|
ವಿನಯ್ ಅರಸಿಕೆರೆಗೆ ವಿಚಿತ್ರಾನ್ನ ಜೋಷಿ ಪ್ರಶ್ನೆ.
ಈಗ ಏನಂತೀರಿ?
ಮಾನ್ಯರೆ,
ಸಮ್ಮೇಳನದ ಪತ್ರಿಕಾವರದಿಗಳನ್ನು ನೋಡಿದ ನಂತರ, ತಾವು ಶಂಕಿಸುವ ಮಾಧ್ಯಮದವರ
ಬಗ್ಗೆ ` ಸದಾಶಯ
ಹೊತ್ತ ಕನ್ನಡಿಗ' ವಿನಯ್ ಅರಸಿಕೆರೆಯವರ ಈಗಿನ ಅಭಿಪ್ರಾಯ ಏನಿದೆ?
ವರದಿ ಮತ್ತು ಪೋಟೊಗಳನ್ನು ಪ್ರಕಟಿಸಿದವರು ಅಕ್ಕ ಡೈರೆಕ್ಟರ್‌ಗಳ `ಅಧೀನರು'
ಎಂದು ಅವರು ಈಗಲೂ ಭಾವಿಸುತ್ತಾರೆಯೆ? ಹೌದಾದಲ್ಲಿ ನನ್ನ ಪ್ರಾರ್ಥನೆ, `ತಾಯಿ ಭುವನೇಶ್ವರಿ
ಅವರನ್ನು ಆಶೀರ್ವದಿಸಲಿ,' ಎಂದು.
ಶ್ರೀವತ್ಸ ಜೋಷಿ
ದಟ್ಸ್‌ಕನ್ನಡದ
ವಿಚಿತ್ರಾನ್ನ ಅಂಕಣಕಾರರು
http://thatskannada.oneindia.in/column/vichitranna/index.html
ವಿನಯ್, ದಯವಿಟ್ಟು ನಿಮ್ಮ ಈಗಿನ ಅಭಿಪ್ರಾಯ ತಿಳಿಸಿ.
ಓದುಗರೂ ಸಹ ಇಲ್ಲಿಗೆ
(feedback@vikrantakarnataka.com)
ಈ ವಿಷಯದ ಮೇಲೆ ಪತ್ರ ಬರೆಯಬಹುದು.
ಓದುಗರ ಕುತೂಹಲಕ್ಕೆ: ಅಕ್ಕ ಸಮ್ಮೇಳನದ ಬಗ್ಗೆ ಪ್ರಜಾವಾಣಿಯ ಸಾಪ್ತಾಹಿಕ
ಪುರವಣಿಯಲ್ಲಿ ಚಂಪಾ ಬರೆದ ಲೇಖನ ಇಲ್ಲಿದೆ.
http://www.prajavani.net/sep172006/6673020060917.php
*
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
AKKAನಿಗೊಂದು
ಪತ್ರ...
ಪ್ರೀತಿಯ ಅಕ್ಕನಿಗೆ
ಸಾಷ್ಟಾಂಗ ನಮಸ್ಕಾರಗಳು...
ನೀ ಅಲ್ಲೆಲ್ಲೋ ವಿದೇಶದಲ್ಲಿದ್ಕೊಂಡು
ನಮ್ ಭಾಷೆ ಕನ್ನಡಕ್ಕೋಸ್ಕರ ಬಹಳ ದುಡಿತಾ ಇದ್ಯ ಅಂತ ಕೇಳಿ ಬಹಳ ಖುಷಿ ಆಯ್ತು
ಕಣಕ್ಕ....
ವೆಬ್‌ಸೈಟ್‌ಗಳಲ್ಲಿ
ಎಲ್ಲಾ ಒದ್ತಾ ಇರ್ತೀನ್ ಅಕ್ಕ.. ಚಾಚು ತಪ್ದೆ ಪ್ರತಿ ಅಂಕಣಾನು ಒದ್ತೀನಿ ನಿನ್ ಬಗ್ಗೆ.. ನಿಂದು
ಎಲ್ಲಾ ಭಾವ ಚಿತ್ರಗಳ್ನೂ ನೊಡ್ದೆ ಕಣಕ್ಕ.. ಬಲ್ ಪಸಂದಾಗವೆ!!!
