Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಡಿಡಿಯಲ್ಲಿ ಚಿದಂಬರ ರಹಸ್ಯ, ಕುಸುಮಬಾಲೆ, ಓಂ ಣಮೋ

ಬೆಂಗಳೂರು: ಕನ್ನಡ ಸಾಹಿತ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದೂರದರ್ಶನವು ಕಾದಂಬರಿ ಆಧಾರಿತ ಧಾರಾವಾಹಿಗಳನ್ನು ಮಾಡಲು ಮುಂದಾಗಿದೆ.

 

ಪೂರ್ಣಚಂದ್ರತೇಜಸ್ವಿಯವರ ಬಹುಜನಪ್ರಿಯ ಕಾದಂಬರಿಯಾದ ಚಿದಂಬರ ರಹಸ್ಯ, ದೇವನೂರು ಮಹಾದೇವರವರ ಕುಸುಮ ಬಾಲೆ, ಶಾಂತಿನಾಥ ದೇಸಾಯಿಯವರ ಓಂ ಣಮೋ ಈಗ ದೂರದರ್ಶನ ಆರಿಸಿಕೊಂಡಿರುವ ಪ್ರಮುಖ ಕಾದಂಬರಿಗಳಾಗಿವೆ.

 

ಕಾದಂಬರಿ ಆಧಾರಿತ ಧಾರಾವಾಹಿಗಳು ಆಗಸ್ಟ್ ೭ ರಿಂದ ಪ್ರತಿ ದಿನ ರಾತ್ರಿ ೮ ರಿಂದ ೮:೩೦ರವರೆಗೆ ಪ್ರಸಾರವಾಗಲಿದೆ. ಚಂದನ ವಾಹಿನಿಯ ಮೂಲಕ ಈ ಧಾರಾವಾಹಿಗಳು ೫೪ ದೇಶಗಳಲ್ಲಿ ಏಕಕಾಲದಲ್ಲಿ ಪ್ರಸಾರವಾಗಲಿದೆ.

 

ಧಾರಾವಾಹಿಗಳನ್ನು ನಿರ್ದೇಶಿಸುವ ಹೊಣೆಯನ್ನು ಖ್ಯಾತ ನಟ, ನಿರ್ದೇಶಕ ಗಿರೀಶ್ ಕಾರ್ನಾಡ್ ಮತ್ತು ಚೈತನ್ಯ ಕೆ. ಎಂ. ವಹಿಸಿಕೊಂಡಿದ್ದಾರೆ. ಭಾರತ ಕಲೆಗಳನ್ನು ಪ್ರೋತ್ಸಾಹಿಸುವ ದೂರದರ್ಶನದ ಕಾರ್ಯಕ್ರಮದಲ್ಲಿ ಇದು ಒಂದು ಭಾಗವೆಂದು ದೂರದರ್ಶನದ ನಿರ್ದೇಶಕ ಮಹೇಶ್ ಜೋಶಿ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com