|
ಹೊರಗೂ ಮಳೆ ಒಳಗೂ ಮಳೆ
ಏನಿದು ಹೊರಗೂ ಮಳೆ ಒಳಗೂ ಮಳೆ ಅಂತೀರಾ? ಅದು ನಮ್ಮ
ರಘುನಾಥ ಚ. ಹ ರವರ ಚೊಚ್ಚಲ ಕಥಾಸಂಕಲನ.
(ರಘುನಾಥ ಚನ್ನಿಗರಾಯಪ್ಪ ಹರಳಾಪುರ) ರಘುನಾಥ ಚ.ಹ
ರವರು ಮೂಲತಹ ಪಟ್ಟನಾಯಕನಹಳ್ಳಿಯವರು. ಏಶಿಯನ್
ಕಾಲೇಜ್ ಆಫ್ ಜರ್ನಲಿಸಮ್ ಕಾಲೇಜಿನಲ್ಲಿ ಪತ್ರಿಕೋದ್ಯಮ
ಅಧ್ಯಯನ ಮಾಡಿದ್ದಾರೆ. ಈಗ ಪ್ರಜಾವಾಣಿಯಲ್ಲಿ ಉಪಸಂಪಾದಕರಾಗಿ
ಕಾರ್ಯನಿರ್ವಹಿಸುತ್ತಿದ್ದಾರೆ. ವಿಜಯಕರ್ನಾಟಕ ಕಥಾ ಸರ್ಧೆಯಲ್ಲಿ
ಇವರ `ಕಾಡನಡುವಿನ ಮಳೆ' ಎಂಬ ಕಥೆಗೆ ೨ನೇ ಬಹುಮಾನ
ಬಂದಿತ್ತು. ಅಷ್ಟೇ ಅಲ್ಲದೇ `ಹೊಳೆಯಲ್ಲಿ ಹರಿದ ನೀರು' ಎಂಬ ಕವನ
ಸಂಕಲನವು ಈಗಾಗಲೇ ಮಾರುಕಟ್ಟೆಯಲ್ಲಿದೆ.
ಇದೇ ಡಿಸೆಂಬರ್ ೧೭ ಭಾನುವಾರ ಬೆಳಗ್ಗೆ ೧೦:೩೦ಕ್ಕೆ ಕನ್ನಡ
ಭವನದ ನಯನ ಸಭಾಂಗಣದಲ್ಲಿ `ಹೊರಗೂ ಮಳೆ ಒಳಗೂ
ಮಳೆ' ಕಥಾಸಂಕಲನವು ಲೋಕಾರ್ಪಣೆಗೊಳ್ಳಲಿದೆ.
ಅಷ್ಟೇ ಅಲ್ಲದೇ ಪುಸ್ತಕ ಬಿಡುಗಡೆ ಸಮಾರಂಭದ ನಂತರ
`ಕಥೆಗಳ ಕಥೆಗಳು' ಎಂಬ ಸಂವಾದ ಕಾರ್ಯಕ್ರಮವನ್ನು ಸಹ
ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಕಥೆಗಾರರಾದ ರಾಘವೇಂದ್ರ ಪಾಟೀಲ್, ಎಸ್.
ದಿವಾಕರ್, ಅಶೋಕ ಹೆಗಡೆ, ಆನಂದ ಋಗ್ವೇದಿ, ಮಂಜುನಾಥ್ ಲತಾ
ಪಾಲ್ಗೊಳ್ಳಲಿದ್ದಾರೆ.
ಸಂಚಯ ಸಾಹಿತ್ಯ ಪತ್ರಿಕೆಯ ಪ್ರಹ್ಲಾದ್ ಪ್ರಕಾಶನದ ಈ
ಪುಸ್ತಕದ ಬೆಲೆ ೧೦೦ ರೂಪಾಯಿಗಳು ಮಾತ್ರ. ಕಾರ್ಯಕ್ರಮದಲ್ಲಿ
ಪುಸ್ತಕದ ಮಾರಾಟವು ಸಹ ಇದೆ.
ಬನ್ನಿ, ರಘುನಾಥ ಚ.ಹರವರನ್ನು ಅಭಿನಂದಿಸಿ, ಪ್ರೋತ್ಸಾಹಿಸಿ
ಪುಸ್ತಕವನ್ನು ಕೊಂಡು ಓದಿ.
ಕಾರ್ಯಕ್ರಮದ ಇತರ ವಿವರಗಳಿಗಾಗಿ ಸಂಪರ್ಕಿಸಿ:
ಸಂಚಯ
ನಂ. ೧೦೦, ೨ನೇ ಮುಖ್ಯರಸ್ತೆ, ೬ನೇ ಬ್ಲಾಕ್,
ಬನಶಂಕರಿ ೩ನೇ ಹಂತ, ಬೆಂಗಳೂರು-೮೫.
ದೂರವಾಣಿ :
98440 63514.
ಇನ್ನಷ್ಟು
ಯುವರಾಜ್
ಹುಟ್ಟುಹಬ್ಬದಲ್ಲಿ ಗಲಾಟೆ
ಇನ್‌ಫಿ ಕ್ಯಾಂಪಸಿನಲ್ಲಿ ಕಟ್ಟಡ
ಕುಸಿತ ಐವರ ಸಾವು
ಜನವರಿಯಲ್ಲಿ ಕಸ್ತೂರಿ
ವಾಹಿನಿ ಪ್ರಾರಂಭ
ಅಣುಬಂಧಕ್ಕೆ ಬಿಜೆಪಿ
ಅಸಮಧಾನ
ಯಶಸ್ವಿಯಾದ ರಕ್ಷಣಾ
ವೇದಿಕೆಯ ಕಾಲ್ನಡಿಗೆ ಜಾಥ
ಬಾಹ್ಯಾಕಾಶಕ್ಕೆ ಸೇರಿದ
ಸುನೀತ ವಿಲಿಯಮ್ಸ್
ಕುಮಾರಸ್ವಾಮಿಯ ಹೊಸ
ಅವತಾರ
|