ಅಕ್ಕಾ.. ನಿನ್ ವಿಷ್ಯ
ಕೆಳ್ದಾಗ್ಲೆಲ್ಲಾ ನಿನ್ನ ನೊಡ್ಬೇಕು ಅಂತ ಬಲ್ ಆಸೆ ಆತಾದ್ ಕಣಕ್ಕ!!!
ಆದ್ರೆ ನಾನೇನ್
ರಾಜಕಾರಣೀನ??? ಸಾಹಿತೀನ??? ನಟನ??? ಕಲಾವಿದನ??? ಧರ್ಮ ಗುರೂನ??
ಹಾಳಾಗ್ ಹೊಗ್ಲಿ
ದುಡ್ಡಿರೊ ಶ್ರೀಮಂತಾನ???
ಇಲ್ಲ ಕಣಕ್ಕ.. ನಾನು
ಬರೀ ಒಬ್ಬ ಸಾಮಾನ್ಯ ಸಾಹಿತ್ಯಾಭಿಮಾನಿ!!!!
"ಶ್ರೀ ಸಾಮಾನ್ಯನೆ
ಭಘವತ್ ಮಾನ್ಯಮ್!!!
ಶ್ರೀ ಸಾಮಾನ್ಯನೆ
ಭಘವತ್ ಧನ್ಯಮ್!!!"
ಅಂತ ಕುವೆಂಪು ಬರ್‍ದಿರೋ
ಕವನಾನ ನಾನೆ ಅವಾಗ್ ಅವಾಗ್ ಹಾಡ್ಕೊಂಡ್ ಕುಷಿ ಪಡ್ತಾ ಇರ್‍ತೀನ್ ಕಣಕ್ಕ....
ಅದೆಷ್ಟೋ ದೂರ
ಇರೋ ದೇಶಕ್ಕೆ ನಮ್ ಲಲ್ಲೂ ರೈಲು ಕೂಡ ಹೋಗೊಲ್ವಂತೆ!!! ಇಲ್ಲಾ ಅಂದ್ರೆ ಹತ್ಕೊಂಡ್
ನಾನ್ ಬಂದ್ಬಿಡ್ತಿದ್ದೆ.... ಇರ್‍ಲಿ ಬಿಡು...
ಅಕ್ಕಾ ನಾವೇನೂ
ಕಡ್ಮೆ ಇಲ್ಲಾ... ನಾವು ಕನ್ನಡಾನ ಉಳ್ಸೋಕ್ಕೆ ದೊಡ್ ಸಮ್ಮೇಳನಾನೆ ಮಾಡ್ಬೇಕು ಅಂತಿದ್ದೀವಿ..(ಪ್ರತೀ
ವರ್ಷ ಮಾಡ್ತೀವಿ.. ನಮ್ಮಲ್ಲೂ ಊಟ ಬಲ್ ಜೋರು!!!)
ನೀನು ಬಂದ್ಬಿಡಕ್ಕ
ನಿನ್ ಪರಿವಾರ ಎಲ್ಲಾ ಕಟ್ಕೊಂಡು..
ಗೊತ್ತಲ್ಲಕ್ಕ
ಶಿವಮೊಗ್ಗ??? ಅದೆ ಕಣಕ್ಕ ಜೊಗ್ ಜಲ್ಪಾತ ಐತಲ್ಲ...
ಅದೂ ಕೂಡ ನಿಮ್
ನಯಾಗ್ರ ತರಾನೆ... ನಮ್ ದೇಶಕ್ಕೆ!!!!
ಅಕ್ಕ ಇನ್ನೊಂದ್ ವಿಷ್ಯ
ಅಂದ್ರೆ ಈ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷ ಯಾರ್ ಗೊತ್ತ???
ನಮ್ ನಿತ್ಯೋತ್ಸವ
ಕವಿ ಇಲ್ವ?? ಡಾ. ನಿಸ್ಸಾರ್ ಅಹಮದ್!!!
ಅಕ್ಕಾ.. ಆದ್ರೆ ನಮ್ದು
ಬಡ್ ದೇಶ... ಚಂದ ಎತ್ತಾಣ ಅಂದ್ರೆ ಒನ್ದ್ ನಯಾ ಪೈಸಾನೂ ಹುಟ್ಟಲ್ಲಾ ಕಣಕ್ಕ...
