳಿಸುವಲ್ಲಿ ಮಹತ್ವವಾದ ಪಾತ್ರವಹಿಸಿದ್ದಕ್ಕಾಗಿ ಅವರು ಮಂಡೇಲಾ ಪ್ರಶಸ್ತಿ ಗಳಿಸಿದ್ದಾರೆ. ನೆಲ್ಸನ್ ಮಂಡೇಲಾರವರನ್ನು ಇತ್ತೀಚೆಗೆ ಲಂಡನ್‌ನಲ್ಲಿ ಮತ್ತೂರು ಕೃಷ್ಣಮೂರ್ತಿ ಭೇಟಿ ಮಾಡಿದ್ದರು. ಮಂಡೇಲಾ ಪ್ರಶಸ್ತಿ ದೊರೆತಿದ್ದಕ್ಕೆ ಹರ್ಷ ವ್ಯಕ್ತಪಡಿಸುತ್ತಾ, ಅವರ ಜೀವನ ಚರಿತ್ರೆಯನ್ನು ಕನ್ನಡಕ್ಕೆ ಅನುವಾದ ಮಾಡುವುದಾಗಿ ಹೇಳಿದರು.

 

ಉಚಿತವಾಗಿ ಕೂದಲು ಕತ್ತರಿಸುವುದರ ಮೂಲಕ ಜುಲೈ ೧೮ ರಂದು ನೆಲ್ಸನ್ ಮಂಡೇಲಾರ ಹುಟ್ಟುಹಬ್ಬವನ್ನು ಆಚರಿಸುತ್ತ ಬಂದಿರುವ ವೇದಿಕೆಯ ಮುತ್ತುರಾಜ್ ಉಪಸ್ಥಿತರಿದ್ದರು.

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com