Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Sunday, 24 September 2006 11:39 PM

ನಿಮ್ಮ ಬರಹ, ಅನಿಸಿಕೆ ಮತ್ತು ಪ್ರಶ್ನೆಗಳಿಗೆ ಸದಾ ಸ್ವಾಗತ

ಹಲ್ಲು ಸ್ವಲ್ಪ ಕಿರಿಕ್ ಮಾಡಿತ್ತು. ವೈದ್ಯರ ಹತ್ತಿರ ಹೋದzWrite to us, ಇಕ್ಕುಳ ಸೂಜಿಗಳನ್ನು ಬಾಯೊಳಗಿಟ್ಟು ಹಾಳಾಗಿರುವ ಹಲ್ಲುಗಳ ಲೆಕ್ಕ ಬರೆದರು. ಮತ್ತೆ ರಿಪೇರಿ ಮಾಡಬಹುದಾದ ಹಲ್ಲುಗಳು ಇಂತಿಷ್ಟು, ರಿಪೇರಿಯಾಗದೇ ಇರುವ ಹಲ್ಲುಗಳು ಇಂತಿಷ್ಟು ಅಂತ ಪ್ರತ್ಯೇಕ ಲೆಕ್ಕ ಬರೆದು ಅವುಗಳ ವಿಲೇವಾರಿಗಳಿಗೆ ಆಗುವ ವೆಚ್ಚವನ್ನೂ ಬರೆದು ಚೀಟಿಯನ್ನು ಕೈಗಿಟ್ಟರು.

ಅದರಲ್ಲಿ ಒಂದು ಹಲ್ಲನ್ನು ರೂಟ್‌ಕೆನಾಲ್‌ನಿಂದ ಬದುಕಿಸಬಹುದು ಎಂಬ ಸಲಹೆಯನ್ನು ಮೊದಲಿಗೆ ಕೈಗೆತ್ತಿಕೊಂಡು ಅದಕ್ಕೆ ದಿನಗಳನ್ನು ಗೊತ್ತು ಮಾಡಿದ್ದಾಯಿತು.

ಹಲ್ಲಿನ ಹಾಳಾದ ಜಾಗಗಳನ್ನು ಸೂಕ್ಷ್ಮವಾಗಿ ಕೆತ್ತಿ, ಬೇರಿನಲ್ಲಿರುವ ಕೀಟಾಣುಗಳನ್ನೂ ನಾಶಪಡಿಸಿ ಅಲ್ಲಿಗೆ ಸಿಮೆಂಟ್ ತುಂಬಿ ಅದರ ಮೇಲೊಂದು ಬೆಳ್ಳಿಯ ಮುಚ್ಚಳ ಹಾಕಿ ಜಡಿದು ಹಲ್ಲನ್ನು ಫ್ರೆಶ್ ಮಾಡಲಾಯಿತು. ಇದು ರೂಟ್ ಕೆನಾಲ್ ಟ್ರೀಟ್‌ಮೆಂಟ್‌ನ ಶೈಲಿ. ಆದರೆ ಇದು ಒಂದೇ ಸರ್ತಿಗೆ ಮುಗಿದುಹೋಗುವುದಿಲ್ಲ. ನಾಲ್ಕೈದು ಬಾರಿ ವೈದ್ಯಶಾಲೆಗೆ ಹೋಗಬೇಕು. ಇರಲಿ...

ಈ ಪ್ರಕ್ರಿಯೆಯ ನಡುವೆ ರೂಟ್ ಕೆನಾಲ್ ಎಂದರೇನು, ಹಲ್ಲಿನ ಬೇರಿನ ಮೇಲೆ ಅನಸ್ತೇಸಿಯಾ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ, ಬೆಳ್ಳಿಯ ಮುಚ್ಚಳ ಎಷ್ಟು ಬಾಳಿಕೆ ಬರುತ್ತದೆ, ಕೋಡುಬಳೆ ತಿನ್ನಲಾ, ಮಾಂಸಾಹಾರಿಯಾಗಿದ್ದರೆ ಏನು ಕತೆ... ಎಂಬೆಲ್ಲಾ ಅಂಶಗಳ ಬಗ್ಗೆ ವೈದ್ಯರ ತಲೆ ತಿನ್ನುತ್ತಲೇ ಇದ್ದೆ. ಚಿಕಿತ್ಸೆಯ ಸಂದರ್ಭದಲ್ಲಿ ಈ ಬಗ್ಗೆ ಒಂದು ಲೇಖನವನ್ನೇ ಬರೀಬೇಕು ಅಂತ ಆಗಾಗ ಅನಿಸುತ್ತಿತ್ತು.

ನಿಮಗೂ ಹೀಗೆ ಕೆಲವು ಸಂದರ್ಭಗಳಲ್ಲಿ ಅನಿಸಿರಬಹುದು ಅಲ್ವಾ? ತರಕಾರಿ ಮಾರುಕಟ್ಟೆಯಿಂದ ಹಿಡಿದು ಒಂದು ಎಸ್.ಎಂ.ಎಸ್ ಬಗ್ಗೆ, ವಿದ್ಯುತ್ ಕೈಕೊಟ್ಟಾಗ ಏನೋ ವಿಚಾರ ಹೊಳೆದುದು, ರಾಜಕೀಯ ವಲಯದ ಘಟನೆ ಓದಿ ಸಿಟ್ಟು ಬರುವುದು, ಆಕಾಶದಲ್ಲಿ ಚಂದಮ್ಮಾ ಮಳೆಯಲ್ಲಿ ನೆನೀತಿದ್ದಾನೆ ಅಂತ ನಿಮ್ಮ ಮಗು ಹೇಳುತ್ತಿರುವಾಗ ಆದ ಪುಳಕ... ಹೀಗೇ... ರವಿ ಕಾಣದ್ದನ್ನೂ ಕವಿ ಕಾಣಬಹುದಂತೆ. ಬರೆಯಬಹುದಂತೆ..