ಸಾಹಿತ್ಯ ಏನ್ ಹೊಟ್ಟೆ
ತುಂಬ್ಸ್ತಾದೇನಕ್ಕ??? ಅಂತಾರೆ ಜನ!!! ಅದೂ ಒಂದ್ ತರ ನಿಜಾನೆ ಬಿಡು!!!
ಇನ್ನು ನಮ್ಮ ಸರ್ಕಾರ
ದುಡ್ ಕೊಡ್ತೀವಿ ಕೊಡ್ತೀವಿ, ಇವೊತ್ ಕೊಡ್ತೀವಿ ನಾಳೆ ಕೊಡ್ತೀವಿ ಅಂತಾ ಕೊನೇಗ್ ಕೈ
ಎತ್ಬಿಡ್ತಾರ್ ಕಣಕ್ಕಾ...
ಅವ್ರೂ ಚೆನ್ನಾಗ್
ತಿಳ್ಕೊಂಡ್ಬಿಟ್ಟಾವ್ರೆ ಕಣಕ್ಕ .. ಕನ್ನಡಕ್ಕಾಗಿ ಕೈ ಎತ್ತು ... ನಿನ್ನ ಕೈ ಕಲ್ಪವೃಕ್ಷ ವಾಗುವುದು
ಅಂತ... ನಮ್ ಮಹಾಕವಿ ಹೇಳಿಲ್ವ...
ಆ "ಕೈ ಎತ್ತು" ಅನ್ನೋದ್ಕೆ
ಹೊಸ ಅರ್ಥಾನೆ ಬಂದ್ ಬಿಟ್ಟೈತ್ ಕಣಕ್ಕ ನಮ್ ರಾಜಕಾರಣಿಗಳಿಂದ!!!
ಅಕ್ಕಾ ಅಲ್ಲೆನೊ
ಬಹಳ ಜನ ಇದಾರಂತೆ... ಸಾಹಿತ್ಯ ಅಂದ್ರೆ ಮುಗಿ ಬೀಳ್ತಾರಂತೆ!!!!
ನಮ್ಮಲ್ಲು
ಇದಾರಕ್ಕ!!! ಅರ್ಧ ಜನ ಸಾಹಿತ್ಯ ಸಮ್ಮೇಳನಕ್ಕೆ ಬರೋದೆ ಅಲ್ಲಿ ಸಿಗೊ ನಳಪಾಕಕ್ಕೆ!!!
ಅಯ್ಯೋ ನಮ್ಗ್ಯಾಕ್
ಬಿಡಕ್ಕ.. ಮಾಡ್ದೋರ್ ಪಾಪ ಆಡ್ದೋರ್ ಬಾಯಲ್ಲಿ ಅಂತ..
ಏನೊ ನಮ್ಗೂ ಜನ
ಬಂದ್ರೆ ಸಾಕು.. ಅದೆ ಖುಷಿ...
ಮತ್ತೆ ಅಕ್ಕಾ ೨೦೦೮
ಕ್ಕೆ ತಿರ್‍ಗ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳ್ನ ಮಾಡ್ತ್ಯಂತೆ!!! ಬಹಳ ಖುಷಿ ಆತಾಯ್ತ್
ಕಣಕ್ಕ...
ಆದ್ರೆ ಅಕ್ಕಾ ನನ್ದೊಂದು
ಮಾತು.. ಚಿಕ್ ಹುಡ್ಗ ಎನೋ ಹೇಳ್ತಾ ಇದ್ದೀನಿ...
ತಪ್ಪು ಅನ್ಸ್ದ್ರೆ
ಹೊಟ್ಟೇಗ್ ಹಾಕ್ಕೊಂಡ್ಬಿಡು.... ಅಷ್ಟೊಂದ್ ದೂರ ಇದ್ಕೊಂಡ್ ನೀನ್ ಈ ಕೆಲ್ಸ ಎಲ್ಲ ಮಾಡ್ದ್ರೆ
ನಮ್ ಜನಕ್ಕೆ ಕೆಲ್ಸ ಕಾರ್ಯ ಎಲ್ಲ ಬಿಟ್ ಅಲ್ಲೀಗ್ ಬರೋಕ್ ಕಷ್ಟಾ... ಅದ್ಕೇ...........
ನೀ ಮುಂದಿನ್
ಸಮ್ಮೆಳ್ನಾನ ನಮ್ಮ ಕರುನಾಡಲ್ಲೆ ಯಾಕ್ ಮಾಡ್ಬಾರ್ದಕ್ಕ?????
