Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Tuesday, 31 October 2006 02:27 AM

ರಾಷ್ಟ್ರಪ್ರೇಮಿ ಭಗತ್‌ಸಿಂಗ್ ಜನ್ಮಶತಮಾನೋತ್ಸವ

ಬೆಂಗಳೂರು: ಸ್ವಾತಂತ್ರ್ಯ ಸಂಗ್ರಾಮದ ಅಗ್ರಗಣ್ಯ ನಾಯಕ ಹುತಾತ್ಮ ಭಗತ್‌ಸಿಂಗ್ ಅವರ ಜನ್ಮ ಶತಮಾನೋತ್ಸವವನ್ನು ದಿನಾಂಕ ೨೭-೦೯-೨೦೬ ರಂದು ಆಚರಿಸಲಾಗುವುದು. ಭಗತ್‌ಸಿಂಗ್ ಅವರ ತ್ಯಾಗ ಹಾಗೂ ಬಲಿದಾನಗಳಿಗೆ ಭಾರತೀಯರಾದ ನಾವೆಲ್ಲರೂ ಗೌರವ ಹಾಗೂ ಕೃತಜ್ಞತೆಯನ್ನು ಸಲ್ಲಿಸಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯ. ಭಾರತೀಯರಾದ ನಾವೆಲ್ಲರೂ ಹುತಾತ್ಮರಿಗೆ ಚಿರಋಣಿಗಳು.

ಭಗತ್‌ಸಿಂಗ್‌ರಿಗೆ ನಮ್ಮ ಗೌರವ ಹಾಗೂ ಕೃತಜ್ಞತೆಯನ್ನು ಜನ್ಮ ದಿನದ ಆಚರಣೆಯ ಮೂಲಕವೇ ತಿಳಿಸುವುದು ಆರ್ಥಪೂರ್ಣವಾಗುವುದಿಲ್ಲ. ಭಗತ್‌ಸಿಂಗ್‌ರ ನಿಲುವು ಹಾಗೂ ಸಿದ್ಧಾಂತಗಳನ್ನು ರೂಢಿಸಿಕೊಳ್ಳುವುದರ ಮೂಲಕ ಮತ್ತು ಅವರು ಕಂಡ ರಾಷ್ಟ್ರದ ಕನಸನ್ನು ನನಸಾಗಿರುವ ದಿಸೆಯಲ್ಲಿ ಹೆಜ್ಜೆ ಹಾಕುವ ಮೂಲಕ ನಾವು ಈ ಮಹಾನ್ ಭಾರತೀಯನಿಗೆ ಗೌರವ ಸಲ್ಲಿಸಬಹುದು.

ನಿಮ್ಮ ಮನಸ್ಸಿನ ಮೇಲ್ಪದರೆಗಳಿಗೆ ಭಗತ್‌ಸಿಂಗ್ ಹೆಸರು ಹಾಗೂ ಅವರು ಮಾಡಿದ ತ್ಯಾಗ, ಬಲಿದಾನಗಳನ್ನು ತರಲು ಪ್ರಯತ್ನಿಸುತ್ತಿದ್ದೇವೆ. ನೀವು ರಾಷ್ಟ್ರ ನಿರ್ಮಾಣದ ಸ್ವರೂಪ, ಸಮಾಜ ಎದುರಿಸುತ್ತಿರುವ ಸಮಸ್ಯೆಗಳು ಅವುಗಳಿಗೆ ನಿಮ್ಮ ಪರಿಹಾರ ಮತ್ತು ಸೂತ್ರವನ್ನು ಕೊಡುವುದರ ಮೂಲಕ ರಾಷ್ಟ್ರನಾಯಕನಿಗೆ ನಮನ ಮತ್ತು ಗೌರವವನ್ನು ಸಲ್ಲಿಸುತ್ತಾ ನಮ್ಮ ಪ್ರಜಾತಂತ್ರವನ್ನು ಹೆಚ್ಚು ಅರ್ಥಪೂರ್ಣ ಹಾಗೂ ಸಮರ್ಥವಾಗಿಸಬಹುದು.

ಈ ನಿಟ್ಟಿನಲ್ಲಿ ದಿನಾಂಕ ೨೭-೦೯-೨೦೦೬ ರಂದು ಹುತಾತ್ಮ ಭಗತ್‌ಸಿಂಗ್‌ರ ಜನ್ಮ ಶತಮಾನೋತ್ಸವ ದಿನಾಚರಣೆ ಹಾಗೂ ಹುತಾತ್ಮ ಯೋಧರ ಕುಟುಂಬದ ಸದಸ್ಯರ ಸನ್ಮಾನ ಸಮಾರಂಭವನ್ನು `ಸಮಾನ ಮನಸ್ಕರ ವೇದಿಕೆ' ಸಂಘವು ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆಯಲ್ಲಿ ಬೆಳಗ್ಗೆ ೧೦.೩೦ ಕ್ಕೆ ಹಮ್ಮಿಕೊಂಡಿದೆ.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಹೆಚ್.ಎಸ್. ದೊರೆಸ್ವಾಮಿ ಈ ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಮೇಯರ್ ಜಿ. ನಾರಾಯಣ ಹಾಗೂ ನಿವೃತ್ತ ಲೋಕಾಯುಕ್ತರಾದ ವೆಂಕಟಾಚಲ ಆಗಮಿಸಲಿದ್ದಾರೆ ಎಂದು ಸಂಘದ ಮುಖ್ಯಸ್ಥ ವಿ. ಮಂಜುನಾಥ ಹೇಳಿದ್ದಾರೆ.

ಸಮಾರಂಭದ ಆಕರ್ಷಣೆಯಾಗಿ ಭಗತ್ ಸಿಂಗ್ ಕುರಿತ ಹಿಂದಿ ಚಲನಚಿತ್ರ `ದಿ ಲೇಜಂಡ್ ಆಫ್ ಭಗತ್ ಸಿಂಗ್' ಪ್ರದರ್ಶನವಾಗಲಿದೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: ೯೮೪೫೦ ೪೫೪೮೦

ಇನ್ನಷ್ಟು

ಫ್ರಾನ್ಸ್ ಪತ್ರಿಕೆಯಲ್ಲಿ ಲಾಡೆನ್ ಸಾವಿನ ವರದಿ

ಮಹಿಳೆಯರೂ ವೇದ ಕಲಿಯಬೇಕು: ಸ್ವಾಮೀಜಿ

ಕರ್ನಾಟಕಕ್ಕೆ ವಿಶ್ವ ಬ್ಯಾಂಕ್‌ನಿಂದ ೮೯೭ ಕೋಟಿ. ರೂ

ಸೂರ್ಯನ ಜಾಡು ಹಿಡಿಯ ಹೊರಟ ಜಪಾನಿಗರು

ಕೇರಳದಲ್ಲಿ ಕೋಲಾ ನಿಷೇಧ ರದ್ದು

ಸಚಿವರ ಹೇಳಿಕೆಗೆ ಕ್ಷಮೆ ಯಾಚಿಸಿದ ಗೌಡರು

ಟಿಪ್ಪು ವಿವಾದದಲ್ಲಿ ಮೂರನೆಯ ಪಕ್ಷ

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com