ಛಂದ ಪುಸ್ತಕ ಬಹುಮಾನಕ್ಕೆ ಹಸ್ತಪ್ರತಿ
ಆಹ್ವಾನ
ಕಳೆದ ಎರಡು
ವರ್ಷಗಳಿಂದ ಯಶಸ್ವಿಯಾಗಿ ಹೊಸ ಲೇಖಕರ ಪುಸ್ತಕಗಳನ್ನು
ಪ್ರಕಟಿಸಿದ ಛಂದ ಪುಸ್ತಕ ೨೦೦೬ನೇ ಸಾಲಿನ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು
ಆಹ್ವಾನಿಸುತ್ತಿದೆ.
ಇದುವರೆಗೂ ಒಂದೂ
ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ.
ತಮಗೆ ಉತ್ತಮವೆನಿಸಿದ ಸುಮಾರು ೧೦ ಪ್ರಕಟಿತ/ಅಪ್ರಕಟಿತ
ಕತೆಗಳನ್ನು ಕಳುಹಿಸಬೇಕು. ಕತೆಗಳನ್ನು ಡಿಟಿಪಿ ಮಾಡಿಸಿ
ಕಳಿಸಬೇಕು ಇಲ್ಲವೇ ಸ್ಫುಟುವಾದ ಕೈಬರಹದಲ್ಲಿ ಬರೆದಿರಬೇಕು.
ಆಯ್ಕೆಯಾದ ಹೊಸ
ಕತೆಗಾರರಿಗೆ ೫೦೦೦ ರೂಪಾಯಿ ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು
ಕೊಟ್ಟು, ಅವರ ಕಥಾ ಸಂಕಲನವನ್ನು ಛಂದ ಪುಸ್ತಕ ಪ್ರಕಟಿಸುತ್ತದೆ.
ಸುಮಾರು ೧೦೦ ಪುಟಗಳ ಚೆಂದ ಮುದ್ರಣದ ಈ ಪುಸ್ತಕವನ್ನು
೨೦೦೭ರ ಜನವರಿ ತಿಂಗಳ ಕೊನೆಯಲ್ಲಿ ಬೆಂಗಳೂರಿನಲ್ಲಿ ನಡೆಯವ ಸಮಾರಂಭದಲ್ಲಿ
ಬಿಡುಗಡೆ ಮಾಡಲಾಗುವುದು.
ಪುಸ್ತಕದ ಆಯ್ಕೆ ಮತ್ತು
ಪ್ರಕಟಣೆಯಲ್ಲಿ ಪ್ರಕಾಶಕರದೇ ಅಂತಿಮ ನಿರ್ಧಾರ. ಕತೆಗಳನ್ನು
ಕಳಿಸಬೇಕಾದ ವಿಳಾಸ: ಛಂದ ಪುಸ್ತಕ,
c/o
ವಸುಧೇಂದ್ರ, ಐ-೦೦೪, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ
ರಸ್ತೆ, ಬೆಂಗಳೂರು - ೭೬
ಕೊನೆಯ ದಿನಾಂಕ: ಸೆಪ್ಟೆಂಬರ್
೩೦.
ವಿವರಗಳಿಗೆ