ಖರ್ಚೂ ಕಡ್ಮೆ
ಆಗುತ್ತಂತೆ!!!
ಆಗ್ಲೆ ಹೇಳ್ದಂಗೆ
ನಿಮ್ಮಲ್ಲಿ ಸಾಹಿತ್ಯ ಅಂದ್ರೆ ಜನ ಬೇಜಾರ್ ಮಾಡ್ಕೊಳ್ದೆ ದೇಣ್ಗೆ ಕೊಡ್ತಾರಂತೆ!!!
ಎಲ್ಲ ತಂದು ಇಲ್ಲೆ
ಇನ್ನೂ ಭವ್ಯವಾಗಿ ಮಾಡ್ಬೋದ್ ಅಲ್ವೇನಕ್ಕ??? ೫ ಕೊಟಿ ಕನ್ನಡಿಗ್ರು ನೊಡ್ಬೋದು ನಿನ್ನಾ!!!
ನಿನ್ನ ನೊಡ್ಬೇಕು
ಅನ್ನೊ ನನ್ ಆಸೆ ಕೂಡ ಪೂರೈಸುತ್ತೆ!!!!
ನಿಂಗೂ ಕೆಲ್ಸ
ಕಾರ್ಯ ಬಿಟ್ ಬರೋಕ್ಕೆ ಕಷ್ಟ ಆಗ್ಬೋದು.. ನೊಡಕ್ಕ ಇನ್ನೊಂದ್ ಸಾರಿ ಯೋಚ್ನೆ ಮಾಡು!!!
ಇತಿ,
ಗುರುಪ್ರಸಾದ್ ಡಿ
ಎನ್
ಮ್ಯಾಗಜೀನ್ ಕದ್ದುಕೊಂಡು ಹೋದ್ರಪ್ಪಾ
ಹಲೋ,
ನಿಮ್ಮ ಮ್ಯಾಗಝೀನ್
ಮೊನ್ನೆ ತಂದುಕೊಟ್ರಲ್ಲಾ. ಅದನ್ನ ಯಾರೋ ಕದ್ದುಕೊಂಡು ಹೋಗಿದ್ದಾರೆ. ನಂಗೆ ಇನ್ನೊಂದು
ಕಾಪಿ ಕೊಡೀಪ್ಪ. ಅದಕ್ಕೆ ಬೇರೆ ಹಣ ಕೊಡ್ತೇನೆ. ಇನ್ನೂ ಒಂದು ಅಕ್ಷರನೂ ಓದಿರಲಿಲ್ಲ. ಮುಖ್ಯವಾಗಿ
ಅದೇನೋ ಹುಡುಗೀರು ಅಂತ ಬರೆದಿದ್ರಲ್ಲ. ಅದಕ್ಕೆ ಯಾರೋ ಕದ್ದುಬಿಟ್ಟಿದ್ದಾರೆ. ಅದಕ್ಕೆ
ನಾನೂ ಓದಬೇಕು.
- ಕಿರಣ್ ಎಂ, ಆನೇಕಲ್
*
ಸತ್ಯಮೂರ್ತಿಯವರೆ,
ನಿಮ್ಮ ಸಾಹಸ `ವಿಕ್ರಾಂತ
ಕರ್ನಾಟಕಕ್ಕೆ ನನ್ನ ಹಾರ್ದಿಕ ಸ್ವಾಗತ ಮತ್ತು ಶುಭ ಹಾರೈಕೆ. ಪತ್ರಿಕಾ ರಂಗದಲ್ಲಿ
ಕೈಸುಟ್ಟುಕೊಂಡು ಅನುಭವವಿರುವ ನನಗೆ ಕೆಲವೊಮ್ಮೆ ಈ ರೀತಿಯ ಸಾಹಸಗಳನ್ನು
ಕಂಡಾಗ ದಿಗಿಲಾದರೂ ಹೊಸ ಕನ್ನಡದ ಪತ್ರಿಕೆಯೊಂದು ಬರಲಿದೆ ಎನ್ನುವ ಸಂತೋಷ
ದಿಗಿಲಿಗಿಂತ ಮಿಗಿಲಾಗಿದೆ.