ಓದುಗರೇ,

ನಿಮ್ಮ ವೇದಿಕೆ ಇಲ್ಲಿದೆ. ನೀವ್ಯಾಕೆ ಬರೆಯಬಾರದು ?

* ನೀವು ಪೇಪರಲ್ಲಿ ಬರೆದಿದ್ದರೆ ಅದನ್ನು ಜಸ್ಟ್ ನಮಗೆ ಪೋಸ್ಟ್ ಮಾಡಿಬಿಡಿ.

ಇಲ್ಲಿದೆ ವಿಳಾಸ : ಸಂಖ್ಯೆ ೧೨, ೧೮ನೇ ಅಡ್ಡರಸ್ತೆ, ಲಾಲ್‌ಜಿ ನಗರ, ಲಕ್ಕಸಂದ್ರ, ಬೆಂಗಳೂರು - ೫೬೦ ೦೩೦. ದೂ: ೦೮೦-೨೨೧೦೯೩೦೭, ಫ್ಯಾಕ್ಸ್: ೦೮೦-೨೨೧೦೯೩೦೮

* ಕಂಪ್ಯೂಟರ್‌ನಲ್ಲಿ ಬರೆಯಬೇಕೆಂದುಕೊಂಡಿದ್ದರೆ ಮೊತ್ತ ಮೊದಲು ಬರಹ ಸಾಫ್ಟ್‌ವೇರ್ ಡೌನ್‌ಲೋಡ್ ಮಾಡಿಕೊಳ್ಳಿ. www.baraha.com ಬರಹದ ಮೂಲಕ ನಿಮ್ಮ ಯೋಚನೆಗಳನ್ನು, ಲಹರಿಗಳನ್ನು, ಕವನ, ಕಥೆ, ವಾದ, ಪ್ರಬಂಧ.. ಹೀಗೆ ಯಾವುದೇ ಶೈಲಿಯ ಚಿಂತನೆಗಳನ್ನು ಅಕ್ಷರರೂಪಕ್ಕಿಳಿಸಿ. ಮುಂದಿನ ಹಂತ ನೀವು ಬರೆದ ಲೇಖನವನ್ನು ಈ-ಮೇಯ್ಲ್ ಮುಖಾಂತರ ನಮಗೆ ಕಳುಹಿಸುವುದು. ಇಲ್ಲಿದೆ ಈ ಮೇಯ್ಲ್ ವಿಳಾಸ : editor@vikrantakarnataka.com

ವಿಕ್ರಾಂತ ಪ್ರಕಾಶನದಲ್ಲಿ :

ನೀವು ಈ-ಮೇಯ್ಲ್ ಮುಖಾಂತರ ಕಳುಹಿಸಿದ ಲೇಖನಗಳು ವಿಕ್ರಾಂತ ಕಚೇರಿಗೆ ಬಂದ ನಂತರ ಅಲ್ಲಿ ಮತ್ತೆ ಎರಡು ಅವಕಾಶಗಳು ನಿಮ್ಮ ಬರಹಕ್ಕೆ ದಕ್ಕುತ್ತವೆ. ಒಂದು ವಾರಪತ್ರಿಕೆ, ಇನ್ನೊಂದು ವೆಬ್‌ಸೈಟ್. ನೀವು ಕಳುಹಿಸುವ ಅಭಿಪ್ರಾಯಗಳೂ ನಮ್ಮ ವೆಬ್‌ಸೈಟ್‌ನಲ್ಲಿ ಅಥವಾ ವಾರಪತ್ರಿಕೆಯಲ್ಲಿ ತಕ್ಕ ಸ್ಥಾನ ಪಡೆಯುತ್ತವೆ.

ವಾರಪತ್ರಿಕೆಯ ಚಂದಾದಾರರಾಗುವುದು ಹೇಗೆ, ಪ್ರಕಾಶನದಲ್ಲಿ ಜಾಹೀರಾತು ನೀಡುವುದು ಹೇಗೆ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರಗಳು ಈ ಪ್ರತ್ಯೇಕ ಪುಟದಲ್ಲಿವೆ.

http://www.vikrantakarnataka.com/magazine/index.htm

ಮತ್ತಷ್ಟು ಮಾಹಿತಿಗಳಿಗೆ ನೀವು ನಮಗೆ ಈ-ಮೇಯ್ಲ್ ಮಾಡಿ. ನಿಮ್ಮ ಪತ್ರಗಳಿಗೆ ಸದಾ ಸ್ವಾಗತ. editor@vikrantakarnataka.com ಅಥವ feedback@vikrantakarnataka.com

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

ಹೆಸರು/ Name:

ಇ ಮೈಲ್/ Email:

ಅಭಿಪ್ರಾಯ / Comments:

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com