- ಚೆನ್ನಪ್ಪ
*
`ವಿಕ್ರಾಂತ ಕರ್ನಾಟಕ
ಕನ್ನಡ ವಾರಪತ್ರಿಕೆಯ ಪ್ರಾರಂಭೋತ್ಸವದ ವಿಚಾರ ತಿಳಿದು ಸಂತೋಷವಾಯಿತು. ಪ್ರಸಕ್ತ
ಕಾಲಘಟ್ಟದಲ್ಲಿ ವೈಜ್ಞಾನಿಕ ಸಂಶೋಧನೆಗಳ ಫಲರೂಪವಾಗಿ ಉಂಟಾಗಿರುವ ಸ್ಪರ್ಧಾಮಯ
ಸನ್ನಿವೇಶ ಒಂದು ಸವಾಲೇ ಸರಿ. ಅತ್ಯಂತ ವೇಗವಾಗಿ ಅಷ್ಟೇ ಅಲ್ಲದೇ ಪರಿಣಾಮಕಾರಿಯಾಗಿ
ಓದುಗರನ್ನು ಮೀರಿ ಅಗಾಧ ರೂಪದಲ್ಲಿ ಬೆಳೆಯಲೆಂದು ಮನತುಂಬಿ ಹರಸುತ್ತೇನೆ
-ಬಿ.ಎಲ್. ಶಂಕರ್, ಮಾಜಿ ಸಚಿವರು
Respected Sir,
I saw your article on vande mataram conflict
in the website. I appriciate your efforts to touch upon these topics so
early in your buisness life.
The article gave an un biased view on the
issue, i really appreiciate that.
I kindly request you to follow true secularism
in all of your articles, unlike most of the english media who are biased
towards pseudo secularism/communism.
I will suggest you to follow the kind of
journalism the vijaya karnataka has started in karnataka which is far
superior to the corresponding media in english. Let this example inspire you
to grow in morals, social work and buisiness.
All the best Vikranth
Karnataka!
Mahesh Prasad
ಓದುಗರ ಪತ್ರಗಳು, ಹಾರೈಕೆ-ಸಲಹೆಗಳು
ನಮಸ್ಕಾರ,
ಸಾಹಸಕ್ಕೆ ಹೆಸರಾದ ನಮ್ಮ
ರವಿರೆಡ್ಡಿಯವರು ಪ್ರಾರಂಭಿಸಿರುವ ವಿಕ್ರಾಂತ ಕರ್ನಾಟಕ ನಮ್ಮಲೆಲ್ಲ
ಒಂದು ಹೊಸ ಬಗೆಯ ಉತ್ಸುಕತೆಯನ್ನು ಮೂಡಿಸಿದೆ. ವಿಕ್ರಾಂತ ಕರ್ನಾಟಕ,
ಪ್ರಖ್ಯಾತ ಪತ್ರಿಕೆಯಾಗಲಿ ಎಂದು ಹಾರೈಸುತ್ತೇನೆ.
ವೆಬ್‌ಸೈಟ್‌ನಲ್ಲಿ ನನ್ನ ಮನಸೆಳೆದದ್ದು ವೀಣಾ ಗೌಡ ಅವರ ಮಹಾತಾಯಿ
ಎಂಬ ಲೇಖನ. ವೀಣಾ ಅವರ ಕಥನ ಶೈಲಿ, ಭಾಷೆಯ ಸರಳತೆ,
ಕಣ್ಣಿಗೆ ಕಟ್ಟುವಂತೆ ಅವರು ಕಡೆದು ನಿಲ್ಲಿಸಿರುವ ಕೊಪ್ಪದ ಚೆಲುವು,
ಆ ಊರನ್ನು ಈಗಲೇ ಹೋಗಿನೋಡಬೇಕೆಂಬ ಆಸೆಯನ್ನು ನನ್ನಲ್ಲಿ
ಮೂಡಿಸಿತು. ಮುದ್ದು ಚೆಲ್ವಿ, ಅವಳ ತಾಯಿಯ ಅದ್ಭುತ ಔದಾರ್ಯ,
ತನ್ನದಲ್ಲದ ಮಗುವಿನ ಬಗ್ಗೆ ಅವಳು ತೋರುತಿದ್ದ ಅಪಾರ ಪ್ರೀತಿ,
ಅವರ ಇಡೀ ಕುಟುಂಬದ ಸಹಕಾರ...ಮನಸ್ಸನ್ನು ಆಳವಾಗಿ ಹೊಕ್ಕು ನನ್ನನ್ನು
ನಾನೇ ಪ್ರಶ್ನಿಸಿಕೊಳ್ಳುವಂತೆ ಮಾಡಿತು. ಇಂತಹ ಹೃದಯಸ್ಪರ್ಶೀ ಲೇಖನವನ್ನು
ಬರೆದ ವೀಣಾ ಅವರಿಗೂ, ಪ್ರಕಟಿಸಿದ ವಿಕ್ರಾಂತ ಕರ್ನಾಟಕದ ಸಂಪಾದಕರಿಗೂ
ನನ್ನ ವಂದನೆಗಳು.
ಅಲಮೇಲು ಅಯ್ಯಂಗಾರ್,
ಸಾರಾಟೋಗ, ಕ್ಯಾಲಿಫೋರ್ನಿಯ
*
ಸಂಪಾದಕರೆ,
ತಾವು ಮತ್ತು ವಿಕ್ರಾಂತ ತಂಡದವರೊಂದಿಗೆ ಪ್ರಾರಂಭಿಸಿದ `ವಿಕ್ರಾಂತ
ಕರ್ನಾಟಕ ?
ಪತ್ರಿಕೆ ಸೊಗಸಾಗಿದೆ. ನಿಜಕ್ಕೂ ಭಂಡ ಧೈರ್ಯ. ಸಂಪಾದಕೀಯದಲ್ಲಿ
ಅಳುಕಿದ್ದರೂ ಸ್ಪಂದಿಸುವ ಮಾತು, ಪ್ರತಿಪುಟವೂ ನವ್ಯ ವರ್ಣರಂಜಿತ
ವಿಷಯ ಪ್ರಥಮ ಸಂಚಿಕೆಯಲ್ಲೇ ಕಂಡು ಬರುತ್ತದೆ. ಇದೊಂದು
ಯಶಸ್ವಿ ಪತ್ರಿಕೆ ಆಗುವುದು ಖಂಡಿತ. ಜನಮನ ಗೆಲ್ಲಲಿ. ಆರು ವರ್ಷದವರಿಂದ
ನೂರು ವರ್ಷದವರೂ ಮೆಚ್ಚಿಗೆ ಪಡೆಯಲಿ.
ಬಸವರಾಜ.ಶಿ.ಬಾಳೇಶ್ವರಮಠ
*
ಮಾನ್ಯರೆ,
ತಾವು ಅಭಿಮಾನದಿಂದ ಕಳುಹಿಸಿದ ವಿಕ್ರಾಂತ ಕರ್ನಾಟಕ
ಕನ್ನಡ ವಾರಪತ್ರಿಕೆ ಬಿಡುಗಡೆ ಸಮಾರಂಭ ಹಾಗೂ ವೆಬ್‌ಸೈಟ್
ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆ ನನಗೆ ತಲುಪಿದೆ.
ಪೂರ್ವ ನಿಯೋಜಿತ ಕಾರ್ಯಕ್ರಮಗಳ ಪ್ರಯುಕ್ತ
ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗದ್ದರಿಂದ ಶುಭ ಹಾರೈಕೆ ಪತ್ರವನ್ನು
ಕಳುಹಿಸುತ್ತಿದ್ದೇನೆ.
ಕೆ.ವಿ.ಆರ್.ಠ್ಯಾಗೂರ್,ಐ.ಪಿ.ಎಸ್
ಆಯುಕ್ತರು ವಾರ್ತಾ ಇಲಾಖೆ.
*
Hi,
I happy to see this wonderful
edition and exclusive news. Wish you all the best.
Regards
Lakshmikanth,
Bangalore
*
Dear Sir,
We are enamored by the contents
of the magazine and the credible information. But your
magazine is so much focused on capturing the eyes of the
adults, that you seem to have forgotten the children who are
always curious to know and see what their parents are
reading and browsing and would like to do the same. I mean
it would be good and great if you can provide some insights
to children's thoughts and sections.
Whenever am busy browsing your
site ... my son runs up to me asking for beautiful
pictures.....and I begin to look out for them and i am
surprised to see there's none to show the tiny one.
It would be very righteous if
you can include some puzzles, mind benders, crosswords, the
achievements of the tiny tots, their paintings, their prose
or poetry (written by them) which you can get from any
school or even the local children. You can also include some
cartoon with morals and pictures of nature. It would be even
more impressive if you can have the child's column example, "putanigala loka" or "putanigala jothaelle" or "chinnara mana"
anything of your choice.
The rest of it is all
wonderful. All the very best.
Regards,
Shilpa,
Bangalore.
*
Hello,
I have gone through Vikranta
Karnataka, I think u need to focus on youth. At least one is
made to think your point of view then u can notice
remarkable changes.
Vanaja,
Bommasandra
ಜಯಮಾಲಮ್ಮಂಗೆ ಮಾಡಲು ಬೇರೆ ಕೆಲಸ ಇಲ್ವಾ?
ನಮಸ್ಕಾರ,
ಈಯಮ್ಮ ಜಯಮಾಲಮ್ಮನಿಗೆ ಮಾಡಲು ಬೇರೆ ಕೆಲಸ ಇಲ್ವ ? ಕೆಲಸ ಇಲ್ಲದ ಬಡಿಗ
ಏನೋ ಕೆತ್ತಿದನಂತೆ. ಹಾಗೆ ಇವಳು ಮಾಡಬೇಕಾದ ಕೆಲಸಗಳು ಬಹಳಷ್ಟು ಇದ್ದರೂ ಸುಮ್ಮನೇ
ಪ್ರಚಾರ ಪಡೆಯಲು ೨೦ ವರ್ಷದ ಹಳೆ ಕತೆಗೆ ಸುಣ್ಣ ಬಣ್ಣ ಹಚ್ಚುತ್ತಾ ಇದ್ದಾಳೆ. ಈ ಮಹಾ
ತಾಯಿಗೆ ಅಷ್ಟು ಪ್ರಚಾರ ಬೇಕಿದ್ದರೆ ಕನ್ನಡ ನಾಡು ನುಡಿ ಏಳಿಗೆ ಕಾರ್‍ಯಕ್ರಮ
ಹಾಕಿಕೊಳ್ಳಲಿ. ಇಂತವಳು ಕನ್ನಡತಿ ಎಂದು ಹೇಳಿಕೊಳ್ಳಲು ನಾಚಿಕೆ ಆಗುತ್ತೆ.
-ಗಿರೀಶ್ ಅಂದಲಗಿ
*
ಪ್ರಕಾಶಕರಿಗೆ ನಮಸ್ಕಾರ
ಜಿ ಎಸ್ ಶಿವರುದ್ರಪ್ಪನವರ ಮೆಚ್ಚಿನ ಹತ್ತು ಕವನಗಳನ್ನು ಓದುವ ಆಸೆಯಿಂದ
ಕುತೂಹಲದಿಂದ ಜಾಲೆಯ ಪುಟವನ್ನು ತೆರೆದೆ.
ಅಲ್ಲಿದ್ದುದು ಬರಿ ಕವನಗಳ ಶಿರೋನಾಮೆ ಮಾತ್ರ. ಅತ್ಯಂತ ನಿರಾಶೆಯಾಯಿತು.
ವಿಶ್ವಾಸದಿಂದ
-ಮಹೇಂದ್ರ
ಬೆರ್ಲಿನ್, ಜೆರ್ಮನಿ
(ಓದುವ ಆಸಕ್ತಿ ಹುಟ್ಟಿಸುವುದೇ ಈ ಪುಟದ ಉದ್ದೇಶ -ಸಂ)
*
ವಿಕ್ರಾಂತ ಪ್ರಕಾಶನಕ್ಕೆ ಓದುಗರ ಶುಭಾಶಯಗಳು, ಸಲಹೆಗಳು
ಹಲೋ,
ವಿಚಾರ ಮಂಟಪ.ನೆಟ್‌ನ ರವಿಕೃಷ್ಣಾ ರೆಡ್ಡಿಯವರು ತಮ್ಮದೇ ಆದ ಕನ್ನಡ ಪತ್ರಿಕೆಯನ್ನು
ಹೊರ ತರುತ್ತಿದ್ದಾರೆ, ಅವರಿಗೆ ಶುಭವಾಗಲಿ.
-ವೇದಮೂರ್ತಿ, ಕೊಗಲೂರು
*
ನಮಸ್ಕಾರ,
ನಿಮ್ಮ ವೆಬ್ ಸೈಟ್ ನೋಡಿದೆ. ಚೆನ್ನಾಗಿದೆ. ಆಲ್‌ದ ಬೆಸ್ಟ್.
-ಸತ್ಯಪ್ರೇಮ ಪ್ರಸಾದ್,
ಐಬಿಎಂ ಗ್ಲೋಬಲ್ ಸರ್ವಿಸಸ್ ಇಂಡಿಯಾ ಲಿಮಿಟೆಡ್,
ಬೆಂಗಳೂರು
*
ನಮಸ್ಕಾರ,
ವಿಕ್ರಾಂತ ಕರ್ನಾಟಕದ ಟ್ರಯಲ್ ಎಡಿಷನ್ ಚೆನ್ನಾಗಿದೆ. ಕಂಟೆಂಟ್ ಸಹ ಚೆನ್ನಾಗಿದೆ. ನಿಮಗೆ
ಗುಡ್‌ಲಕ್.
-ಸುಧೀಂದ್ರ ದೇಶಪಾಂಡೆ
*
ನಮಸ್ಕಾರ,
ಪ್ರಾಯೋಗಿಕ ಆವೃತ್ತಿ ಚೆನ್ನಾಗಿ ಬರುತ್ತಿದೆ. ವಿಕ್ರಾಂತ ಕರ್ನಾಟಕಕ್ಕೆ ಜಯವಾಗಲಿ.
ಧನ್ಯವಾದಗಳೊಂದಿಗೆ,
ಸತೀಶ್ ಬಂಡಿಮಠ
*
Dear sir,
This is to bring to your picture, that the
jokes published under your "NageBugge"
section in Vikranta Karnataka are really bad.
Hope to see some good humorous jokes
that can cater to the tastes on Intellectual
Kannadigas around the globe.
I really appreciate the other contents in your
website which none of the Kannada news
websites can match.
I wish you all the best for your future
endeavors
Regards
-Madan Hegde
San Jose,USA
*
Dear Madam,
Many congratulations on your new website. I've
already begun to visit it daily.
Regards
-Purohita
*
Dear Editor,
As I'm regular reader and as a well wisher I
just wanted to bring few things to your attention:
Though I know how difficult to run a weekly, I
thought the readers may not tolerate typos, grammar, wrong proper names,
silly mistakes in basic info, etc which might be happening due to oversight
or in a hurry. The DTP and printing technology is so advanced, there is no
chance for such blunders. I hope you are taking necessary measure in your
regular editions. Probably you might have observed by this time in these
trial editions and hence I'm not giving those examples.
This is information age, there is so much of
competition. Providing high quality, impartial, logical, scientific and
nearest to the truth analysis are the keys. Your team is having good
experience. Sometimes you may need to tame it towards quality and give much
emphasis on it. Also better to avoid the boggiest style of throwing opinions
which should not be a style of any journalist. Recently all major papers are
doing the gimmick of good titles with proper language without any content
just to get reader's attention. Without being partial to any isms,
religions, parties, etc is the real challenge. As it's a weekly, you can
cover lot of issues like rural v/s urban talent & life, tradition v/s global
thinking, desi v/s western developments in scientific, industrial,
agricultural, biomedical fields, as well as literature and visual medias,
etc. I hope it will come out as special kind in Karnataka and shine soon. I
wish you all the best!
Thanks and Regards
-Jay Harthikote
SandleNet, Inc
*
Hi,
What I think is it is better to give some better name than Vikrant
Karnataka. Reason is Vijaya Karnataka is already a popular paper. Some other
catchy name normal people can remember and identify this magazine.
-Rajeshhegde
*
Dear sir,
The so called problem arrives when they come
to know that a woman entered the shrine long before. My question is how the
malabaries reacted if there is a woman from kerala did this if not jayamala.
Everybody concerned knows Jaya entered
temple, why they are making issue? b cos she is from karnataka ?
-Arenahally Shivashankar Dharmendra kumar
*
Hello,
Yes!! I went through the site. It looks
promising. Many portals wont bother to update their contents often. I hope
you would be keeping the site live.
The "Chitra-V Chitra" column is also nice. It includes both news and
pictures (Pictures need to be added more).
My another expectation from you is increase the no.of recipes in the "Paka
Shastra" Column. But I liked it because whatever there are rare recipes.
Continue to put good recipes like this.
Best of luck.
Sirigannadam Gelge
-Shyam
*
Dear Ms. Rajalakshmi,
I read the story written by your peon Kumar. I really appreciate his
enthusiasm. He deserves our congratulations.
With warm regards,
-Premashekhara, Pondicherry.
* |